– ಊಟ ಇಲ್ದೇ ಇಲ್ಲಿ ಕೆಲ್ಸ ಮಾಡ್ತಿರೋದು ಕಾಣಲ್ವಾ?
ಬೆಂಗಳೂರು: ಇಂದು ಲಾಕ್‍ಡೌನ್ ಇದ್ದರೂ ಅನಾವಶ್ಯಕವಾಗಿ ರಸ್ತೆಗೆ ಇಳಿದಿದ್ದ ಬೈಕ್ ಸವಾರನ ಮೇಲೆ ಸಬ್ ಇನ್‍ಸ್ಪೆಕ್ಟರ್ ಫುಲ್ ಗರಂ ಆಗಿದ್ದಾರೆ.
ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಪೊಲೀಸರು ಅನಾವಶ್ಯಕವಾಗಿ ರಸ್ತೆಗೆ ಇಳಿದವರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದರು. ಈ ವೇಳೆ ಬಂದ ಬೈಕ್ ಸವಾರನೋರ್ವ ಹೊರಗೆ ಬಂದಿದ್ದಕ್ಕೆ ಪೊಲೀಸರ ಮುಂದೆ ಸೂಕ್ತ ಕಾರಣ ನೀಡಿಲ್ಲ. ಪೊಲೀಸರು ಬೈಕ್ ವಶಪಡಿಸಿಕೊಳ್ಳಲು ಮುಂದಾದ ವೇಳೆ ಸವಾರ್ ಕಿರಿಕ್ ಮಾಡಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಸ್ಥಳದಲ್ಲಿದ್ದ ಎಸ್‍ಐ ಕಾನೂನುಗಿಂತ ದೊಡ್ಡವನ ನೀನು. ನಾನ್ ರಿಪೋರ್ಟ್ ಕೊಡ್ತೀನಿ. ಈ ನನ್ಮಗನ ಮೇಲೆ ಎಫ್‍ಐಆರ್ ಮಾಡ್ರಿ. ಕೀ ಕೊಡು ಅಂದ್ರೆ ಗಾಂಚಾಲಿ ಮಾಡ್ತಿಯಾ? ಬೆಳಗಿನಿಂದ ಊಟ ಇಲ್ಲದೇ ಕೆಲಸ ಮಾಡ್ತಾ ಇದ್ದೀವಿ. ನಾವು ಕೆಲಸ ಮಾಡೋದು ನಿನಗೆ ತಮಾಷೆನಾ ಎಂದು ಕೋಪಗೊಂಡು ಕ್ಲಾಸ್ ತೆಗೆದುಕೊಂಡಿದ್ದಾರೆ.

ಕೊನೆಗೆ ಸವಾರನನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ರಾಜ್ಯದಲ್ಲಿ ಕೊರೊನಾ ತಡೆಗಾಗಿ ಸರ್ಕಾರ ಸಂಡೇ ಲಾಕ್‍ಡೌನ್ ಮೊರೆ ಹೋಗಿದೆ. ಸೋಮವಾರ ಬೆಳಗಿನ ಜಾವ ಯಾರು ಹೊರಗೆ ಅನಗತ್ಯವಾಗಿ ಬರಕೂಡದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Leave a Reply