ಆರೋಪಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಿ- ಸಿಡಿ ಯುವತಿಯಿಂದ ವೀಡಿಯೋ ಬಿಡುಗಡೆ

– ನನ್ನ ಹೇಳಿಕೆಗೆ ನಾನು ಬದ್ಧ

ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣ ನಿನ್ನೆ ರೋಚಕ ತಿರುವು ಪಡೆದುಕೊಂಡಿತ್ತು. ಇದೀಗ ಸಂತ್ರಸ್ತೆ ನಿನ್ನೆಯ ಗೊಂದಲಗಳಿಗೆ ವೀಡಿಯೋ ಬಿಡುಗಡೆಗೊಳಿಸಿ ಸ್ಪಷ್ಟನೆ ನೀಡಿದ್ದಾರೆ.

ಯುವತಿಯ ಸ್ಪಷ್ಟನೆ: ಯುವತಿ ಉಲ್ಟಾ ಹೊಡೆದಿದ್ದಾರೆ ಮತ್ತು ಇದೊಂದು ಹನಿಟ್ರ್ಯಾಪ್ ಅಂತ ಸುದ್ದಿಗಳು ಬಿತ್ತರವಾಗಿರೋದನ್ನು ನೋಡಿದೆ. ಆದ್ರೆ ಇದೆಲ್ಲ ಶುದ್ಧ ಸುಳ್ಳು. ಕೆಲ ಸಾಕ್ಷ್ಯಗಳನ್ನ ನೀಡುವದರಿಂದ ಎಸ್‍ಐಟಿ ಅಧಿಕಾರಿಗಳ ಬಳಿ ಹೋಗಿದ್ದೆ. ಆದ್ರೆ ಆಚೆ ಬರುವಷ್ಟರಲ್ಲಿ ಇದು ಮಗದೊಂದು ರೂಪ ಪಡೆದುಕೊಂಡಿತ್ತು. ನಾನು ಅಧಿಕಾರಿಗಳಿಗೆ ಎವಿಡೆನ್ಸ್ ನೀಡಿದ್ದೇನೆ ಹೊರತಾಗಿಯೇ ಯಾವುದೇ ಪೇಪರ್ ಗಳಿಗೆ ಸಹಿ ಮಾಡಿಲ್ಲ. ತಂದೆ-ತಾಯಿ ಜೊತೆ ಮಾತನಾಡಿದ್ದೇನೆ. ಆದ್ರೆ ಅವರು ನನ್ನ ಮನವೊಲಿಸಿಲ್ಲ. ಮನವೊಲಿಸಿದ್ರೂ ಅಲ್ಲಿ ಸತ್ಯವನ್ನೇ ಹೇಳಬೇಕು. ನ್ಯಾಯಾಧೀಶರ ಮುಂದೆ ದಾಖಲಿಸಿರುವ ನನ್ನ ಹೇಳಿಕೆಗೆ ನಾನು ಬದ್ಧಳಾಗಿದ್ದೇನೆ.

ನನ್ನ ಕುಟುಂಬ ಮತ್ತು ಗೆಳೆಯ ಆಕಾಶ್ ನನ್ನು ಸಹ ಕರೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರ ಜೊತೆಗೆ ನಮ್ಮ ಸಂಬಂಧಿಗಳಿಗೂ ನೋಟಿಸ್ ನೀಡಲಾಗುತ್ತಿದೆ. ಈ ಪ್ರಕರಣದ ಆರೋಪಿಯನ್ನು ಕೋವಿಡ್ ನೆಪ ಹೇಳಿ ವಿಚಾರಣೆ ಮಾಡೋದರಿಂದ ಹಿಂದೆ ಸರಿದಿದ್ದಾರೆ. ಮೊದಲು ಆರೋಪಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿ. ಅವರ ಮನೆಯವರಿಗೂ ಎಸ್‍ಐಟಿ ನೋಟಿಸ್ ನೀಡಲಿ ಎಂದು ಸಂತ್ರಸ್ತೆ ಒತ್ತಾಯಿಸಿದಾರೆ.

ನಿನ್ನೆ ನಡೆದಿದ್ದೇನು? : ನಾನು ಮಾಡದ ತಪ್ಪಿಗೆ ನಾನು ಶಿಕ್ಷೆ ಅನುಭವಿಸಿದ್ದು, ಒತ್ತಾಯ ಪೂರಕ ಹೇಳಿಕೆ ಕೊಡಿಸಿದರು. ನಂಬಿದವರಿಂದಲೇ ನಾನು ಮೋಸ ಹೋಗಿದ್ದೇನೆ. ನನ್ನ ಮರ್ಯಾದೆ ಹಾಳಾಗಿದ್ದು, ಪ್ರಕರಣ ಇಷ್ಟರ ಮಟ್ಟಿಗೆ ಆಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ನ್ಯಾಯ ಸಿಗುವ ನಿರೀಕ್ಷೆ ಇತ್ತು, ಆದ್ರೆ ನನಗೆ ಗೊತ್ತಿಲ್ಲದೆ ಕೆಲವೊಂದು ವಿಚಾರಗಳು ನಡೆಯಿತು. ನನ್ನ ಬೆನ್ನ ಹಿಂದೆ ನಡೆದ ವಿಚಾರ ತಿಳಿದುಕೊಳ್ಳೋದಕ್ಕೆ ಸಾಕಷ್ಟು ದಿನಗಳೇ ಆಯಿತು. ನನ್ನ ಸ್ನೇಹಿತ ಆಕಾಶ್ ಗೆ ಕೂಡ ಕೆಲವೊಂದು ವಿಚಾರ ಮುಚ್ಚು ಮರೆ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾರೆ ಎನ್ನಲಾಗಿತ್ತು.

ಅಪ್ಪ ಅಮ್ಮನಿಗೂ ಕೂಡ ನಾನು ನೋವು ನೀಡಿದ್ದೇನು. ಒಳ್ಳೆಯ ಮಗಳಾಗಬೇಕು ಅಂತ ನನ್ನ ಅಪ್ಪ ನಿರೀಕ್ಷೆ ಮಾಡಿದ್ದರು. ನನ್ನನ್ನು ಕೂಡ ಕೆಲವೊಮ್ಮೆ ದೂರ ಇಟ್ಟು ಮಾತಕತೆ ಮಾಡಿರುವ ಬಗ್ಗೆ ಅನುಮಾನ ಇದೆ. ಆದರೆ ನಿಜವಾಗಲೂ ಅನ್ಯಾಯಕ್ಕೆ ಒಳಗಾದವಳು ನಾನು ಮಾತ್ರ. ನಾನು ಸತ್ಯವನ್ನು ಮಾತ್ರ ಹೇಳಬೇಕದು ಬಯಸಿದ್ದೀನಿ. ನನ್ನ ಈ ಹೇಳಿಕೆಗೆ ನಾನು ಬದ್ಧವಾಗಿರ್ತೀನಿ ಎಂದು ಯುವತಿ ಎಸ್‍ಐಟಿ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

Comments

Leave a Reply

Your email address will not be published. Required fields are marked *