ಉಕ್ಕಿ ಹರಿಯುವ ವೇದಗಂಗಾ ನದಿಯಲ್ಲಿ ಯುವಕರ ಹುಚ್ಚಾಟ

ಚಿಕ್ಕೋಡಿ(ಬೆಳಗಾವಿ): ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಚಿಕ್ಕೋಡಿಯಲ್ಲಿ ಉಕ್ಕಿ ಹರಿಯುವ ವೇದಗಂಗಾ ನದಿಯಲ್ಲಿ ಯುವಕರು ತಮ್ಮ ಹುಚ್ಚಾಟ ಮೆರೆದಿದ್ದಾರೆ.

ರಾಷ್ಟ್ರಿಯ ಹೆದ್ದಾರಿ 4ರ ಮೇಲೆ ವೇದಗಂಗಾ ನದಿ ಉಕ್ಕಿ ಹರಿಯುತ್ತಿದೆ. ನಿಪ್ಪಾಣಿಯ ಯಮಗರ್ಣಿ ಬಳಿ ಉಕ್ಕಿ ಹರಿಯುತ್ತಿರುವ ವೇದಗಂಗಾ ನದಿ ಪ್ರವಾಹದಲ್ಲಿ ಸಿಲುಕಿರುವ ಓಮ್ನಿ ವಾಹನ ತರಲು ಹೋಗಿ ಯುವಕರು ಹುಚ್ಚಾಟ ತೋರಿದ್ದಾರೆ.

ಲಾರಿ ಮೂಲಕ ಹಗ್ಗ ಬಳಸಿ ಪ್ರಾಣದ ಹಂಗು ತೊರದು ಯುವಕರು ನದಿಗೆ ಇಳಿದಿದ್ದಾರೆ. ಮೊದಲು ಯುವಕರಿಗೆ ನದಿಗೆ ಇಳಿಯಲು ಪೊಲೀಸರು ಅವಕಾಶ ಮಾಡಿ ಕೊಟ್ಟಿದ್ದಾರೆ. ಬಳಿಕ ಮಾಧ್ಯಮಗಳ ಕ್ಯಾಮೆರಾ ನೋಡಿ ಯುವಕರನ್ನ ಹೊರ ಕರೆದಿದ್ದಾರೆ.

ಉಕ್ಕಿ ಹರಿಯುವ ನೀರಿನಲ್ಲಿ ಓಮ್ನಿ ವಾಹನದವರೆಗೂ ಹೋಗಿ ಪೊಲೀಸರ ನಿರಾಕರಣೆಯ ಕಾರಣ ಬರಿಗೈಯಲ್ಲಿ ಯುವಕರು ವಾಪಸ್ ಬಂದಿದ್ದಾರೆ. ಇದನ್ನೂ ಓದಿ: ದಿವ್ಯಾ ಸುರೇಶ್‍ಗೆ ಗೊಂದಲ – ಕಾರಣವೇನು?

Comments

Leave a Reply

Your email address will not be published. Required fields are marked *