ಇದು ಡೆಡ್ಲಿ ಸೋಮನ ‘ಹೊಸ ಅಧ್ಯಾಯ’ – ‘ಮುಂದುವರೆದ ಅಧ್ಯಾಯ’ದ ಮೂಲಕ ಮತ್ತೆ ಬಂದ್ರು ಆದಿತ್ಯ

– ಭಾರೀ ಕುತೂಹಲ ಮೂಡಿಸಿದ ಸಿನಿಮಾದ ಟ್ರೇಲರ್

ಮಾಸ್ ಅಂಡ್ ಕ್ಲಾಸ್ ಸಿನಿಮಾಗಳ ಮೂಲಕ ತೆರೆಮೇಲೆ ಅಬ್ಬರಿಸಿದ್ದ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ‘ಮುಂದುವರೆದ ಅಧ್ಯಾಯ’ ಸಿನಿಮಾದ ಮೂಲಕ ಮತ್ತೆ ಕಂ ಬ್ಯಾಕ್ ಮಾಡ್ತಿದ್ದಾರೆ. ಹಾಗಂತ ಈ ಬಾರಿ ಅವರು ಕೈಯಲ್ಲಿ ಲಾಂಗ್ ಹಿಡಿದಿಲ್ಲ. ಬದಲಾಗಿ ಸ್ಪೆಷಲ್ ಇನ್ವಿಸ್ಟಿಗೇಷನ್ ಆಫೀಸ್ ಆಗಿ ಬೆಳ್ಳಿಪರದೆ ಪ್ರವೇಶಿಸಲು ರೆಡಿಯಾಗಿದ್ದಾರೆ.

ಈಗಾಗ್ಲೇ ರಿಲೀಸ್ ಆಗಿರುವ ಸಿನಿಮಾದ ಪೋಸ್ಟರ್, ಟೀಸರ್, ಡೈಲಾಗ್ ಟೀಸರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಇದೀಗ ಹೊರ ಬಂದಿರುವ ಟ್ರೇಲರ್ ನಿರೀಕ್ಷೆಗೂ ಮೀರಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ಕೊಲೆ.. ಕೊಲೆ ಸುತ್ತ ನಡೆಯುವ ಘಟನೆ.. ಆಗಾಗ ಬರುವ ಡೈಲಾಗ್.. ಪಾತ್ರ ವರ್ಗ ಬ್ಯಾಗ್ ಗ್ರೌಂಡ್ ಮ್ಯೂಸಿಕ್.. ವಿಷ್ಯುವಲ್ಸ್ ಎಫೆಕ್ಟ್ ಎಲ್ಲವೂ ಟ್ರೇಲರ್ ನಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ.

ಆ್ಯಕ್ಷನ್, ಮಾಸ್, ಸಸ್ಪೆನ್ಸ್ ಎಲ್ಲ ಅಂಶಗಳ ಹೂರಣವಾಗಿರುವ ಮುಂದುವರೆದ ಅಧ್ಯಾಯ ಸಿನಿಮಾದ ಮೂಲಕ ಡೈರೆಕ್ಟರ್ ಬಾಲು ಚಂದ್ರಶೇಖರ್, ಸಮಾಜದಲ್ಲಿ ಭೂಗತ ಚಟುವಟಿಕೆ, ರೌಡಿಸಂಗಳಿಗೆ ಕೊನೆ ಎಂಬುದೇ ಇಲ್ಲ. ಆದರೆ ಜನ ಬದಲಾಗಬೇಕಿದೆ. ನಾವೆಲ್ಲ ಬದಲಾದರೆ ಸಮಾಜದಲ್ಲಿ ಖಂಡಿತ ಬದಲಾವಣೆ ಸಾಧ್ಯ ಎಂಬುದನ್ನು ಹೇಳಲು ಹೊರಟ್ಟಿದ್ದಾರೆ.

ಅಂದಹಾಗೇ ಬಾಲು ಚಂದ್ರಶೇಖರ್ ಈ ಸಿನಿಮಾದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು, ಸಿನಿಮಾ ನಿರ್ದೇಶನದ ಜೊತೆ ಕಥೆ, ಚಿತ್ರಕಥೆ ಹಾಗೂ ಒಂದು ಹಾಡನ್ನು ಬರೆದಿದ್ದಾರೆ. ಉಳಿದಂತೆ ಸಿನಿಮಾದಲ್ಲಿ ಎಂಎಲ್‍ಎ ಪಾತ್ರದಲ್ಲಿ ವಿನಯ್ ಕೃಷ್ಣಸ್ವಾಮಿ, ಪೊಲೀಸ್ ಪಾತ್ರದಲ್ಲಿ ವಿನೋದ್, ಪತ್ರಕರ್ತೆಯ ಪಾತ್ರದಲ್ಲಿ ಆಶಿಕಾ ಸೋಮಶೇಖರ್, ಡಾಕ್ಟರ್ ಆಗಿ ಚಂದನಾ ಗೌಡ, ರೆಸ್ಟೋರೆಂಟ್ ಮಾಲೀಕನ ಪಾತ್ರದಲ್ಲಿ ಸಂದೀಪ್ ಕುಮಾರ್ ಹೀಗೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಣಜ ಎಂಟಪ್ರ್ರೈಸಸ್ ಬ್ಯಾನರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ದಿಲೀಪ್ ಚಕ್ರವರ್ತಿಯವರ ಕ್ಯಾಮೆರಾ ಕೈಚಳಕ, ವಿನೋದ್ ಸಾಹಸ, ಶ್ರೀಕಾಂತ್ ಸಂಕಲನ ಸಿನಿಮಾದಲ್ಲಿರಲಿದೆ. ಒಟ್ಟು ಮೂರು ಹಾಡುಗಳಿದ್ದು, ಜಾನಿ ಹಾಗೂ ನಿತಿನ್ ಜೋಡಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ರಾಮನಗರ, ದೇವರಾಯನ ದುರ್ಗ, ಮಂಡ್ಯ, ಮಳವಳ್ಳಿ, ತುಮಕೂರು, ಬೆಂಗಳೂರಿನ ರಾಕ್ಲೈನ್ ಸ್ಟುಡಿಯೋ, ಯೂನಿವರ್ಸಿಟಿ ಕ್ಯಾಂಪಸ್ ಸುತ್ತಮತ್ತ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಈಗಾಗ್ಲೇ ಸೆನ್ಸಾರ್ ಮುಗಿಸಿರುವ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಇದೇ ಮಾರ್ಚ್ 19ಕ್ಕೆ ಬೆಳ್ಳಿತೆರೆಗೆ ಮುಂದುವರೆದ ಅಧ್ಯಾಯ ಸಿನಿಮಾ ಗ್ರ್ಯಾಂಡ್ ಎಂಟ್ರಿ ಕೊಡ್ತಿದೆ.

Comments

Leave a Reply

Your email address will not be published. Required fields are marked *