ಈ ಫೋಟೋಗಳಿಗಿಂತಲೂ ನಾನು ಚೆನ್ನಾಗಿದ್ದೇನೆ- ವರ್ಷದ ಬಳಿಕ ರಮ್ಯಾ ಪೋಸ್ಟ್

ಬೆಂಗಳೂರು: ಸುದೀರ್ಘ ಕಾಲದಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಚಂದನವನದ ಪದ್ಮಾವತಿ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಗುರುವಾರ ಇನ್‍ಸ್ಟಾಗ್ರಾಂ ಸ್ಟೇಟಸ್‍ನಲ್ಲಿ ಡಿಫೆರೆಂಟ್ ಆಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಇದೀಗ ಆ ಫೋಟೋಗಳನ್ನು ಫೇಸ್‌ಬುಕ್, ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

ರಮ್ಯಾ ಇನ್‍ಸ್ಟಾಗ್ರಾಂನಲ್ಲಿ 2019ರ ಮೇ ತಿಂಗಳಲ್ಲಿ ಕೊನೆಯ ಬಾರಿಗೆ ಪೋಸ್ಟ್ ಹಾಕಿದ್ದರು. ಈಗ ಒಂದು ವರ್ಷ ಕಳೆದ ನಂತರ ಮತ್ತೆ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಇನ್‍ಸ್ಟಾಗ್ರಾಂ ರೀ ಎಂಟ್ರಿ ಕೊಟ್ಟಿದ್ದಾರೆ. ಸುಮಾರು 10 ವಿಭಿನ್ನವಾದ ಸೆಲ್ಫಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಈ ಫೋಟೋಗಳಿಗಿಂತಲೂ ನಾನು ಚೆನ್ನಾಗಿದ್ದೇನೆ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.

“ನಾನು ಕೊನೆಯ ಪೋಸ್ಟ್ ಹಾಕಿದ್ದ ನಂತರ ಒಂದು ವರ್ಷಕ್ಕೂ ಸ್ವಲ್ಪ ಹೆಚ್ಚು ಸಮಯ ಕಳೆದಿದೆ. ಮರಗಳು, ಪಕ್ಷಿಗಳು, ಪುಸ್ತಕಗಳು ಮತ್ತು ನನ್ನ ನಾಯಿಗಳ ಫೋಟೊಗಳ ಮೂಲಕ ನಿಧಾನವಾಗಿ ಸಾಮಾಜಿಕ ಜಾಲತಾಣದಲ್ಲಿ ತೊಡಗಿಕೊಳ್ಳಲು ಶುರುಮಾಡಿದ್ದೇನೆ” ಎಂದು ರಮ್ಯಾ ಹೇಳಿಕೊಂಡಿದ್ದಾರೆ.

“ಅಭಿಮಾನಿಗಳು ನಿಮ್ಮನ್ನು ನೋಡಿ ತುಂಬಾ ದಿನಗಳಾಗಿವೆ. ಒಂದು ಸೆಲ್ಫಿ ಪೋಸ್ಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ಆಗ ನಾನು ಕೂಡ ಯಾಕಾಗಬಾರದು ಎಂದು ಯೋಚಿಸಿದೆ. ಆದರೆ ನಾನು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ವಿಫಲಳಾದೆ. ಕ್ಯಾಮೆರಾ ಮುಂದೆ ನಿಂತು ಪೋಸ್ ಕೊಡುವುದು ನನಗೆ ಏಲಿಯನ್ ರೀತಿ ಅನಿಸಿತು” ಎಂದರು.

ಕೆಲವು ಪ್ರಯತ್ನಗಳ ನಂತರ ಸೆಲ್ಫಿ ತೆಗೆದುಕೊಳ್ಳುವುದನ್ನು ಬಿಟ್ಟು ಬಿಟ್ಟೆ. ನಂತರ ನಾನು ಸೆಲ್ಫಿಯಲ್ಲಿ ನನ್ನ ನಾಯಿಗಳನ್ನೂ ಸೇರಿಸಿಕೊಳ್ಳಲು ಪ್ರಯತ್ನಿಸಿದೆ. ಯಾಕೆಂದರೆ ನಾನೊಬ್ಬಳೇ ಸೆಲ್ಫಿ ತೆಗೆದುಕೊಳ್ಳಲು ನನಗೆ ಕಷ್ಟ ಮತ್ತು ಕಿರಿಕಿರಿ ಆಯಿತು ಎಂದಿದ್ದಾರೆ.

ಹೀಗಾಗಿ ನನ್ನ ಹಿಂದಿನ ಕೆಲವು ಸೆಲ್ಫಿಗಳನ್ನು ಪೋಸ್ಟ್ ಮಾಡಲು ನಿರ್ಧರಿಸಿದೆ. ನನ್ನ ಫೋನ್‍ನಲ್ಲಿರುವ ಸೆಲ್ಫಿಗಳು ಹೀಗೆ ಕಾಣಿಸುತ್ತಿವೆ. ಇದು ವಿಶ್ರಾಂತಿಯಲ್ಲಿರುವ ನನ್ನ ಮುಖ ಎಂದು ನಾನು ಖಚಿತಪಡಿಸುತ್ತೇನೆ. ಗಮನಿಸಿ, ಈ ಫೋಟೋಗಳನ್ನು ಫೋಟೊಶಾಪ್ ಮಾಡಿಲ್ಲ. ಆದರೆ ನಾನು ಕೆಲ ಫೋಟೋವನ್ನು ಕ್ರಾಪ್ ಮಾಡಿರಬಹುದು. ಹಾಗೆಯೇ ದಯವಿಟ್ಟು ಗಮನಿಸಿ, ಈ ಫೋಟೊಗಳಿಗಿಂತಲೂ ನಾನು ಚೆನ್ನಾಗಿದ್ದೇನೆ” ಎಂದು ರಮ್ಯಾ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

https://www.instagram.com/p/CCtvuijltWx/?igshid=41yttubro4kz

Comments

Leave a Reply

Your email address will not be published. Required fields are marked *