ಉಡುಪಿಯಲ್ಲಿ 55 ಮಂದಿಗೆ ಕೊರೊನಾ- ಮಹಾರಾಷ್ಟ್ರದ್ದೇ ಮಹಾ ಪಾಲು

ಉಡುಪಿ: ಜಿಲ್ಲೆಯಲ್ಲಿ ಇಂದು ಐವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 55ಕ್ಕೆ ಏರಿದೆ. ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಉಡುಪಿಯಲ್ಲಿ ಜಾಸ್ತಿಯಾಗುತ್ತಿದೆ.

ಮಹಾರಾಷ್ಟ್ರದಿಂದ ಬಂದ ನಾಲ್ವರಲ್ಲಿ ಇಂದು ಸೋಂಕು ಪತ್ತೆಯಾಗಿದೆ. ದುಬೈನಿಂದ ಬಂದ ವ್ಯಕ್ತಿಗೆ ಸೋಂಕು ತಗುಲಿದೆ. ಉಡುಪಿ ಜಿಲ್ಲೆಗೆ ಮಹಾರಾಷ್ಟ್ರದಿಂದ ಸುಮಾರು 7 ಸಾವಿರಕ್ಕಿಂತಲೂ ಹೆಚ್ಚು ಜನ ಬಂದಿದ್ದಾರೆ. ಹೊರ ರಾಜ್ಯದಿಂದ ಬಂದಿದ್ದ ಇನ್ನೂರು ಜನರ ಕೊರೊನಾ ಟೆಸ್ಟ್ ಗಾಗಿ ಇಂದು ಗಂಟಲ ದ್ರವವನ್ನು ಲ್ಯಾಬ್​ಗೆ ಕಳಿಸಲಾಗಿದ್ದು, ಐದು ಮಂದಿಯ ವೈದ್ಯಕೀಯ ವರದಿಯಲ್ಲಿ ಕೋವಿಡ್-19 ಇರುವುದು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದ ಜನರೇ ಉಡುಪಿ ಜಿಲ್ಲೆಗೆ ಹೆಚ್ಚು ತಲೆನೋವು ತರುತ್ತಿದ್ದು, ಇವತ್ತು ಬಂದವರಲ್ಲಿ ಓರ್ವ ದುಬೈನಿಂದ ಬಂದ ವ್ಯಕ್ತಿಗೆ ಸೋಂಕು ತಗುಲಿದೆ. ಇದನ್ನೂ ಓದಿ: ‘ನಮ್ಮನ್ನು ಬರಲು ಬಿಡಿ, ಇಲ್ಲಾಂದ್ರೆ ನಿಮ್ಮ ಕಥೆ ಅಷ್ಟೇ’- ಮುಂಬೈ ಕಿಡಿಗೇಡಿಗಳಿಂದ ಡಿಸಿಗೆ ಬೆದರಿಕೆ

ಹೆಚ್ಚು ಮಂದಿಯ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸುವ ಉದ್ದೇಶ ಇರುವುದರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆ, ದಕ್ಷಿಣ ಕನ್ನಡ ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಗೆ ಮಾದರಿಗಳನ್ನು ಕಳುಹಿಸಲಾಗುತ್ತಿದೆ. ಹಾಗಾಗಿ ಹದಿನಾಲ್ಕು ದಿನಕ್ಕೆ ಹೊರರಾಜ್ಯದಿಂದ ಬಂದವರಿಗೆ ಕಾರಂಟೈನ್ ಮುಗಿಯುವುದಿಲ್ಲ. ಕೊರೊನಾ ಸೋಂಕು ನೆಗೆಟಿವ್ ಬಂದ ನಂತರ ಅವರನ್ನು ಕ್ವಾರಂಟೈನ್‍ನಿಂದ ರಿಲೀಸ್ ಮಾಡುವುದಾಗಿ ಜಿಲ್ಲಾಧಿಕಾರಿ ಡಿಸಿ ಜಗದೀಶ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *