ಇತಿಹಾಸದ ಅಚ್ಚರಿಗಳ ಮಹಾಪೂರ ‘ಗಡಿಯಾರ’

ಡಿಯಾರ ಸಿನಿಮಾ ರಿಲೀಸ್ ಆಗಿ ಒಂದು ದಿನ ಕಳೆದಿದೆ. ಆದ್ರೆ ಇಷ್ಟು ಕಡಿಮೆ ಸಮಯದಲ್ಲೇ ‘ಗಡಿಯಾರ’ಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾದಲ್ಲಿ ಇತಿಹಾಸಕ್ಕೆ ಕರೆದುಕೊಂಡು ಹೋಗುವ ದಾರಿ ಇದೆಯಲ್ಲಾ ಆ ದಾರಿಯಲ್ಲಿ ನಿರ್ದೇಶಕ ಅದ್ಭುತವಾಗಿ ಕರೆದುಕೊಂಡು ಹೋಗಿದ್ದಾರೆ. ಥಿಯೇಟರ್ ನಿಂದ ಹೊರ ಬಂದ ಪ್ರೇಕ್ಷಕನ ಮುಖದಲ್ಲಿ ಇತಿಹಾಸ ತಿಳಿದುಕೊಂಡ ತೃಪ್ತಿ ಕಾಣಿಸುತ್ತಿದೆ.

ಎಷ್ಟೇ ಜನರೇಷನ್ ಕಳೆದರೂ ಹಳೆ ಕಾಲದಲ್ಲಿ ಹೂತಿಟ್ಟ ನಿಧಿ ವಿಷಯ ಯಾವಾಗಲೂ ಚಾಲ್ತಿಯಲ್ಲಿರುತ್ತೆ. ಗಡಿಯಾರದಲ್ಲೂ ನಿಧಿ ಶೋಧದ ಬಗ್ಗೆ ತೋರಿಸಲಾಗಿದೆ. ಇತಿಹಾಸ ಅರಿತ ಒಬ್ಬ ಪ್ರೊಫೆಸರ್ ಆ ನಿಧಿ ಪಡೆಯಲು ಏನೆಲ್ಲಾ ಗೇಮ್ ಫ್ಲ್ಯಾನ್ ಮಾಡುತ್ತಾನೆ. ತನಿಖೆ ಶುರುವಾದಾಗ ಪೊಲೀಸರ ಧಿಕ್ಕನ್ನೇ ಬದಲಾಯಿಸುವ ರೀತಿ, ಆ ನಿಧಿ ಕೇಸನ್ನು ಪತ್ರಕರ್ತೆಯಾಗಿ ಶೀತಲ್ ಶೆಟ್ಟಿ ನಿಭಾಯಿಸುವ ರೀತಿ ಎಲ್ಲವೂ ಪರಿಪೂರ್ಣವಾಗಿದೆ. ಸಿನಿಮಾದಲ್ಲಿ ಬರುವ ಒಂದೊಂದು ಎಳೆಯೂ ಮುಂದೆನು ಅನ್ನೋ ಪ್ರಶ್ನೆಯನ್ನ ಹುಟ್ಟು ಹಾಕುತ್ತೆ.

ಗಡಿಯಾರ ಎಂಬ ಟೈಟಲ್ ಇಟ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ದ ನಿರ್ದೇಶಕ ಟೈಟಲ್ ಬಗ್ಗೆ ಕೊನೆಯಲ್ಲಿ ಅರ್ಥ ಮಾಡಿಸಿದ್ದಾರೆ. ಅದಕ್ಕೂ ಮುನ್ನ ಥಿಯೇಟರ್ ಒಳಗೆ ಕುಳಿತ ಪ್ರೇಕ್ಷಕ ಲೈಟ್ ಆಫ್ ಆಗುವವರೆಗೆ ತನ್ನದೇ ಲೋಕದಲ್ಲಿರುತ್ತಾನೆ. ಸಿನಿಮಾ ಆರಂಭವಾದ ನಂತರ ಪ್ರೇಕ್ಷನನ್ನ ತನ್ನಲ್ಲಿ ಹಿಡಿದಿಟ್ಟುಕೊಳ್ಳುವಂತೆ ಕಥೆಯ ಸಾರವನ್ನ ಎಣೆದಿದ್ದಾರೆ. ಒಂದೂವರೆ ಗಂಟೆಗಳ ಕಾಲ ವೀಕ್ಷಕನನ್ನ ಹಿಡಿದಿಟ್ಟುಕೊಂಡು ನಿರ್ದೇಶಕ ಪ್ರಬಿಕ್ ಮೊಗವೀರ್ ತನ್ನ ತಾಕತ್ತು ತೋರಿಸಿದ್ದಾರೆ. ಇಡೀ ಸಿನಿಮಾ ಸಸ್ಪೆನ್ಸ್, ಥ್ರಿಲ್ಲಿಂಗ್ ನಲ್ಲೇ ಸಾಗುತ್ತೆ.

ಹಿಂದಿನ ಕಾಲದಲ್ಲಿ ಆಸ್ತಿಯನ್ನ ವಿಲ್ ಮಾಡಲಾಗುತ್ತಿರಲಿಲ್ಲ. ಅದೆಷ್ಟೋ ಆಸ್ತಿಗಳು ಲೆಕ್ಕಕ್ಕೆ ಇರುತ್ತಿರಲಿಲ್ಲ. ರಾಜಮನೆತನದವರ ಆಸ್ತಿ ಅಂತು ಎಲ್ಲೆಲ್ಲಿ ಇರುತ್ತಿತ್ತೋ ಈ ಬಗ್ಗೆ ಸಾಮಾನ್ಯ ಜನರಾದ ನಮಗೂ ನೂರೆಂಟು ಪ್ರಶ್ನೆಗಳಿದ್ದವು. ಅದಕ್ಕೆ ಈ ಸಿನಿಮಾದಲ್ಲಿ ಉತ್ತರ ಸಿಕ್ಕಿದೆ. ಅಷ್ಟೇ ಅಲ್ಲ ಕೈ ಮೇಲೆ ಆಗಿನ ಕಾಲದಲ್ಲಿ ಹಾಕುತ್ತಿದ್ದ ಅಚ್ಚೆ ಆಸ್ತಿ ಕಾಪಾಡುವ ಅಸ್ತ್ರವಾಗಿತ್ತು ಎಂಬ ಹೊಸ ವಿಚಾರವನ್ನು ನಿರ್ದೇಶಕರು ತಿಳಿಸಿದ್ದಾರೆ.

ಪ್ರೊಫೆಸರ್ ಈ ವಿಚಾರವನ್ನೆ ಕೆದಕುತ್ತಾ ಹೋಗುತ್ತಾನೆ. ಈ ಮಧ್ಯೆ ಪೊಲೀಸರಿಗೆ ನಾಲ್ಕು ವಿದ್ಯಾರ್ಥಿಗಳು ಸಿಕ್ಕಿಬಿದ್ದು, ವಿಚಾರಣೆ ಎದುರಿಸುವಂತಾಗುತ್ತದೆ. ಆದ್ರೆ ಈ ಕೇಸ್ ನಲ್ಲಿ ವಿದ್ಯಾರ್ಥಿಗಳ ಪಾತ್ರವೇನು ಇರುವುದಿಲ್ಲ. ಇದರ ತನಿಖೆಯನ್ನ ಕೈಗೆತ್ತಿಕೊಂಡ ಪತ್ರಕರ್ತೆ ಶೀತಲ್ ಶೆಟ್ಟಿ ಇಡೀ ಚಿತ್ರಣವನ್ನೇ ಬದಲಾಯಿಸುತ್ತಾರೆ. ತನಿಖೆಯ ಹಾದಿ ಪ್ರೇಕ್ಷಕರನ್ನ ಕುಂತಲ್ಲೇ ಬಡಿದೆಬ್ಬಿಸುತ್ತಿರುತ್ತದೆ.

ಉಳಿದಂತೆ ಸಿನಿಮಾದಲ್ಲಿ ಮೂರು ಹಾಡುಗಳಿದ್ದು, ಸುಭಾಷ್ ರಾಘವ್ ಸಂಗೀತ ನಿರ್ದೇಶನದಲ್ಲಿ ಇಂಪಾಗಿ ಮೂಡಿಬಂದಿವೆ. ಶ್ಯಾಮ್ ಸುಂದರ್ ಕ್ಯಾಮೆರಾ ಕೈಚಳಕ ಸುಂದರವಾಗಿದೆ. ಗಡಿಯಾರವನ್ನ ಒಮ್ಮೆ ನೋಡಿ ಬರಲು ಅಡ್ಡಿ ಇಲ್ಲ.

ರೇಟಿಂಗ್: 3.5/5

Comments

Leave a Reply

Your email address will not be published. Required fields are marked *