ಇವತ್ತು SSLC ಎಕ್ಸಾಂ – ಈ ಬಾರಿ ಭಿನ್ನ, ವಿಶೇಷ ಪರೀಕ್ಷೆ

ಬೆಂಗಳೂರು: ಕೊರೊನಾ ಆತಂಕದ ಮಧ್ಯೆ ಇಂದಿನಿಂದ ಎಸ್‍ಎಸ್‍ಎಲ್‍ಸಿ ಎಕ್ಸಾಂ ಶುರುವಾಗ್ತಿದೆ. ಕೊರೊನಾ ಕಾರಣದಿಂದಾಗಿ ಈ ಬಾರಿ ವಿಭಿನ್ನ ಮತ್ತು ವಿಶೇಷವಾಗಿ ಪರೀಕ್ಷೆ ನಡೆಯಲಿದೆ. 6 ದಿನ ಬದಲಾಗಿ 2 ದಿನ ಅಂದ್ರೆ, ಇವತ್ತು ಮತ್ತು ಜುಲೈ 22ಕ್ಕೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಆತಂಕವಿಲ್ಲದೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ. ಸರ್ಕಾರ ಹಾಗೂ ಎಸ್‍ಎಸ್‍ಎಲ್‍ಸಿ ಬೋರ್ಡ್ ಸಕಲ ರೀತಿಯಲ್ಲೂ ಸಜ್ಜಾಗಿದೆ.

ಮೂರು ಕೋರ್ ವಿಷಯಗಳಿಗೆ ಒಂದೇ ಪ್ರಶ್ನೆ ಪತ್ರಿಕೆಯಲ್ಲಿ ಉತ್ತರ ನೀಡಬೇಕಿದೆ. ವಿದ್ಯಾರ್ಥಿಗಳು ಪುಟಗಟ್ಟಲೇ ಬರೆಯುವಂತಿಲ್ಲ. ಬರೀ ಶೇಡ್ ಮಾಡಿದರಷ್ಟೇ ಸಾಕು. 3 ಕೋರ್ ಸಬ್ಜೆಕ್ಟ್ ವಿಜ್ಞಾನ, ಸಮಾಜ, ಗಣಿತಕ್ಕೆ ಪರೀಕ್ಷೆ ನಡೆಯಲಿದ್ದು, ಪ್ರತಿ ವಿಷಯಕ್ಕೆ ತಲಾ 40 ಅಂಕ ಇರಲಿದೆ. ಬಹು ಆಯ್ಕೆ ಪ್ರಶ್ನೆ ಮಾದರಿಯ ಪ್ರಶ್ನೆಪತ್ರಿಕೆ ಇರಲಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಇದ್ದರೂ ಯಾವುದೇ ವಿದ್ಯಾರ್ಥಿಗಳು ಫೇಲ್ ಇಲ್ಲ ಎಂದು ಸರ್ಕಾರ ಹೇಳಿದೆ.

ಪರೀಕ್ಷೆ ಆರಂಭಕ್ಕೂ ಮುನ್ನ-ನಂತರ ಕೊಠಡಿ ಸ್ಯಾನಿಟೈಸ್ ಮಾಡಲಾಗಿರುತ್ತದೆ. 1 ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಕೂರಲು ಮಾತ್ರ ವ್ಯವಸ್ಥೆ ಕಲ್ಪಿಸಲಾಗಿದ್ದು, ಒಂದು ಡೆಸ್ಕ್ ಗೆ ಒಬ್ಬರೇ ವಿದ್ಯಾರ್ಥಿ ಪರೀಕ್ಷೆ ಬರೆಯಲಿದ್ದಾರೆ. ಜ್ವರ ಸೇರಿ ಅನ್ಯರೋಗದ ಲಕ್ಷಣ ಇದ್ದರೇ ಪ್ರತ್ಯೇಕ ಕೊಠಡಿ ನೀಡಿದ್ರೆ, ಸೋಂಕಿತ ವಿದ್ಯಾರ್ಥಿಗೆ ಕೇರ್ ಸೆಂಟರ್‍ನಲ್ಲೇ ಪರೀಕ್ಷೆ ಅವಕಾಶ ನೀಡಲಾಗಿದೆ.

ರಾಜ್ಯಾದ್ಯಂತ 8,76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದಲ್ಲಿ ಒಟ್ಟು 4,885 ಪರೀಕ್ಷಾ ಕೇಂದ್ರಗಳಿದ್ದು, ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಈಗಾಗಲೇ ಪಬ್ಲಿಕ್ ಟಿವಿ ಮೂಲಕ ವಿದ್ಯಾರ್ಥಿಗಳ ಗೊಂದಲಕ್ಕೆ ಉತ್ತರಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಧೈರ್ಯದಿಂದ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದ್ದಾರೆ. ಇತ್ತ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿ, ಮಕ್ಕಳಲ್ಲಿ ಧೈರ್ಯ ತುಂಬಿದ್ದಾರೆ. ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಆತಂಕ ಬೇಡ, ನಾವಿದ್ದೇವೆ ಅಂತಾ ಪೋಷಕರಿಗೂ ಭರವಸೆ ನೀಡಿದ್ದಾರೆ.

ಒಟ್ಟು ವಿದ್ಯಾರ್ಥಿಗಳು – 8,76,522.
ಬಾಲಕರು – 4,72,607
ಬಾಲಕಿಯರು- 4,03,915.
ವಲಸೆ ವಿದ್ಯಾರ್ಥಿಗಳು – 10693
ಒಟ್ಟು ಪರೀಕ್ಷಾ ಕೇಂದ್ರಗಳು – 4885
ಒಟ್ಟು ಪರೀಕ್ಷಾ ಕೊಠಡಿಗಳು – 73066
ಒಟ್ಟು ಪರೀಕ್ಷಾ ಸಿಬ್ಬಂದಿ – 1,19,469

ಮುಖ್ಯ ಅಧೀಕ್ಷಕರು – 4885
ಪ್ರಶ್ನೆ ಪತ್ರಿಕೆ ಅಭಿಕ್ಷಕರು – 4885
ಕೊಠಡಿ ಮೇಲ್ವಿಚಾರಕರು – 80389
ಸ್ಥಾನಿಕ ಜಾಗೃತ ದಳ – 4885
ಮೊಬೈಲ್ ಸ್ವಾಧೀನಾಧಿಕಾರಿಗಳು – 4885
ಆಶಾ ಕಾರ್ಯಕರ್ತೆಯರು – 9770
ಆರಕ್ಷಕರು – 4885

Comments

Leave a Reply

Your email address will not be published. Required fields are marked *