ಇದೊಂದು ಮಾನಗೆಟ್ಟ ಕೆಲಸ – ಜಾರಕಿಹೊಳಿ ವಿರುದ್ದ ಸಿದ್ದರಾಮಯ್ಯ ಕಿಡಿ

ಚಿಕ್ಕಬಳ್ಳಾಪುರ: ಇದೊಂದು ಮಾನಗೆಟ್ಟ ಕೆಲಸ, ಸಚಿವರಾದವರು ಯಾರಾದರೂ ಇಂತಹ ಕೆಲಸ ಮಾಡುತ್ತಾರಾ ಎಂದು ರಮೇಶ್ ಜಾರಕಿಹೊಳಿ ರಾಸಲೀಲೆ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವರಾಗಿ ಯಾರಾದರೂ ಇಂತಹ ಕೆಲಸ ಮಾಡುತ್ತಾರಾ? ಅದರಲ್ಲೂ ಸರ್ಕಾರಿ ವಸತಿ ಗೃಹ, ದೆಹಲಿಯ ಕರ್ನಾಟಕ ಭವನದಲ್ಲಿ ಈ ಘಟನೆ ನಡೆದಿದೆ. ಇಂತಹ ಅಸಹ್ಯ ಆಶ್ಲೀಲವಾದದನ್ನು ನಾನೂ ಎಂದೂ ಕಂಡಿರಲಿಲ್ಲ. ರಮೇಶ್ ಜಾರಕಿಹೊಳಿ ನಿನ್ನೆಯೇ ರಾಜೀನಾಮೆ ನೀಡಬೇಕಿತ್ತು. ಒಂದು ದಿನ ತಡ ಮಾಡಿದ್ದೇ ತಪ್ಪು ಎಂದು ಹೇಳಿದರು.

ಇದಕ್ಕೂ ಮುನ್ನ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಗೆ ಮಾಜಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಾಗಿನ ಅರ್ಪಿಸಿದರು. ಅಂದಹಾಗೆ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಇದೇ ಖಾಲಿ ಕೆರೆಗೆ ಭೇಟಿ ನೀಡಿ ಎಚ್‍ಎನ್ ವ್ಯಾಲಿ ಯೋಜನೆಗೆ ಶಂಕುಸ್ಥಾಪನೆ ನೇರವೇರಿಸಿದ್ದರು. ಈಗ ಆ ಕಂದವಾರ ಕೆರೆ ಎಚ್‍ಎನ್ ವ್ಯಾಲಿ ಯೋಜನೆ ನೀರಿಂದ ತುಂಬಿ ತುಳುಕುತ್ತಿದೆ.

ಇದೇ ವೇಳೆ ಎಚ್‍ಎನ್ ವ್ಯಾಲಿ ಯೋಜನೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯನವರು ಇದು ಕುಡಿಯುವ ನೀರಿನ ಯೋಜನೆ ಅಲ್ಲ. ಅಂತರ್ಜಲ ಅಭಿವೃದ್ಧಿಗೆ ಎಂದು ಎಚ್‍ಎನ್ ವ್ಯಾಲಿ ಜಾರಿ ಮಾಡಿದ್ದೀವಿ. ಈಗ ಕೆರೆ ತುಂಬಿ ಹರಿತಿರುವುದು ಬಹಳ ಸಂತಸ ತಂದಿದೆ ಎಂದರು.

Comments

Leave a Reply

Your email address will not be published. Required fields are marked *