ಇಂದು ಸಾಹಸಸಿಂಹ ಡಾ.ವಿಷ್ಣುವರ್ಧನ್‍ರವರ 11ನೇ ವರ್ಷದ ಪುಣ್ಯಸ್ಮರಣೆ

ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಮರೆಯಾಗಿ ದಶಕವೇ ಕಳೆದುಹೋಗಿದೆ. ಇಂದು 11ನೇ ಪುಣ್ಯಸ್ಮರಣೆ ಆಚರಿಸಲಾಗುತ್ತಿದೆ.

ಪ್ರತಿ ವರ್ಷದಂತೆ ದಾದಾ ಅಭಿಮಾನಿಗಳು ಭಾರವಾದ ಮನಸ್ಸಿನಲ್ಲಿ ತಮ್ಮ ಆರಾಧ್ಯ ದೈವದ ಪುಣ್ಯಸ್ಮರಣೆ ಮಾಡುತ್ತಾರೆ. ಅಭಿಮಾನ್ ಸ್ಟುಡಿಯೋದಲ್ಲಿ ಬೆಳಗ್ಗೆ 10 ಗಂಟೆಗೆ ವಿಷ್ಣು ಸಮಾಧಿಗೆ ಪೂಜೆ ನಡೆಯುತ್ತೆ.

ಕೋವಿಡ್ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರದೆಯೂ ಇರಬಹುದು. ಆದರೆ ಅಭಿಮಾನಿಗಳಿಗಾಗಿ ಕೋವಿಡ್ ನಿಯಮಾವಳಿಗಳನ್ನ ಪಾಲಿಸೋಕೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅನ್ನಸಂತರ್ಪಣೆ, ರಕ್ತದಾನ ಶಿಬಿರ ಮುಂತಾದ ಕಾರ್ಯಕ್ರಮಗಳಿರುತ್ತವೆ. ಇನ್ನು ವಿಷ್ಣುವರ್ಧನ್ ಕುಟುಂಬಸ್ಥರು ಜಯನಗರದ ಸ್ವಗ್ರಹದಲ್ಲೇ ವಿಷ್ಣು ಪುಣ್ಯತಿಥಿ ಆಚರಿಸಲಿದ್ದಾರೆ. ಜೊತೆಗೆ ಮೈಸೂರಿನ ಸ್ಮಾರಕ ನಿಗದಿಸಿರುವ ಜಾಗಕ್ಕೂ ಭೇಟಿ ಕೊಡುವ ನಿರೀಕ್ಷೆ ಇದೆ.

2009ರ ಡಿಸೆಂಬರ್ 30ರಂದು ತೀವ್ರ ಹೃದಯಾಘಾತದಿಂದ ವಿಷ್ಣುದಾದ ಇಹಲೋಕ ತ್ಯಜಿಸಿದ್ರು. ಕನ್ನಡ ಚಿತ್ರರಂಗದಲ್ಲಿ ತ್ಮಮ ವಿಶಿಷ್ಟ ಅಭಿನಯದ ಮೂಲಕ ತಮ್ಮದೇ ಛಾಪು ಮೂಡಿಸಿದ್ದ ಡಾ. ವಿಷ್ಣುವರ್ಧನ್ ಅವರು 197 ಚಿತ್ರಗಳಲ್ಲಿ ನಟಿಸಿದ್ದು, 7 ರಾಜ್ಯಪ್ರಶಸ್ತಿಗಳು, 5 ಫಿಲ್ಮ್ ಫೇರ್ ಪ್ರಶಸ್ತಿಗಳು ಅವರ ಕೀರ್ತಿ ಮುಕಟವನ್ನು ಅಲಂಕರಿಸಿದ್ದವು.

Comments

Leave a Reply

Your email address will not be published. Required fields are marked *