ಉಡುಪಿಯಲ್ಲಿ ಇಂದು 72 ಪಾಸಿಟಿವ್- 20 ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ

ಉಡುಪಿ: ಜಿಲ್ಲೆಯಲ್ಲಿ ಇಂದು 72 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1733ಕ್ಕೆ ಏರಿಕೆ ಎಂದು ಡಿಎಚ್‍ಒ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದರು.

ಉಡುಪಿ ತಾಲೂಕು 16, ಕುಂದಾಪುರ 41, ಕಾರ್ಕಳ 15 ಮಂದಿಯಲ್ಲಿ ಸೋಂಕು ದೃಢವಾಗಿದೆ. ಕೊರೊನಾ ಪೀಡಿತರ ಪೈಕಿ ಇಂದು 40 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಸದ್ಯಕ್ಕೆ ಒಟ್ಟು 370 ಸಕ್ರಿಯ ಪ್ರಕರಣ ಚಾಲ್ತಿಯಲ್ಲಿದೆ ಎಂದು ಡಿಎಚ್‍ಒ ತಿಳಿಸಿದರು.

ಜಿಲ್ಲೆಯಲ್ಲಿ 20 ಮಂದಿ ಕೊರೊನಾ ಪೀಡಿತರಿಗೆ ಮನೆಯಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹತ್ತರಿಂದ ಐವತ್ತು ವರ್ಷದ ಒಳಗಿನವರಿಗೆ ಮಾತ್ರ ಮನೆ ಚಿಕಿತ್ಸೆಗೆ ಅವಕಾಶ ಇದೆ ಎಂದು ಡಾ.ಸುಧೀರ್ ಚಂದ್ರ ಮಾಹಿತಿ ನೀಡಿದರು. ಮನೆ ಚಿಕಿತ್ಸೆಗೆ ಮುನ್ನ ಜಿಲ್ಲಾ ವೈದ್ಯಾಧಿಕಾರಿಗಳ ತಂಡ ಮನೆಯನ್ನು ಸಮೀಕ್ಷೆ ಮಾಡುತ್ತದೆ. ಐಸೋಲೇಶನ್‍ಗೆ ಸೂಕ್ತ ವ್ಯವಸ್ಥೆಗಳು ಇದ್ದಲ್ಲಿ ಮಾತ್ರ ಮನೆ ಚಿಕಿತ್ಸೆಗೆ ಅವಕಾಶ ಇದೆ. ವಿಡಿಯೋ ಕಾಲ್ ಮೂಲಕ ರೋಗಿಯನ್ನು ಮೇಲ್ವಿಚಾರಣೆ ಮಾಡುತ್ತೇವೆ. ರೋಗ ಲಕ್ಷಣಗಳು ಉಲ್ಬಣವಾದರೆ ತಕ್ಷಣ ಆಸ್ಪತ್ರೆಗೆ ಮಾಹಿತಿ ನೀಡಬೇಕು ಎಂದರು.

Comments

Leave a Reply

Your email address will not be published. Required fields are marked *