ಉಸಿರಾಡಲು ಸಮಯ ಕೊಡಿ, ಒಂದಷ್ಟು ವಿಚಾರ ಹೇಳುತ್ತೇನೆ: ರಾಗಿಣಿ

ಬೆಂಗಳೂರು: ಜೈಲಿನಿಂದ ಹೊರ ಬಂದಿರುವ ನಟಿ ರಾಗಿಣಿ ದ್ವಿವೇದಿ ಇಂದು ಸಿಟಿ ಸಿವಿಲ್ ಕೋರ್ಟ್ ನ ಎನ್‍ಡಿಪಿಎಸ್ ಕೋರ್ಟ್ ಗೆ ಹಾಜರಾದರು. ನ್ಯಾಯಾಲಯಕ್ಕೆ ಹಾಜರಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಾಗಿಣಿ, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಹೊಂದಿದ್ದೇನೆ. ಶೀಘ್ರದಲ್ಲಿಯೇ ಒಂದಷ್ಟು ವಿಚಾರ ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಕೋರ್ಟ್ ಪ್ರಕ್ರಿಯೆ ಹಿನ್ನೆಲೆ ಬಂದಿದ್ದು, ತನಿಖೆಗೆ ಸಹಕರಿಸುತ್ತಿದ್ದೇವೆ. ನಮ್ಮ ಸ್ಟೋರಿ ಏನಿದೆ? ಏನು ನಡೆಯುತ್ತಿದೆ? ಅದನ್ನ ಯಾರು ಕೇಳಿ ಬೇಕೆಂತಿನಿಲ್ಲ. ಈಗಾಗಲೇ ಮಾಧ್ಯಮಗಳು ಕೆಲ ಸುದ್ದಿಗಳನ್ನ ಬಿತ್ತರಿಸಿವೆ. ಹೇಳಬೇಕಾದವರು ಎಲ್ಲ ಹೇಳಿದ್ದಾರೆ. ಪ್ರಕರಣದ ಬಗ್ಗೆ ಮಾತನಾಡಲು ಇಷ್ಟಪಡಲು ಇಷ್ಟವಿಲ್ಲ. ಸ್ವಲ್ಪ ಉಸಿರಾಡಲು ಸಮಯ ನೀಡಿದ್ರೆ ಎಲ್ಲದರ ಕುರಿತು ಮಾತನಾಡುತ್ತೇನೆ. ಕಷ್ಟದಿನಗಳಿಂದ ಸದ್ಯ ಹೊರ ಬಂದಿದ್ದೇವೆ ಎಂದು ಹೇಳಿದರು.

ರಾಗಿಣಿ ದ್ವಿವೇದಿ ಯಾರು? ಏನು? ಅನ್ನೋದು ಜನರಿಗೆ ಗೊತ್ತು. 12 ವರ್ಷಗಳಿಂದ ಕರ್ನಾಟಕದಲ್ಲಿದ್ದೇನೆ. ಪ್ರಕರಣದಲ್ಲಿ ಸಂಜನಾ ಮತ್ತು ರಾಗಿಣಿ ಬಲಿಪಶು ಆದ್ರಾ ಪ್ರಶ್ನೆಗೆ ಉತ್ತರಿಸಿದ ರಾಗಿಣಿ ಹೌದು, ತಾವು ಮುಗ್ಧೆ ಅಂತ ಹೇಳಿದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ನಟಿ ಸಂಜನಾ ಗಲ್ರಾನಿ ಮತ್ತು ರಾಗಿಣಿ ಮುಖಾಮುಖಿಯಾದರು. ಒಬ್ಬರನ್ನೊಬ್ರು ಅಪ್ಪಿಕೊಂಡು ಮೌನದಲ್ಲಿಯೇ ಕುಶಲೋಪಚರಿ ವಿಚಾರಿಸಿದರು. ನ್ಯಾಯಾಲಯ ವಿಚಾರಣೆಯನ್ನ ಫೆಬ್ರವರಿ 15ಕ್ಕೆ ಮುಂದೂಡಿದೆ.

https://www.youtube.com/watch?v=gXMB0ygLjUA

Comments

Leave a Reply

Your email address will not be published. Required fields are marked *