ಇನ್ನೆರಡು ದಿನದಲ್ಲಿ ಬಿಎಸ್‍ವೈ ಸಂಪುಟ ಅಂತಿಮ- ಸಚಿವ ಆಕಾಂಕ್ಷಿಗಳಿಂದ ಹೆಚ್ಚಿದೆ ಲಾಬಿ

ಬೆಂಗಳೂರು: ಬಿಜೆಪಿ ಹೈಕಮಾಂಡ್ ನಡೆ ತೀವ್ರ ಕುತೂಹಲ ಹುಟ್ಟಿಸಿದ್ದು, ಇನ್ನೆರಡು ದಿನದಲ್ಲಿ ಯಡಿಯೂರಪ್ಪ ಸಂಪುಟದ ಭವಿಷ್ಯ ಗೊತ್ತಾಗಲಿದೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಹೈಕಮಾಂಡ್ ಮನಸ್ಸು ಮಾಡಿದ್ರೆ ಸಿಎಂ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಹೈಕಮಾಂಡ್ ಜೊತೆ ಮುಖಾಮುಖಿಯಾಗಿ ಭೇಟಿಯಾಗಿ ಸಿಎಂ ಮಾತುಕತೆ ನಡೆಸಲಿದ್ದಾರೆ. ಒಂದು ವೇಳೆ ಹೈಕಮಾಂಡ್ ಈಗ ಬೇಡ ಅಂದ್ರೆ ಡಿಸೆಂಬರ್ ಗೆ ಮುಂದೂಡಿಕೆಯಾಗುವ ಸಾಧ್ಯತೆಗಳು ಕೂಡ ಇವೆ. ಅಷ್ಟೇ ಅಲ್ಲ ಸಿಎಂ ದೆಹಲಿ ಪ್ರವಾಸವೂ ಮುಂದೂಡಿಕೆ ಆಗಲಿದೆ. ಹಾಗಾಗಿ ಬಿಜೆಪಿ ಹೈಕಮಾಂಡ್ ನಿಂದ ಬರುವ ಸಂದೇಶಕ್ಕೆ ಯಡಿಯೂರಪ್ಪ ಕಾಯುತ್ತಿದ್ದಾರೆ.

ಇಂದು ಅಥವಾ ನಾಳೆ ಹೈಕಮಾಂಡ್ ನಾಯಕರ ಜೊತೆ ಬಿಎಸ್‍ವೈ ದೂರವಾಣಿ ಮೂಲಕ ಮಾತುಕತೆ ನಡೆಸಬಹುದು. ಈ ವೇಳೆ ಪುನಾರಚನೆ ಬೇಡ ಅಂದ್ರೆ ಸಂಪುಟ ವಿಸ್ತರಣೆಯನ್ನಾದ್ರೂ ಮಾಡಲು ಅನುಮತಿ ಕೇಳಬಹುದು. ಇದನ್ನೂ ಓದಿ: ನಾವು ಕಂಬಳಿ ಬೀಸಿದ್ದಕ್ಕೆ ಯಡಿಯೂರಪ್ಪ ಸಿಎಂ ಆಗಿದ್ದು: ಎಂಟಿಬಿ ಗುಡುಗು

ಈಗಾಗಲೇ ಎಂಟಿಬಿ, ಶಂಕರ್ ಸಚಿವ ಸ್ಥಾನಕ್ಕೆ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮೂವರು ವಲಸಿಗರು, ಮೂವರು ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ಕೊಡಲು ಅನುಮತಿ ಕೇಳಲು ಯಡಿಯೂರಪ್ಪ ಪ್ಲ್ಯಾನ್ ಮಾಡಿದ್ದಾರೆ. ಆದರೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರವೇ ಮಹತ್ವವಾದದ್ದಾಗಿದೆ.

Comments

Leave a Reply

Your email address will not be published. Required fields are marked *