ಇನಿಯನ ಜೊತೆ ಸೇರಿ ಪತಿಯನ್ನ ಪರಲೋಕಕ್ಕೆ ಕಳಿಸಿದ ಸುಂದರಿ ಆಂಟಿ

– ಬಾಯಿಗೆ ಬಟ್ಟೆ ತುರುಕಿ, ಲಟ್ಟನಿಗೆಯಿಂದ ಹೊಡೆದು ಕೊಲೆ
– ನಿಮ್ಮಣ್ಣನ ಕಥೆ ಮುಗಿತು: ಮೈದುನನಿಗೆ ಫೋನ್ ಮಾಡಿ ಹೇಳಿದ್ಳು
– ರಕ್ತದ ಮಡುವಿನಲ್ಲಿ ಬಿದ್ದ ಪತಿಯ ಬಿಟ್ಟು ಎಸ್ಕೇಪ್

ಚಂಡೀಗಢ: ಇನಿಯನ ಜೊತೆ ಸೇರಿ ಪತಿಯನ್ನ ಕೊಲೆಗೈದಿರುವ ಘಟನೆ ಹರ್ಯಾಣದ ಸೋನಿಪತ್ ಜಿಲ್ಲೆಯ ಬಂದೇಪುರ ಗ್ರಾಮದಲ್ಲಿ ನಡೆದಿದೆ. ಕೊಲೆಯ ಬಳಿಕ ಮಕ್ಕಳನ್ನ ಕರೆದುಕೊಂಡ ಮಹಿಳೆ ಪ್ರಿಯತಮನ ಜೊತೆ ಎಸ್ಕೇಪ್ ಆಗಿದ್ದಾಳೆ.

ನರೇಂದ್ರ ರಾಠಧನಾ ಪತ್ನಿಯಿಂದಲೇ ಕೊಲೆಯಾದ ಪತಿ. 22 ವರ್ಷಗಳ ಹಿಂದೆ ನರೇಂದ್ರ ಪಿಂಪಲಿ ಗ್ರಾಮದ ರೇಖಾಳನ್ನ ಮದುವೆಯಾಗಿದ್ದರು. ದಂಪತಿಗೆ ಸುಂದರವಾದ ಎರಡು ಮಕ್ಕಳು ಇದ್ದರು. ಆದ್ರೆ ರೇಖಾಳ ಅನೈತಿಕ ಸಂಬಂಧ ಇಬ್ಬರ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡಿತ್ತು. ಇದೇ ವಿಷಯವಾಗಿ ದಂಪತಿ ನಡುವೆ ಸದಾ ಜಗಳ ನಡೆಯುತ್ತಿತ್ತು.

ಕಳೆದ ಒಂದು ವರ್ಷದಿಂದ ಆರ್ಯನಗರದಲ್ಲಿರುವ ಪ್ರೇಮಿಯ ಮನೆಯಲ್ಲಿಯೇ ರೇಖಾ ಉಳಿದುಕೊಂಡಿದ್ದಳು. ಗ್ರಾಮಸ್ಥರು ರಾಜಿ ಪಂಚಾಯ್ತಿ ನಡೆಸಿ ರೇಖಾಳಿಗೆ ಪತಿಯ ಜೊತೆ ಬಾಳುವಂತೆ ಹೇಳಿದ್ದರು. ಮೂರು ವಾರಗಳ ಹಿಂದಷ್ಟೇ ರೇಖಾ ಪತಿಯ ಮನೆಗೆ ಬಂದಿದ್ದಳು. ಆದ್ರೂ ರೇಖಾ ತನ್ನ ಹಳೆ ಚಾಳಿಯನ್ನ ಬಿಟ್ಟಿರಲಿಲ್ಲ. ಇದನ್ನೂ ಓದಿ: ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದು ಕಂಬಳಿಯಲ್ಲಿ ಸುತ್ತಿ ಪತಿ ಎಸ್ಕೇಪ್!

ಮೈದುನನಿಗೆ ಫೋನ್: ಗೆಳೆಯ ಜೊತೆ ಸೇರಿ ಲಟ್ಟನಿಗೆಯಿಂದ ಪತಿಗೆ ತಲೆಗೆ ಹೊಡೆದು ಕೊಂದಿದ್ದಾಳೆ. ಕೊಲೆ ಬಳಿಕ ಮೈದುನ ಸೋನುಗೆ ಫೋನ್ ಮಾಡಿದ ರೇಖಾ, ನಿಮ್ಮ ಅಣ್ಣನ ಕಥೆ ಮುಗೀತು, ಬೇಕಾದ್ರೆ ಬಂದು ನೋಡು ಎಂದು ಹೇಳಿದ್ದಾಳೆ. ಅತ್ತಿಗೆ ಮಾತು ಕೇಳಿ ಕೆಲ ಕುಟುಂಬಸ್ಥರೊಂದಿಗೆ ಅಣ್ಣನ ಮನೆಗೆ ಸೋನು ಬಂದಿದ್ದಾನೆ. ಬಾಗಿಲು ಒಡೆದು ನೋಡಿದಾಗ ರಕ್ತದ ಮಡುವಿನ ಅಣ್ಣನ ಶವ ಬದ್ದಿರೋದು ಕಂಡಿದೆ. ಇದನ್ನೂ ಓದಿ: ಪ್ರಿಯಕರನ ಜೊತೆ ಬೆತ್ತಲಾದ ಮೂರು ಮಕ್ಕಳ ತಾಯಿ- ರೊಚ್ಚಿಗೆದ್ದ ಪತಿಯಿಂದ ಪತ್ನಿಯ ಕೊಲೆ

ಮನೆಯ ಸುತ್ತಮುತ್ತ ರೇಖಾ ಮತ್ತು ಮಕ್ಕಳು ಎಲ್ಲಿಯೂ ಕಂಡಿಲ್ಲ. ಸೋನು ಪೊಲೀಸರಿಗೂ ಮತ್ತು ಇತರೆ ಕುಟುಂಬ ಸದಸ್ಯರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನ ಆಸ್ಪತ್ರೆಗೆ ರವಾನಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *