ಇಬ್ಬರ ಜೊತೆ ಬಂದು ಸಂಜನಾ ಮತಾಂತರ: ಮೌಲ್ವಿ ಮಹಮ್ಮದ್ ಜಲಾಲುದ್ದಿನ್

-ಸ್ವಇಚ್ಛೆಯ ಮೇರೆಗೆ ಮತಾಂತರ

ಬೆಂಗಳೂರು: 2018ರಲ್ಲಿ ಇಬ್ಬರು ಜೊತೆ ಬಂದಿದ್ದ ಸಂಜನಾ ಗಲ್ರಾನಿ ಸ್ವಇಚ್ಛೆಯ ಮೇರೆಗೆ ಮತಾಂತರ ಆಗಿದ್ದಾರೆ ಎಂದು ಬೆಂಗಳೂರಿನ ಟ್ಯಾನಿ ರಸ್ತೆಯ ಅರೆಬಿಕ್ ಮದರಸದ ಧರ್ಮ ಗುರು ಮಹಮ್ಮದ್ ಜಲಾಲುದ್ದಿನ್ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಲಾಲುದ್ದಿನ್, ಅರ್ಚನಾ ಗರ್ಲಾನಿ 09-10-2018 ರಂದು ಇಮ್ತಿಯಾಜ್ ಅಹ್ಮದ್ ಮತ್ತು ಅಸ್ಲಂ ಪಾಷಾ (ಬೆಂಗಳೂರಿನ ನಿವಾಸಿಗಳು) ಎಂಬವರ ಜೊತೆಗೆ ಬಂದು ನನ್ನನ್ನ ಭೇಟಿಯಾದರು. ಕೋರ್ಟ್ ಅಫಿಡವಿಟ್ ಸಹಾ ತಗೆದುಕೊಂಡು ಬಂದಿದ್ದರು. ಇಸ್ಲಾಂನ ತತ್ವ ಆದರ್ಶಗಳನ್ನ ಒಪ್ಪಿಕೊಂಡು ಇಸ್ಲಾಂ ಧರ್ಮ ಸ್ವೀಕರಿಸಲು ಬಂದಿದ್ದೇನೆ ಎಂದರು. ಯಾವುದೇ ಒತ್ತಡ ಇಲ್ಲದೆ ಮತಾಂತರ ಆಗುತಿದ್ದೇನೆ ಎಂದರು. ನಾವು ಸಹ ಕೋರ್ಟ್ ಅಫಿಡವಿಟ್ ಇಲ್ಲದೇ ಮತಾಂತರ ಕಾರ್ಯಕ್ಕೆ ಮುಂದಾಗಲ್ಲ. ನಾನೇ ಅವರನ್ನ ಇಸ್ಲಾಂ ಧರ್ಮ ಸ್ವೀಕಾರದ ಕಾರ್ಯ ನೆರವೇರಿಸಿದೆ ಎಂದರು ಹೇಳಿದರು. ಇದನ್ನೂ ಓದಿ: ಮತಾಂತರ ಆಗಿದ್ದಾರಾ ಗಂಡ-ಹೆಂಡತಿ ನಟಿ ಸಂಜನಾ

ಇಸ್ಲಾಂ ಧರ್ಮ ಸ್ವೀಕಾರದ ಬಳಿಕ ಅವರಿಗೆ ಎಲ್ಲ ಮಾಹಿತಿ ನೀಡುತ್ತೇವೆ. ಅವರು ನಮಾಜ್, ಹಜ್, ಜಕಾತ್, ರೋಜಾ, ಕಲ್ಮಾ ಎಲ್ಲವನ್ನು ಒಪ್ಪಿಕೊಂಡಿದ್ದರು. ನಾನು ಸ್ವಇಚ್ಛೆಯ ಮೇರೆಗೆ ಮತಾಂತರ ಆಗುತ್ತೇನೆ ಎಂದು ಹೇಳಿರೋದು ದಾಖಲೆಗಳಲ್ಲಿದೆ. ಮತಾಂತರಗೊಳ್ಳಲು ಆಗಮಿಸುವ ಜನರ ದಾಖಲಾತಿ ಕೇಳುತ್ತೇವೆ. ನಮಗೂ ಅವರ ಬಗ್ಗೆ ಹೆಚ್ಚಿನ ಮಾಹಿತಿ ಇರಲ್ಲ. ಮದುವೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಮತಾಂತರಗೊಂಡ ನಂತರ ನಾವು ಅವರಿಗೆ ಬದಲಾದ ಧರ್ಮ ಮತ್ತು ಹೆಸರಿನ ಕುರಿತು ದೃಢೀಕರಣದ ದಾಖಲೆಗಳನ್ನು ನೀಡುತ್ತೇವೆ. ಎಲ್ಲ ದಾಖಲೆಗಳಲ್ಲಿ ಮತಾಂತರಗೊಂಡ ವ್ಯಕ್ತಿಯ ಸಹಿ ಪಡೆದುಕೊಳ್ಳುತ್ತೇವೆ. ಇದನ್ನೂ ಓದಿ: ನನಗೆ ಸಿಗರೇಟ್ ಕೊಡಿ- ಜೈಲಿನಲ್ಲಿ ಸಂಜನಾ ಮತ್ತೆ ಕಿರಿಕ್

ಇಲ್ಲಿಂದ ಬಂದ ಹೋದಮೇಲೆ ಸಂಜನಾ ಏನು ಮಾಡಿದ್ರು ಅನ್ನೋದು ನಮಗೆ ಗೊತ್ತಿಲ್ಲ. ಈ ರೀತಿಯ ಕೆಟ್ಟ ಕೆಲಸಗಳಿಂದ ದೂರವಾಗಲಿ, ಅವರು ಮನಸ್ಸು ಪರಿವರ್ತನೆಯಾಗಲಿ ಎಂದು ನಾವು ಅಲ್ಲಾನಲ್ಲಿ ಪ್ರಾರ್ಥಿಸುತ್ತೇವೆ. ತಾನು ಮಾಡಿದ ಕೆಲಸ ಕೆಟ್ಟದ್ದು ಅಂದು ಪ್ರಾಯಶ್ಚಿತವಾಗಿ ಕಣ್ಣೀರು ಹಾಕಿ ಪ್ರಾರ್ಥಿಸಿದ್ರೆ ಅಲ್ಲಾನ ಕ್ಷಮೆಗೆ ಪಾತ್ರರಾಗುತ್ತಾರೆ.  ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್

ಕಲ್ಮಾ ಓದಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕವೂ ಇಂತಹ ಕೆಲಸಗಳಲ್ಲಿ ಭಾಗಿಯಾಗಿ ಜೈಲು ಸೇರಿರೋದಕ್ಕೆ ನಮಗೆ ದುಃಖವಿದೆ. ತಮ್ಮ ತಪ್ಪು ತಿದ್ದಿಕೊಳ್ಳಲು ಅವರು ನಮ್ಮ ಬಳಿ ಬರುವ ಅಗತ್ಯವಿಲ್ಲ. ಅವರು ಇದ್ದ ಜಾಗದಲ್ಲಿಯೇ ಅಲ್ಲಾನಲ್ಲಿ ಪ್ರಾರ್ಥಿಸಿ ಆತನಲ್ಲಿ ಕ್ಷಮೆ ಕೇಳಬೇಕು. ನಾವು ಅವರಿಗೆ ಒಳ್ಳೆಯ, ನೀತಿ ಮಾರ್ಗದಲ್ಲಿ ನಡೆಯುವಂತಾಗಲಿ. ಎಲ್ಲ ಪ್ರಕರಣಗಳಿಂದ ಮುಕ್ತರಾಗಿ ಹೊರ ಬರಲಿ ಎಂದು ನಾವು ಸಹ ಅಲ್ಲಾನಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *