ಶಾರ್ಜಾ: ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ಸುನಿಲ್ ನರೈನ್ ಬೌಲಿಂಗ್ ಶೈಲಿ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಗಿದೆ. ಪಂಜಾಬ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ನರೈನ್ ಅವರನ್ನು ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ 11ರ ಬಳಗದಿಂದ ಕೈಬಿಟ್ಟಿದ್ದು ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ.

ಕೆಕೆಆರ್ ತಂಡ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆಯಲು ನರೈನ್ ಅವರ ಬೌಲಿಂಗ್ ಪ್ರಮುಖ ಕಾರಣವಾಗಿತ್ತು. ಪಂದ್ಯದಲ್ಲಿ ನಿಕೂಲಸ್ ಪೂರನ್ ವಿಕೆಟ್ ಪಡೆದ ನರೈನ್ ಪ್ರಮುಖ ತಿರುವು ನೀಡಿದ್ದರು. ಆದರೆ ಪಂದ್ಯದ ಬಳಿಕ ನರೈನ್ ಅವರ ಬೌಲಿಂಗ್ ಶೈಲಿಯ ಕುರಿತು ಅಂಪೈರ್ ಗಳು ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಐಪಿಎಲ್ ಅಧಿಕಾರಿಗಳು ಕೂಡ ಕೆಕೆಆರ್ ತಂಡಕ್ಕೆ ಮಾಹಿತಿ ನೀಡಿದ್ದರು.

ನರೈನ್ ಅವರ ಬೌಲಿಂಗ್ ಶೈಲಿಯ ವಿರುದ್ಧ ಐಪಿಎಲ್ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿತ್ತು. ಈ ಹೇಳಿಕೆಯಲ್ಲಿ ಆನ್‍ಫೀಲ್ಡ್ ಅಂಪೈರ್ ಗಳು ಬೌಲಿಂಗ್ ಶೈಲಿಯ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ನಿಯಮಗಳ ಅನ್ವಯ ನರೈನ್ ಅವರ ಹೆಸರನ್ನು ವಾರ್ನಿಂಗ್ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ಆದರೆ ಇದೇ ಬೌಲಿಂಗ್ ಮುಂದುವರಿದರೇ ಮುಂದಿನ ಕ್ರಮ ನಡೆಯುವವರೆಗೂ ಅವರನ್ನು ಟೂರ್ನಿಯಿಂದ ಹೊರಗಿಡಲಾಗುವುದು ಎಂದು ಸ್ಪಷ್ಟಪಡಿಸಿತ್ತು. ಇದನ್ನೂ ಓದಿ: ಪೂರನ್ ಬೌಲ್ಡ್ , ನರೈನ್‌ಗೆ ಸಂಕಷ್ಟ – ಸ್ಪಷ್ಟನೆ ನೀಡಿದ ಕೋಲ್ಕತ್ತಾ
ಟಾಸ್ ಸಂದರ್ಭದಲ್ಲಿ ನರೈನ್ ಅವರನ್ನು ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್, ಫ್ರಾಂಚೈಸಿಗಳು ಈಗಾಗಲೇ ಈ ಕುರಿತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ನಾವು ನಮ್ಮ ಮನವಿಯನ್ನು ಮಾಡಿದ್ದು, ನೀವು ಇದನ್ನು ಗಮನಿಸಬಹುದು. ಅದರಲ್ಲಿ ನಮ್ಮ ಹೇಳಿಕೆಯನ್ನು ತಿಳಿಸಿದ್ದೇವೆ ಎಂದು ಹೇಳಿದ್ದರು.

ಉಳಿದಂತೆ ಬೆಂಗಳೂರು ವಿರುದ್ಧ ಪಂದ್ಯದಲ್ಲಿ ನರೈನ್ ಅವರನ್ನು ಕೈಬಿಟ್ಟಿದ್ದ ಕೆಕೆಆರ್ ಟಾಮ್ ಬ್ಯಾಂಟನ್‍ಗೆ ಅವಕಾಶ ನೀಡಿತ್ತು. ಒಂದೊಮ್ಮೆ ಪಂದ್ಯದಲ್ಲಿ ನರೈನ್ ಗೆ ಅವಕಾಶ ನೀಡಿ, ಮತ್ತೆ ಅನುಮಾಸ್ಪದ ಬೌಲಿಂಗ್ ಮಾಡಿದ್ದರೇ ಟೂರ್ನಿಯಿಂದಲೇ ಹೊರಗುಳಿಯ ಬೇಕಾದ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿಯೇ ಕೆಕೆಆರ್ ತಂಡ ನರೈನ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟಿತ್ತು.

ಇದೇ ಮೊದಲಲ್ಲ: ಸುನಿಲ್ ನರೈನ್ ವಿರುದ್ಧ ಇದೇ ಮೊದಲ ಬಾರಿಗೆ ಅನುಮಾನ್ಪದ ಬೌಲಿಂಗ್ ಆರೋಪ ಕೇಳಿ ಬಂದಿಲ್ಲ. 2015ರಲ್ಲೇ ಐಸಿಸಿ, ನರೈನ್ ಅವರಿಗೆ ನಿಷೇಧ ವಿಧಿಸಿತ್ತು. ಒಂದು ವರ್ಷದ ಅವಧಿಯಲ್ಲಿ ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದ ನರೈನ್ ಮತ್ತೆ ರೀ ಎಂಟ್ರಿ ನೀಡಿದ್ದರು.
ಮುಂಬೈ ಶುಕ್ರವಾರ ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಸದ್ಯ ಲಭ್ಯವಾಗಿರುವ ಅವಧಿಯಲ್ಲಿ ನರೈನ್ ಬೌಲಿಂಗ್ ಶೈಲಿಯಲ್ಲಿ ಮಾಡಿಕೊಳ್ಳಲಿದ್ದರೆಯೇ ಎಂಬ ಅನುಮಾನ ಮೂಡಿದೆ.


Leave a Reply