ಆಡಿದ ಮಾತಿಗೆ ಪ್ರಾಯಶ್ಚಿತಕ್ಕೆ ಮುಂದಾದ ಚಕ್ರವರ್ತಿ

ಬಿಗ್‍ಬಾಸ್ ಮನೆಯಲ್ಲಿ ನಗು, ಅಳುವಿನ ಕುರಿತಾಗಿ ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿದ್ದರು. ಈ ವೇಳೆ ಚಕ್ರವರ್ತಿಯವರು ಹೇಳಿದ ಮಾತನ್ನು ಕೇಳಿ ಶುಭಾ ಕಣ್ಣೀರು ಹಾಕಿದ್ದಾರೆ.

ಶುಭಾ ಹುಡುಗ ಬೇರೆ ಹುಡುಗಿಯನ್ನು ನೋಡಿಕೊಳ್ಳುತ್ತಾನೆ ಎಂದು ಚಕ್ರವರ್ತಿ ಹೇಳಿ ಮುಗಿಸುವಷ್ಟರಲ್ಲಿ ಶುಭಾ ಕಣ್ಣೀರು ಹಾಕಿದ್ದಾರೆ. ಹಾಗೇ ಹೇಳಬೇಡಿ ಅಂದಿದ್ದಾರೆ. ನಾನು ನಿನ್ನ ಅಳಿಸಬೇಕು ಅಂತಾ ಹಾಗೇ ಹೇಳಿದೆ. ಕ್ಷಮಿಸು ಎಂದು ಚಕ್ರವರ್ತಿ ಹೇಳಿದ್ದಾರೆ. ಆಗ ಅಲ್ಲಿಯೇ ಇದ್ದ ಮನೆಯ ಸ್ಪರ್ಧಿಗಳು ಏನು ಮಾತನಾಡದೇ ಸುಮ್ಮನೆ ಕುಳಿತಿದ್ದಾರೆ.

ಈ ವಿಚಾರವಾಗಿ ಮನನೊಂದ ಚಕ್ರವರ್ತಿ ನಾನು ಹಾಗೇ ಹೇಳಬಾರದಿತ್ತು. ತಪ್ಪು ಮಾಡಿದೆ. ನಾನು ಪ್ರಾಯಶ್ಚಿತ ಮಾಡಿಕೊಳ್ಳಬೇಕು ಇವತ್ತು ನನಗೆ ಊಟ ಬೇಡ. ನಾನು ಎಷ್ಟು ಕ್ಷಮೆ ಕೇಳಿದರೂ ಸಾಲದು. ನಾನು ಕಷ್ಟವನ್ನು ಅನುಭವಿಸಿದ್ದೇನೆ ಎಂದು ಮಂಜು ಬಳಿ ಹೇಳಿಕೊಂಡಿದ್ದಾರೆ.

ನನಗೆ ಬೇಸರವಿಲ್ಲ. ನೀವು ಊಟ ಮಾಡಿ. ನನಗೆ ಅವನು ಜೀವನದಲ್ಲಿ ತುಂಬಾ ಮುಖ್ಯ ಎಂದು ಶುಭಾ ಚಕ್ರವರ್ತಿ ಅವರಿಗೆ ಹೇಳಿದ್ದಾರೆ. ಇಲ್ಲ ನಾನು ಯಾವತ್ತೂ ಹಾಗೇ ಮಾತನಾಡುವುದಿಲ್ಲ. ನನ್ನ ತಂಗಿಯ ಹಾಗೇ ನೀನು ನಿನಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಚಕ್ರವರ್ತಿ ಶುಭಾ ಅವರಿಗೆ ಹೇಳಿದ್ದಾರೆ.

ಆಡಿದ ಮಾತನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ ಆದರೆ ಪ್ರಾಯಶ್ಚಿತಮಾಡಿಕೊಳ್ಳ ಬಹುದು ಎಂದು ಮಾತು ಆರಂಭಿಸಿದ ಸುದೀಪ್ ಈ ವಿಚಾರವನ್ನು ಕಟ್ಟೆ ಪಂಚಾಯ್ತಿಯಲ್ಲಿ ಮಾತನಾಡಿದ್ದಾರೆ. ನಾನು ಹಾಗೇ ಸರ್… ಚಕ್ರವರ್ತಿ ಅವರು ಹೇಳಿದ ಮಾತು ಬೇಸರವಾಯಿತ್ತು ಎಂದು ಶುಭಾ ಅವರು ಸುದೀಪ್ ಬಳಿ ಹೇಳಿದ್ದಾರೆ.

ಶುಭಾ ಅವರಿಗೆ ಹೇಳಿದ ಮಾತು ತುಂಬಾ ಬೇಸರವಾಯುತು. ನಾನು ನೊಂದಿದ್ದೇನೆ. ನಾನು ಹಾಗೇ ಹೇಳಬಾರದಿತ್ತು. ನನಗೂ ಒಬ್ಬಳು ಮಗಳಿದ್ದಾಳೆ. ಯಾವುದೇ ವ್ಯಕ್ತಿಗೆ ಬೇಕು ಅಂತಾ ನೋವು ಕೊಡಬಾರದು ಸರ್ ಎಂದು ಚಕ್ರವರ್ತಿ ಹೇಳಿದ್ದಾರೆ. ನೀವು ನಿಮ್ಮ ತಪ್ಪು ಅರಿತುಕೊಂಡು ಕ್ಷಮೆ ಕೇಳಿದ್ದಿರಾ. ನಿಮ್ಮ ಮನಸ್ಸಿಗೆ ಅನ್ನಿಸಿದಂತೆ ಹೋಗಿ ಪ್ರಾಯಶ್ಚಿತ ಮಾಡಿಕೊಂಡಿದ್ದಿರಾ ಒಳ್ಳೆಯದು ಎಂದು ಸುದೀಪ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *