ಇಂದಿಗೆ ಕೊರೊನಾ ಅನ್‍ಲಾಕ್ 1.0 ಮುಕ್ತಾಯ- ರಿವೀಲ್ ಆಗುತ್ತಾ ಮೋದಿಯ ಹೊಸ ಪ್ಲಾನ್?

ನವದೆಹಲಿ: ದೇಶದ್ಯಾಂತ ಕೊರೊನಾ ಸೋಂಕಿನ ಆರ್ಭಟದ ನಡುವೆ ಇಂದಿಗೆ ಅನ್‍ಲಾಕ್ 1.0 ಮುಕ್ತಾಯವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಜುಲೈನ 2ನೇ ಹಂತದ ಅನ್‍ಲಾಕ್ 2.0 ಲೆಕ್ಕಚಾರದಲ್ಲಿದ್ದು, ಮೋದಿಯ ಹೊಸ ಅನ್‍ಲಾಕ್ ಪ್ಲಾನ್ ಇಂದು ರಿವೀಲ್ ಆಗುತ್ತಾ, ಈ ಮೂಲಕ ಸೋಂಕಿಗೆ ಬ್ರೇಕ್ ಹಾಕಲು ಮೋದಿ ನಯಾ ಫಾರ್ಮುಲ ಪ್ರಕಟಿಸ್ತಾರಾ ಎಂಬ ಕುತೂಹಲ ಮೂಡಿದೆ.

ಕೇಂದ್ರದ ಆರೋಗ್ಯ ಇಲಾಖೆ ಈಗಾಗಲೇ ಸೋಂಕು ಹೆಚ್ಚಿರುವ ರಾಜ್ಯಗಳಲ್ಲಿ ಅಧ್ಯಯನ ನಡೆಸಿದೆ. ದೆಹಲಿ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡಿನಲ್ಲಿ ಅಧ್ಯಯನ ನಡೆಸಿದ್ದು, ಶಾಲಾ ಕಾಲೇಜ್ ಓಪನ್ ಬಗ್ಗೆ ಲೆಕ್ಕಾಚಾರ ಏನಿರಬಹುದು..?, ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಸುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಮೋದಿ ಸರ್ಕಾರದ ಮೂರು ಸಾಧ್ಯತೆಗಳು:
ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಯಥಾಸ್ಥಿತಿ ಮುಂದುರಿಸುವ ಸಾಧ್ಯತೆ ಇದೆ. ಅನ್ ಲಾಕ್ 2.0 ಜಾರಿ ಮಾಡದಿರಲು ನಿರ್ಧಾರ ಮಾಡಬಹುದು. ಜುಲೈ ಬದಲು ಅಗಸ್ಟ್ ನಲ್ಲಿ ಶಾಲೆ ಕಾಲೇಜು ಆರಂಭಿಸಲು ಸೂಚನೆ ನೀಡಬಹುದು. ಈಗಾಗಲೇ ಆಗಸ್ಟ್ 12 ವರೆಗೂ ರೈಲ್ವೆ ಸಂಚಾರ ನಿರ್ಬಂಧ ಹೇರಲಾಗಿದೆ. ಅಂತೆಯೇ ಜುಲೈ 15ವರೆಗೂ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಕೂಡ ಈಗಾಗಲೇ ಬ್ರೇಕ್ ಬಿದ್ದಿದೆ.

ಮತ್ತಷ್ಟು ಆರ್ಥಿಕ ಚಟುವಟಿಕೆಗಳಿಗೆ ಆರಂಭಕ್ಕೆ ಅವಕಾಶ ಮಾಡಿಕೊಡಬಹುದು. ಶಾಲಾ-ಕಾಲೇಜು ಹೊರತುಪಡಿಸಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ಕಂಟೈನ್ಮೆಂಟ್ ಝೋನ್ ಹೊರತಾದ ಪ್ರದೇಶದಲ್ಲಿ ಜಿಮ್, ಸಿನಿಮಾ ಮಂದಿರ ತೆರೆಯಲು ಅವಕಾಶ ಸಿಗಬಹುದು. ದೊಡ್ಡ ನಗರಗಳಲ್ಲಿ ಮುನ್ನೆಚ್ಚರಿಕೆಯೊಂದಿಗೆ ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ. ಸೋಂಕು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರ ನೀಡಬಹುದು.

ಎರಡನೇ ಸಾಧ್ಯತೆಯಂತೆ ಅನ್‍ಲಾಕ್ 2.0ನಲ್ಲಿ ವಿನಾಯ್ತಿ ವಿಸ್ತರಣೆ ಆಗಬಹುದು. ಆದರೆ ಕಂಟೈನ್ಮೆಂಟ್ ಝೋನ್‍ಗಳಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಭೋಪಾಲ್‍ನಂತ ದೊಡ್ಡ ನಗರಗಳಲ್ಲಿ ಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಟಫ್‍ರೂಲ್ಸ್ ಜಾರಿ ಮಾಡಬಹುದು. ಕಂಟೈನ್ಮೆಂಟ್ ಝೋನ್‍ಗಳನ್ನು ಕಟ್ಟುನಿಟ್ಟಾಗಿ ಸೀಲ್‍ಡೌನ್ ಮಾಡಬಹುದು. ಇನ್ನು ಟೆಸ್ಟಿಂಗ್ ಹೆಚ್ಚು ಮಾಡುವುದು, ರ‌್ಯಾಂಡಮ್  ಟೆಸ್ಟ್ ನಂತಹ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಬಹುದು.

Comments

Leave a Reply

Your email address will not be published. Required fields are marked *