‘ಆತ್ಮನಿರ್ಭರ’ ಪ್ಯಾಕೇಜ್‍ಗೆ ಕೇಂದ್ರ ಸಂಪುಟ ಸಮ್ಮತಿ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದ 20 ಲಕ್ಷ ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್‍ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇವತ್ತು ಅನುಮೋದನೆ ನೀಡಿದೆ.

ಪ್ರಧಾನಿ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ರೈತರು, ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗೋ ಪ್ಯಾಕೇಜ್‍ಗೆ ಒಪ್ಪಿಗೆ ನೀಡಲಾಯಿತು. ರೈತರು ಉತ್ಪನ್ನಗಳನ್ನು ಅವರ ಇಚ್ಛಿತ ಸ್ಥಳಗಳಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಎಂಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮಧ್ಯೆ, ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 11 ರೂಪಾಯಿ ಹೆಚ್ಚಾಗಿದೆ.

ಯಾವುದಕ್ಕೆ ಸಮ್ಮತಿ:
– ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ
– ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಕಷ್ಟ ನಿಧಿಗೆ 40 ಸಾವಿರ ಕೋಟಿ ರೂ.
– ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಷೇರು ಮಾರುಕಟ್ಟೆ ಪ್ರವೇಶಿಸುವ ಸಲುವಾಗಿ 50 ಸಾವಿರ ಕೋಟಿ ರೂ.
– ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿ ಸಾಲ
– ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಸ್ಥಾಪನೆ
– 3 ಲಕ್ಷ ರೂಪಾಯಿವರೆಗಿನ ಬೆಳೆ ಸಾಲದ ಮೇಲಿನ ಬಡ್ಡಿ ವಿನಾಯ್ತಿ ಅವಧಿ ಆಗಸ್ಟ್ 31ರವರೆಗೆ ವಿಸ್ತರಣೆ
– 14 ಮುಂಗಾರು ಬೆಳೆಗಳ ಮೇಲಿನ ಬೆಂಬಲ ಬೆಲೆ ಶೇಕಡಾ 50-80ರ ನಡುವೆ ಹೆಚ್ಚಳ
– ರೈತರು ತಾವು ಬಯಸಿದ ಸ್ಥಳಗಳಲ್ಲಿ ಉತ್ಪನ್ನ ಮಾರಲು ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ

Comments

Leave a Reply

Your email address will not be published. Required fields are marked *