ಆರೋಪಿಗಳ ಪತ್ತೆಗೆ ತೆರಳಿದ್ದ ಎಸ್‍ಐ ಹತ್ಯೆ- ಶಾಕ್‍ನಿಂದ ತಾಯಿಯೂ ನಿಧನ

– ಒಂದೇ ಕಡೆ ಇಬ್ಬರ ಅಂತ್ಯಸಂಸ್ಕಾರ

ಲಕ್ನೋ: ಆರೋಪಿ ಪತ್ತೆಗೆ ಹೋಗಿ ಜನರಿಂದ ಥಳಿತಕ್ಕೊಳಗಾಗಿ ಎಸ್‍ಐ ಒಬ್ಬರು ಪ್ರಾಣ ಬಿಟ್ಟಿದ್ದು, ಇತ್ತ ಮಗನ ಸಾವಿನ ಸುದ್ದಿ ಕೇಳಿ ಶಾಕ್ ಒಳಗಾದ ಎಸ್‍ಐ ತಾಯಿ ಕೂಡ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಮೃತ ಎಸ್‍ಐಯನ್ನು ಅಶ್ವಿನಿ ಕುಮಾರ್ ಎಂದು ಗುರುತಿಸಲಾಗಿದೆ. ಏಪ್ರಿಲ್ 10ರಂದು ಕಿಶನ್ ಗಂಜ್ ಪೊಲೀಸ್ ಠಾಣೆಯ ಅಧಿಕಾರಿ ಅಶ್ವಿನ್ ಕುಮಾರ್ ಅವರು ಪಶ್ಚಿಮ ಬಂಗಾಳದ ಉತ್ತರ್ ದಿನಾಜ್ ಪುರ್ ಗ್ರಾಮಕ್ಕೆ ಆರೋಪಿಯೊಬ್ಬನ ಪತ್ತೆಗೆ ತೆರಳಿದ್ದರು. ಈ ವೇಳೆ ಅಲ್ಲಿನ ಸ್ಥಳೀಯರು ಅಶ್ವಿನ್ ವರನ್ನು ಥಳಿಸಿ ಕೊಲೆ ಮಾಡಿದ್ದರು. ಇತ್ತ ಮಗನ ಸಾವಿನ ಸುದ್ದಿಯನ್ನು ಕೇಳಿದ ತಾಯಿ ಕೂಡ ಆಘಾತಗೊಂಡು ಸಾವನ್ನಪ್ಪಿದ್ದಾರೆ. ಇಬ್ಬರ ಅಂತ್ಯಕ್ರಿಯೆಯನ್ನು ಬಿಹಾರದ ಪುರ್ನಿಯಾ ಜಿಲ್ಲೆಯ ಹುಟ್ಟೂರಿನಲ್ಲಿ ಒಟ್ಟಿಗೆ ನೆರವೇರಿಸಲಾಗಿದೆ.

ಮೋಟಾರ್ ಸೈಕಲ್ ಕಳ್ಳತನ ಪ್ರಕರಣದ ಆರೋಪಿಗಳ ಮತ್ತೆಗೆ ಅಶ್ವಿನಿ ಕುಮಾರ್ ಮತ್ತು ಅವರ ತಂಡ ಪಶ್ಚಿಮ ಬಂಗಾಳದ ಪಂಜಿಪಾರ್ ಪೊಲೀಸ್ ಠಾಣಾ ವ್ಯಾಪ್ತಿಗೆ ತೆರಳಿತ್ತು. ಅಂತೆಯೇ ಗೋಲಾಪೋಖಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಂಟಪಾಡಾ ಗ್ರಾಮದಲ್ಲಿ ಅಶ್ವಿನಿ ಕುಮಾರ್ ಅವರ ತಂಡ ಮಧ್ಯರಾತ್ರಿ ದಾಳಿ ನಡೆಸಿದೆ. ಅಲ್ಲಿಂದ ಉತ್ತರ ದಿನಾಜ್ ಪುರ್ ಗ್ರಾಮ ತಲುಪಿದಾಗ ಅಲ್ಲಿನ ಜನ ಕಲ್ಲು ಮತ್ತು ದೊಣ್ಣೆಗಳಿಂದ ಅಶ್ವಿನಿ ಕುಮಾರ್ ಮೇಲೆ ಹಿಗ್ಗಾಮುಗ್ಗವಾಗಿ ಹಲ್ಲೆ ನಡೆಸಿದೆ.

ಗಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅಶ್ವಿನಿ ಅವರನ್ನು ಕುಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಮೃತಪಟ್ಟಿದ್ದಾರೆ. ಇತ್ತ ಮಗನ ಸಾವಿನಿಂದ ಶಾಕ್ ಆದ ತಾಯಿಯೂ ಅಂದೇ ಇಹಲೋಕ ತ್ಯಜಿಸಿದ್ದಾರೆ.

Comments

Leave a Reply

Your email address will not be published. Required fields are marked *