ಅಹಮದಾಬಾದ್: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆ ಇಂದು ನಡೆಯಬೇಕಾಗಿದ್ದ ಆರ್ಸಿಬಿ ನಡುವಿನ ಪಂದ್ಯವನ್ನು ಮುಂದೂಡಲಾಗಿದೆ.

ಇಂದು ಅಹಮದಾಬಾದ್‍ನಲ್ಲಿ ಆರ್ಸಿಬಿ ಮತ್ತು ಕೋಲ್ಕತ್ತಾ ನಡುವಿನ ಪಂದ್ಯ ನಿಗದಿಯಾಗಿತ್ತು. ಆದರೆ ಇಂದು ಕೋಲ್ಕತ್ತಾದ ಇಬ್ಬರು ಆಟಗಾರರಿಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಪಂದ್ಯವನ್ನು ಮುಂದೂಡಿಕೆ ಮಾಡಲಾಗಿದೆ.

ಟೂರ್ನಿಯ ವೇಳಾಪಟ್ಟಿಯ ಪ್ರಕಾರ ಇಂದು 30ನೇ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೋಲ್ಕತ್ತಾ ತಂಡಗಳು ಎದುರುಬದುರಾಗಲು ಸಿದ್ಧತೆಯಲ್ಲಿ ತೋಡಗಿಕೊಂಡಿದ್ದವು. ಆದರೆ ಕೋಲ್ಕತ್ತಾ ತಂಡದ ಇಬ್ಬರು ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಪಂದ್ಯ ರದ್ದುಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದ್ದು ಇನ್ನು ಕೂಡ ಐಪಿಎಲ್ ಆಡಳಿತ ಮಂಡಳಿ ಅಧಿಕೃತವಾಗಿ ಪ್ರಕಟಣೆ ಹೊರಡಿಸಿಲ್ಲ.

Leave a Reply