ಇಂದು ಮದುವೆಯಾಗಬೇಕಿದ್ದ ವರನಿಗೆ ನಿನ್ನೆ ಹೃದಯಾಘಾತ

ರಾಯಚೂರು: ಮದುವೆಗೆ ಒಂದು ದಿನ ಬಾಕಿ ಇರುವಾಗಲೇ ಮದುಮಗ ಸಾವನ್ನಪ್ಪಿರುವ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ವೈವಿ ವರನನ್ನು ಹುಲುಗಪ್ಪ (36) ಎಂದು ಗುರುತಿಸಲಾಗಿದೆ. ಇಂದು ಮದುವೆ ಆಗಬೇಕಾಗಿದ್ದ ವರ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಹುಲುಗಪ್ಪ ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೃತ ಹುಲುಗಪ್ಪ ರಾಮತ್ನಾಳ ಗ್ರಾಮ ಪಂಚಾಯತಿಯಲ್ಲಿ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್(ಎಸ್‍ಡಿಎ) ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಸಿಂಧನೂರು ತಾಲುಕಿನ ಗೋರೆಬಾಳ ಗ್ರಾಮದ ಶರಣ ಬಸವೇಶ್ವರ ದೇಗುಲದಲ್ಲಿ ಹುಲಗಪ್ಪ ಅವರ ಮದುವೆ ನಿಗದಿ ಆಗಿತ್ತು.

ವರನ ಸಾವಿನಿಂದ ಜವಳಗೇರಾ ಗ್ರಾಮದಲ್ಲಿ ಮದುವೆ ಸಂಭ್ರಮದಲ್ಲಿರ ಬೇಕಾದ ಊರಲ್ಲಿ ಸೂತಕದ ವಾತಾರಣವಿದೆ. ಹುಲುಗಪ್ಪನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *