ಇಂದು 5072 ಮಂದಿಗೆ ಕೊರೊನಾ- ರಾಜ್ಯದಲ್ಲಿ 2,403 ಮಂದಿ ಚೇತರಿಕೆ

– 72 ಮಂದಿ ಕೋವಿಡ್ 19ಗೆ ಬಲಿ

ಬೆಂಗಳೂರು: ಸತತ ಮೂರನೇ ದಿನವೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಮೊದಲ ದಿನ ಅಂದರೆ ಶುಕ್ರವಾರ 5,007 ಮಂದಿಗೆ ಸೋಂಕು ಬಂದಿದ್ದರೆ, ಇಂದು 5072 ಮಂದಿಗೆ ಕೊರೊನಾ ದೃಢಪಟ್ಟಿದೆ.

ರಾಜ್ಯದಲ್ಲಿ 72 ಮಂದಿ ಕೊರೊನಾಗೆ ಬಲಿಯಾಗಿದ್ದು, 2,403 ಮಂದಿ ಇಂದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 90,942 ಏರಿಕೆಯಾಗಿದೆ. ಈ ಪೈಕಿ 55,388 ಸಕ್ರಿಯ ಪ್ರಕರಣಗಳಿದ್ದರೆ, ಇದೂವರೆಗೂ 33,750 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 1,796 ಮಂದಿ ಮೃತಪಟ್ಟಿದ್ದು, 611 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು 11,256 ಮಂದಿಗೆ ರ‍್ಯಾಪಿಡ್ ಆಂಟಿಜನ್ ಟೆಸ್ಟ್, 21,509 ಆರ್ಟಿ ಪಿಸಿಆರ್ ಇತರೇ ಪರೀಕ್ಷೆ ಸೇರಿದಂತೆ ಒಟ್ಟು 32,765 ಮಂದಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು ರಾಜ್ಯದಲ್ಲಿ 11,43,262 ಮಂದಿಗೆ ಪರೀಕ್ಷೆ ಮಾಡಲಾಗಿದೆ.

ಎಂದಿನಂತೆ ಇಂದು ಕೂಡ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿಯೇ ಪತ್ತೆಯಾಗಿವೆ. ಬೆಂಗಳೂರು 2,036, ಮೈಸೂರು 187, ಉಡುಪಿ 182, ಬಾಗಲಕೋಟೆ 57, ದಕ್ಷಿಣ ಕನ್ನಡ 218, ಧಾರವಾಡ 183, ಕಲಬುರಗಿ 183 ಮಂದಿಗೆ ಸೋಂಕು ಬಂದಿದೆ. ಇಂದು ಒಟ್ಟು 2,403 ಮಂದಿ ಬಿಡುಗಡೆಯಾಗಿದ್ದು, ಬೆಂಗಳೂರಿನಲ್ಲಿ 686, ದಕ್ಷಿಣ ಕನ್ನಡ 140, ಬೀದರ್ 25, ಉಡುಪಿ 79, ವಿಜಯಪುರ 194, ದಾವಣಗೆರೆ 59. ಹಾಸನದಲ್ಲಿ 54 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಟ್ಟು 611 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರ 339, ಕಲಬುರಗಿ 29, ಧಾರವಾಡ 37, ಹಾಸನ 23, ಮಂಡ್ಯ ರಾಯಚೂರಿನಲ್ಲಿ ತಲಾ 17, ಬಳ್ಳಾರಿ 19, ಗದಗ್‍ನಲ್ಲಿ 17 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *