ಉಸಿರಾಡಲು ಕಷ್ಟಪಡುತ್ತಿದ್ದ ಮೀನಿನ ಬಾಯಿಗೆ ಬೀಡಿ ಇರಿಸಿ ವಿಕೃತಿ

– ಕಾರ್ಮಿಕರ ವಿಕೃತ ಮನಸ್ಸಿಗೆ ಜನರ ಛೀಮಾರಿ

ಕಾರವಾರ: ಪ್ರಾಣ ಉಳಿಸಿಕೊಳ್ಳಲು ಮೀನು ಬಾಯಿ ತೆಗೆದ್ರೆ ಕೆಲ ವಿಕೃತ ಮನಸ್ಸುಗಳು ಬೀಡಿ ಇರಿಸಿ ವಿಕೃತಿ ಮೆರೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ವಿಕೃತ ಮನಸ್ಸುಗಳ ವಿರುದ್ಧ ಕಿಡಿಕಾರಿದ್ದಾರೆ.

ಕಾರವಾರದ ಬೈತಕೋಲ ಮೀನುಗಾರಿಕೆ ಬಂದರಿನಲ್ಲಿ ಈ ಘಟನೆನಡೆದಿದೆ ಎಂದು ಹೇಳಲಾಗುತ್ತಿದೆ. ಕಾರ್ಮಿಕರು ಹಿಂದಿ ಮಾತನಾಡುವುದನ್ನ ನೀವು ವೀಡಿಯೋದಲ್ಲಿ ಕೇಳಬಹುದಾಗಿದೆ. ಮೀನುಗಾರರು ಬೊಂಡಾಸ ಹೆಸರಿನ ಮೀನು ಹಿಡಿದಿದ್ದಾರೆ. ಮೀನು ತನ್ನ ಜೀವ ಉಳಿಸಿಕೊಳ್ಳುವದಕ್ಕಾಗಿ ಬಾಯಿ ತೆಗೆದು ಉಸಿರಾಡುತ್ತಿತ್ತು. ಇದೇ ವೇಳೆ ಅಲ್ಲಿದ್ದ ಕಾರ್ಮಿಕನೋರ್ವ ಬೀಡಿ ಹಚ್ಚಿ ಮೀನಿನ ಬಾಯಿಗೆ ಇಟ್ಟಿದ್ದಾನೆ. ಈ ಎಲ್ಲ ದೃಶ್ಯಗಳನ್ನು ಕೆಲವರು ಮೊಬೈಲಿನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಬೋಟ್ ಕಾರ್ಮಿಕರ ವರ್ತನೆ ಕಂಡ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಮೀನಿನ ಜೊತೆ ಅಮಾನವೀಯ ವರ್ತನೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

Comments

Leave a Reply

Your email address will not be published. Required fields are marked *