ಬೆಂಗಳೂರು: ಇಂದು ರಾಜ್ಯದಲ್ಲಿ ಕೇವಲ 1,509 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 1,645 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 24 ಮಂದಿ ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆಯಾಗಿದೆ. ಈ ಪೈಕಿ 8,38,150 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 24,708 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,678 ಮಂದಿ ಸೋಂಕಿಗೆ ಮೃತಪಟ್ಟಿದ್ದು, 438 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ 1,704 ಮಂದಿಗೆ ಸೋಂಕು ತಗುಲಿತ್ತು.

ಇಂದು ಒಟ್ಟು 8,682 ಆಂಟಿಜನ್ ಟೆಸ್ಟ್, 87,413 ಆರ್‍ಟಿ ಪಿಸಿಆರ್ ಇತ್ಯಾದಿ ಪರೀಕ್ಷೆ ಮಾಡಿದ್ದು, ಒಟ್ಟು 96,095 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 1,03,29,473 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ 725 ಮಂದಿಗೆ ಸೋಂಕು ಬಂದಿದ್ದು, ಇಂದು 10 ಮಂದಿ ಮೃತಪಟ್ಟಿದ್ದಾರೆ. ಮೈಸೂರು 104, ತುಮಕೂರು 89, ಮಂಡ್ಯ 58, ಕಲಬುರಗಿಯಲ್ಲಿ 56 ಜನರಲ್ಲಿ ಸೋಂಕು ಪತ್ತೆಯಾದರೆ, ಹಾಸನ 39, ಕೋಲಾರದಲ್ಲಿ 35 ಬೆಂಗಳೂರು ಗ್ರಾಮಾಂತರ ಹಾಗೂ ಬಳ್ಳಾರಿಯಲ್ಲಿ 34 ಹಾಗೂ ಉತ್ತರ ಕನ್ನಡದಲ್ಲಿ 30 ಮಂದಿಗೆ ಸೋಂಕು ಬಂದಿದೆ.

ಒಟ್ಟು 438 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಬೆಂಗಳೂರು ನಗರ 213, ಮೈಸೂರು 26, ತುಮಕೂರು 29, ಕಲಬುರಗಿ 17, ಹಾಸನ 13, ಬಳ್ಳಾರಿಯಲ್ಲಿ 12 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply