ಬೆಂಗಳೂರು: ಇಂದಿನಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ತರಗತಿಗಳು ಆರಂಭಗೊಳ್ಳಲಿವೆ. ಇಷ್ಟು ದಿನ ಅರ್ಧ ದಿನ ನಡೆಯುತ್ತಿದ್ದ ತರಗತಿಗಳು ಇಂದಿನಿಂದ ಫುಲ್ ಡೇ ಕ್ಲಾಸ್ ಸ್ಟಾರ್ಟ್ ಆಗಲಿವೆ. 9 ರಿಂದ 11 ನೇ ತರಗತಿ ಪ್ರಾರಂಭದ ಜೊತೆ 10 ಮತ್ತು 12 ನೇ ತರಗತಿಗಳಿಗೆ ಇಡೀ ದಿನ ಕ್ಲಾಸ್ ಆರಂಭಗೊಳ್ಳಲಿವೆ.
9 ರಿಂದ 12 ನೇ ತರಗತಿ ಜೊತೆಗೆ 6-8 ನೇ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮವೂ ಮುಂದುವರಿಯಲಿದೆ. ದಿನ ಬಿಟ್ಟು ದಿನ ವಿದ್ಯಾಗಮ ತರಗತಿಗಳ ನಡೆಯಲಿವೆ. ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಪ್ರಾರಂಭದಂತೆ ಕೊರೊನಾ ಮುಂಜಾಗ್ರತಾ ಕ್ರಮದಲ್ಲಿ ತರಗತಿಗಳ ಪ್ರಾರಂಭಕ್ಕೆ ನಿಯಮ ಅನ್ವಯವಾಗಲಿವೆ. ಶಾಲಾ-ಕಾಲೇಜು ಪ್ರಾರಂಭಕ್ಕೆ ಪ್ರತಿ ಜಿಲ್ಲಾ, ತಾಲೂಕು, ಕ್ಲಸ್ಟರ್ ಹಂತದಲ್ಲಿ ಮುಂಜಾಗ್ರತಾ ಕ್ರಮದ ಬ್ಲೂ ಪ್ರಿಂಟ್ ಸಿದ್ಧಗೊಂಡಿದೆ.

ಕಡ್ಡಾಯವಾಗಿ ಶಾಲೆಗಳು ಕಾಲೇಜುಗಳು ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು. ಜಿಲ್ಲಾಧಿಕಾರಿಗಳು, ಸಿಇಓ, ಡಿಡಿಪಿಐ, ಡಿಡಿಪಿಯು, ಬಿಇಓಗಳ ನೇತೃತ್ವದಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆಯ ಮಾನಿಟರಿಂಗ್ ಮಾಡಲಾಗುತ್ತದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಾರ್ಗಸೂಚಿ ಪಾಲನೆಗೆ ಅಗತ್ಯ ಕ್ರಮವಹಿಸಬೇಕು. ಮಾರ್ಗಸೂಚಿ ಪಾಲಿಸುವಂತೆ ಶಿಕ್ಷಣ ಇಲಾಖೆಯಿಂದ ಪ್ರತಿ ಶಾಲಾ-ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

ಮಾರ್ಗಸೂಚಿಗಳು:
* ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಅಲ್ಲ. ಈ ವರ್ಷ ಮಾತ್ರ 75% ಹಾಜರಾತಿ ಕಡ್ಡಾಯ ಅನ್ನೋ ನಿಯಮ ವಿದ್ಯಾರ್ಥಿಗಳಿಗೆ ಅನ್ವಯ ಇಲ್ಲ.
* ಶಾಲೆಗೆ ಆಗಮಿಸೋ ಪ್ರತಿ ವಿದ್ಯಾರ್ಥಿಯೂ ಪೋಷಕರಿಂದ ಕಡ್ಡಾಯವಾಗಿ ಒಪ್ಪಿಗೆ ಪ್ರಮಾಣ ಪತ್ರ ತರಬೇಕು. ವಿದ್ಯಾರ್ಥಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ ಅಂತ ಪ್ರಮಾಣ ಪತ್ರವನ್ನು ಪೋಷಕರು ನೀಡಬೇಕು. ಶಾಲೆಗೆ ಬರಲು ಇಷ್ಟವಿಲ್ಲದ ವಿದ್ಯಾರ್ಥಿ ಈಗಿರುವಂತೆ ಆನ್ ಲೈನ್ ಅಥವಾ ಇನ್ನಿತರ ಪರ್ಯಾಯ ಮಾರ್ಗದ ಮೂಲಕ ಪಠ್ಯ ಕಲಿಯಬಹುದು.
* ವಿದ್ಯಾರ್ಥಿಗಳಿಗೆ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ಮಾಡಲು ಕ್ರಮವಹಿಸಬೇಕು. ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

* ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆ ಈಗಲೂ ಪ್ರಾರಂಭವಿಲ್ಲ. ವಿದ್ಯಾರ್ಥಿಗಳೇ ಮನೆಯಿಂದ ಮಧ್ಯಾಹ್ನದ ಊಟ ತರಬೇಕು. ಸಾಮೂಹಿಕ ಪ್ರಾರ್ಥನೆ, ಗುಂಪು ಕ್ರೀಡಾ ಚಟುವಟಿಕೆಗಳಿಗೆ ನಿರ್ಬಂಧ. ತರಗತಿಗಳು ಮುಗಿದ ಕೂಡಲೇ ಶಾಲಾ ಕೊಠಿಗಳು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲು ಕ್ರಮವಹಿಸಬೇಕು. ಶಾಲಾ ಶೌಚಾಲಯ ಶುಚಿತ್ವ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶಾಲಾ ಆವರಣದಲ್ಲಿ ತಿಂಡಿ ಅಂಗಡಿಗಳಿಗೆ ನಿರ್ಬಂಧ.

* ಪ್ರತಿ ಕೊಠಡಿಗೆ ಕೇವಲ 15-20 ವಿದ್ಯಾರ್ಥಿಗಳು ಮಾತ್ರ ಕೂರಿಸಲು ಕ್ರಮವಹಿಸಬೇಕು. ಪ್ರತಿ ಬೆಂಚ್ ಗೆ ಇಬ್ಬರು ವಿದ್ಯಾರ್ಥಿಗಳು ಕೂರಿಸಬೇಕು. ಶಾಲೆ ಒಳಗೆ ಮತ್ತು ಹೊರಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮವಹಿಸಬೇಕು. ವಿದ್ಯಾರ್ಥಿಗಳಿಗೆ ನಿತ್ಯ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.

* ಪ್ರತಿ ಶಾಲಾ-ಕಾಲೇಜುನಲ್ಲಿ ಐಸೋಲೇಷನ್ ಕೊಠಡಿ ಪ್ರಾರಂಭಿಸಿ ಆರೋಗ್ಯ ವ್ಯತ್ಯಾಸ ಇರೋರಿಗೆ ಅಲ್ಲಿ ಕೂರಲು ವ್ಯವಸ್ಥೆ ಮಾಡಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಇರೋ ವಿದ್ಯಾರ್ಥಿಗಳು ಶಾಲೆಗೆ ಆಗಮಿಸದಂತೆ ಕ್ರಮವಹಿಸಬೇಕು. ಶಾಲಾ-ಕಾಲೇಜು ಹಂತದಲ್ಲಿ ಪೋಷಕರು, ಎಸ್ಡಿಎಂಸಿ ಸದಸ್ಯರು, ಶಾಲೆ ಶಿಕ್ಷಕರು ಒಳಗೊಂಡ ಸಮಿತಿ ರಚಿಸಿಕೊಂಡು ಕೊರೊನಾ ಮಾರ್ಗಸೂಚಿ ಪಾಲನೆಗೆ ಅಗತ್ಯ ಕ್ರಮವಹಿಸಬೇಕು.

Leave a Reply