ಇನ್ನು ಎರಡು ವರ್ಷದಲ್ಲಿ ಮಂಜು ಏನಾಗ್ತಾರಂತೆ ಗೊತ್ತಾ?

ಬಿಗ್‍ಬಾಸ್ ರಿಯಾಲಿಟಿ ಶೋಗೆ ಬರುವ ಪ್ರತಿಯೊಬ್ಬ ಸ್ಪರ್ಧಿಯು ಮುಂದೆ ತಾವು ಏನಾಗಬೇಕೆಂಬ ಕನಸ್ಸನ್ನು ಹೊತ್ತುಕೊಂಡು ಬಂದಿರುತ್ತಾರೆ. ಹಾಗೆಯೇ ಲ್ಯಾಗ್ ಮಂಜು ಕೂಡ ಮುಂದೆ ತಾವು ಏನಾಗಬೇಕೆಂದು ಎಂಬ ಆಸೆಯನ್ನು ದೊಡ್ಮನೆಯಲ್ಲಿ ರಿವೀಲ್ ಮಾಡಿದ್ದಾರೆ.

ಮಂಜು ಹಾಗೂ ದಿವ್ಯಾ ಇಬ್ಬರು ಕುಳಿತು ಮಾತನಾಡುತ್ತಿದ್ದ ವೇಳೆ, ದಿವ್ಯಾ ಸುರೇಶ್ ಮಂಜುಗೆ ಇನ್ನು 2 ವರ್ಷದಲ್ಲಿ ನಿನ್ನನ್ನು ನೀನು ಯಾವ ಸ್ಥಾನದಲ್ಲಿ ನೋಡಬೇಕು ಎಂದು ಅಂದುಕೊಂಡಿದ್ಯಾ ಎಂದು ಪ್ರಶ್ನೆ ಕೇಳುತ್ತಾರೆ.

ಆಗ ಮಂಜು, ನಾನು ಒಳ್ಳೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕೆಂದು ಕೊಂಡಿದ್ದೇನೆ. ಕ್ಯಾರೆಕ್ಟರ್ ಆರ್ಟಿಸ್ಟ್ ಅಂದರೆ ತಪ್ಪಾಗುತ್ತದೆ. ನಾನು ಒಬ್ಬ ಒಳ್ಳೆ ನಟ ಆಗಬೇಕು. ನೀನು ಯಾವ ಪಾತ್ರಕೊಟ್ಟರು ಜೀವಿಸುವ ತರಹ ಇರಬೇಕು. ಉದಾಹರಣೆಗೆ ಪ್ರಕಾಶ್ ರೈ, ಅನಂತ್ ನಾಗ್, ಸುದೀಪ್ ಸರ್ ರೀತಿ ಇರಬೇಕು.

ಒಂದು ಕ್ಯಾರೆಕ್ಟರ್‍ನನ್ನು ರಫ್ ಆಗಿ ಕಂಪೋಸ್ ಮಾಡಿರುತ್ತಾರೆ. ಅವರ ತಲೆಯಲ್ಲಿ ಇವರೇ ಇರಬೇಕು ಎಂದು ಫಿಕ್ಸ್ ಆಗಿರುತ್ತಾರೆ. ಈ ಕ್ಯಾರೆಕ್ಟರ್ ಅವನು ಒಪ್ಪಿಕೊಂಡರೆ ಸಾಕು ಅವನು ನೋಡಿಕೊಳ್ಳುತ್ತಾನೆ ಎಂದು ಇರುತ್ತದೆ. ಉದಾಹರಣೆಗೆ ನಾನೇ ಒಬ್ಬ ರೈಟರ್ ಆಗಿ 20% ಬರೆದಿರುತ್ತೇನೆ. ಅವನು ಒಪ್ಪಿಕೊಂಡರೆ ಸಾಕು 100% ಪಾತ್ರವನ್ನು ಹೆಚ್ಚಿಸಿಕೊಡುತ್ತಾನೆ ಎಂಬುವ ರೀತಿ ನಟನಾಗಬೇಕು ಎಂದು ತಮ್ಮ ಆಸೆಯನ್ನು ತೋಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *