ಈಶ್ವರಪ್ಪ, ಶೆಟ್ಟರ್ ಸೇರಿ ಹಿರಿಯರಿಗೆ ಕೊಕ್ – ಯುವಕರು, ಹೊಸಬರಿಗೆ ಆದ್ಯತೆ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಕೊಟ್ಟ ಬೆನ್ನಲ್ಲೇ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮುಂದಿನ ಸಿಎಂ ಯಾರು ಎನ್ನುವ ಕುತೂಹಲದ ಮಧ್ಯೆಯೇ ಕ್ಯಾಬಿನೆಟ್ ಲೆಕ್ಕಾಚಾರ ಕೂಡ ಜೋರಾಗಿದೆ. 40:60ರ ಸೂತ್ರ ಅಂದ್ರೆ ಶೇ.40ರಷ್ಟು ಮಂದಿ ಹಿರಿಯರು, ಶೇ.60ರಷ್ಟು ಮಂದಿ ಯುವ ಮುಖಗಳಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಹೈಕಮಾಂಡ್ ಪ್ಲಾನ್ ಮಾಡಿದೆ ಎನ್ನಲಾಗಿದೆ.

ಈಗಾಗಲೇ ಎಲ್ಲರ ರಿಪೋರ್ಟ್ ಕಾರ್ಡ್ ಹೈಕಮಾಂಡ್ ಕೈನಲ್ಲಿದೆ. ಹೊಸ ಸಂಪುಟದಲ್ಲಿ ಈಶ್ವರಪ್ಪ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಸುರೇಶ್ ಕುಮಾರ್, ಸೋಮಣ್ಣಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಅಲ್ಲದೇ ಕೋಟ ಶ್ರೀನಿವಾಸ್ ಪೂಜಾರಿ, ಲಕ್ಷ್ಮಣ್ ಸವದಿ, ಸಿ.ಸಿ ಪಾಟೀಲ್, ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್ ಕೂಡ ಮತ್ತೆ ಮಂತ್ರಿಯಾಗೋದು ಅನುಮಾನ ಎಂದು ಹೇಳಲಾಗಿದೆ.

ಇದೇ ವೇಳೆ ವಲಸಿಗರಾದ ಗೋಪಾಲಯ್ಯ, ನಾರಾಯಣಗೌಡ, ಶ್ರೀಮಂತ ಪಾಟೀಲ್, ಶಂಕರ್‍ಗೆ ಸಹ ಅರ್ಧ ಚಂದ್ರ ತೋರಿಸುವ ಸಂಭವ ಇದೆ. ಇನ್ನು ಮಂತ್ರಿ ಸ್ಥಾನಕ್ಕೆ ಹಲವರ ಹೆಸರು ಕೇಳಿಬರುತ್ತಿವೆ. ಕೆಲವರು ಈಗಾಗಲೇ ಲಾಬಿ ಕೂಡ ಆರಂಭಿಸಿದ್ದಾರೆ.

ಮಂತ್ರಿಯಾಗಬಹುದಾದ ಕೆಲ ಶಾಸಕರ ಪಟ್ಟಿ ಇಲ್ಲಿದೆ..
* ಬಾಲಚಂದ್ರ ಜಾರಕಿಹೊಳಿ, ಅರಭಾವಿ ಶಾಸಕ
* ಚಂದ್ರಪ್ಪ, ಹೊಳಲ್ಕೆರೆ ಶಾಸಕ
* ಪೂರ್ಣಿಮಾ ಶ್ರೀನಿವಾಸ್, ಹಿರಿಯೂರು ಶಾಸಕಿ
* ಅಪ್ಪಚ್ಚು ರಂಜನ್, ಮಡಿಕೇರಿ ಶಾಸಕ
* ಸುನೀಲ್ ಕುಮಾರ್, ಕಾರ್ಕಳ ಶಾಸಕ
* ರಾಜೂಗೌಡ, ಸುರಪುರ ಶಾಸಕ
* ಪಿ.ರಾಜೀವ್, ಕುಡಚಿ ಶಾಸಕ


* ದತ್ತಾತ್ರೇಯ ಪಾಟೀಲ್, ಕಲಬುರಗಿ ದಕ್ಷಿಣ
* ಸತೀಶ್ ರೆಡ್ಡಿ, ಬೊಮ್ಮನಹಳ್ಳಿ ಶಾಸಕ
* ಮುನಿರತ್ನ, ಆರ್ ಆರ್ ನಗರ ಶಾಸಕ
* ಶಿವನಗೌಡ ನಾಯಕ್, ದೇವದುರ್ಗ ಶಾಸಕ
* ಹಾಲಪ್ಪ ಆಚಾರ್, ಯಲಬುರ್ಗಾ ಶಾಸಕ
* ಕುಮಾರ ಬಂಗಾರಪ್ಪ, ಸೊರಬ ಶಾಸಕ
* ಬಿಸಿ ನಾಗೇಶ್, ತಿಪಟೂರು ಶಾಸಕ
* ಎಂ ಪಿ ಕುಮಾರಸ್ವಾಮಿ, ಮೂಡಿಗೆರೆ ಶಾಸಕ
* ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಶಾಸಕ
* ಎಎಸ್ ಪಾಟೀಲ್ ನಡಹಳ್ಳಿ, ಮುದ್ದೆಬಿಹಾಳ ಶಾಸಕ

Comments

Leave a Reply

Your email address will not be published. Required fields are marked *