ಆರ್‌ಸಿಬಿ ಐಪಿಎಲ್ ಗೆಲ್ಲಲ್ಲ, ಸಿಎಸ್‍ಕೆ ಪ್ಲೇ ಆಫ್‍ಗೆ ಹೋಗಲ್ಲ: ನಿಖರ ಭವಿಷ್ಯ ಹೇಳಿದ್ದ ಅಭಿಮಾನಿ

– ವೈರಲ್ ಆಯ್ತು ಕ್ರಿಕೆಟ್ ಅಭಿಮಾನಿಯ ಹಳೆ ಟ್ವೀಟ್

ಅಬುಧಾಬಿ: ಕ್ರಿಕೆಟ್ ಅಭಿಮಾನಿಯೋರ್ವ ಐಪಿಎಲ್ ಆರಂಭಕ್ಕೂ ಮುನ್ನವೇ ಮಾಡಿರುವ ಟ್ವೀಟ್‍ವೊಂದು ಈಗ ಸಖತ್ ವೈರಲ್ ಆಗಿದೆ.

ಜುಲೈ 27ರಂದು ಕ್ರಿಕೆಟ್ ಅಭಿಮಾನಿ ಮಿತುಲ್ ಮಾಡಿರುವ ಟ್ವೀಟ್ ಇಂದು ಸಖತ್ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಐಪಿಎಲ್ ಆರಂಭ ಆಗವುದಕ್ಕಿಂತ ಮುನ್ನವೇ ಮಿತುಲ್ ಈ ಟ್ವೀಟ್ ಮಾಡಿದ್ದು, ಅವರು ಟ್ವೀಟ್‍ನಲ್ಲಿ ಹೇಳಿದ್ದ ತಂಡಗಳೇ ಐಪಿಎಲ್ ಪ್ಲೇ ಆಫ್‍ಗೆ ಸೆಲೆಕ್ಟ್ ಆಗಿವೆ. ಜೊತೆಗೆ ಆತ ಹೇಳಿರುವ ತಂಡಗಳೇ ಪ್ಲೇ ಆಫ್‍ನಿಂದ ಹೊರಗೆ ಬಿದ್ದಿರುವುದು ಈಗ ಅಶ್ಚರ್ಯಕ್ಕೆ ಕಾರಣವಾಗಿದೆ.

https://twitter.com/R3Mitul/status/1287794625831489539

ಈ ಹಿಂದೆ ಟ್ವೀಟ್ ಮಾಡಿರುವ ಮಿತುಲ್, ಕೊಹ್ಲಿ ಈ ಬಾರಿಯ ಐಪಿಎಲ್‍ನಲ್ಲಿ ಸಾಮಾನ್ಯವಾಗಿ ಆಡುತ್ತಾರೆ. ಈ ಬಾರಿಯ ಐಪಿಎಲ್‍ನಲ್ಲಿ ಸಿಎಸ್‍ಕೆ ಪ್ಲೇ ಆಫ್ ತಲುಪುವುದಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡ ಕೊನೆಯ ಸ್ಥಾನದಲ್ಲಿ ಉಳಿಯಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ಲೇ ಆಫ್ ತಲುಪುವುದಿಲ್ಲ. ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಗೆಲ್ಲುತ್ತದೆ. ಆರ್‌ಸಿಬಿ ತಂಡ ಮುಂಬೈ ಮತ್ತು ಡೆಲ್ಲಿ ತಂಡದ ಜೊತೆ ಪ್ಲೇ ಆಫ್ ಹೋಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸದ್ಯ ಮಿತುಲ್ ಟ್ವೀಟ್ ಮಾಡಿದಂತೆ ನಡೆದಿದ್ದು, ಸಿಎಸ್‍ಕೆ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶ ಮಾಡದೇ ಟೂರ್ನಿಯಿಂದ ಹೊರ ಬಿದ್ದಿದೆ. ಮೊದಲ ಮೂರು ತಂಡಗಳಾಗಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶ ಮಾಡಿವೆ. ಇದರ ಜೊತೆಗೆ ಕೊನೆ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದು, ಹೈದರಾಬಾದ್ ತಂಡ ಪ್ಲೇ ಆಫ್ ಪ್ರವೇಶ್ ಮಾಡಿದ್ದು, ಮಿತುಲ್ ಟ್ವೀಟ್ ವೈರಲ್ ಆಗುವಂತೆ ಮಾಡಿದೆ.

26 ವರ್ಷದ ಮಿತುಲ್ ಅಹಮದಾಬಾದ್‍ನಲ್ಲಿ ವಾಸವಿದ್ದಾರೆ. ಜೊತೆಗೆ ಅವರು ತನ್ನನ್ನು ತಾನು ಜ್ಯೋತಿಷ್ಯತಜ್ಞ ಎಂದು ಕರೆದುಕೊಳ್ಳುತ್ತಾರೆ. ಇವರು ಟ್ವೀಟ್‍ನಲ್ಲಿ ಹೇಳಿದಂತೆಯೇ ಐಪಿಎಲ್‍ನಲ್ಲಿ ನಡೆದಿದ್ದು, ಮಿತುಲ್ ಟ್ವೀಟ್ ಸಖತ್ ವೈರಲ್ ಆಗಿದೆ. ಜೊತೆಗೆ ಇವರ ಟ್ವೀಟ್ ಅನ್ನು ಸುಮಾರು 6 ಸಾವಿರ ಜನ ಲೈಕ್ ಮಾಡಿ ಮೂರು ಸಾವಿರ ಜನ ರೀಟ್ವೀಟ್ ಮಾಡಿದ್ದಾರೆ. ಸದ್ಯ ಮಿತುಲ್ ಹೇಳಿದಂತೆ ಹೈದರಾಬಾದ್ ತಂಡ ಕಪ್ ಗೆಲ್ಲಲಿದ್ಯಾ ಎಂಬುದು ಮುಂದೆ ತಿಳಿಯಲಿದೆ.

Comments

Leave a Reply

Your email address will not be published. Required fields are marked *