– ಪ್ರವಾಸಿ ತಾಣಗಳಿಂದಲೇ ಕೋವಿಡ್ ಹಬ್ಬುವ ಎಚ್ಚರಿಕೆ
ಬೆಂಗಳೂರು: ಎರಡೂವರೆ ತಿಂಗಳ ಸಂಪೂರ್ಣ ಅನ್‍ಲಾಕ್ ಬಳಿಕ ಇವತ್ತಿನಿಂದ ವಾರಾಂತ್ಯದ ಲಾಕ್‍ಡೌನ್ ಇರಲ್ಲ. ಜುಲೈ 3ರಂದು ಹೊರಡಿಸಿದ್ದ ಅನ್‍ಲಾಕ್ ಮಾರ್ಗಸೂಚಿಯ ಪ್ರಕಾರ ಇವತ್ತಿನಿಂದ ಮೊದಲ ವೀಕೆಂಡ್ ಅನ್‍ಲಾಕ್. ಶನಿವಾರ, ಭಾನುವಾರವೂ ಇನ್ಮುಂದೆ ಉಳಿದ ದಿನಗಳಂತೆ ಬ್ಯುಸಿ ಆಗಿಯೇ ಇರಲಿದೆ.
ವಾರಾಂತ್ಯದಲ್ಲಿ ಪ್ರವಾಸಿ ತಾಣಗಳು, ಕಾಡು-ಮೇಡು, ದೇವಸ್ಥಾನ, ಮಾಲ್ ಹೀಗೆ ಎಂಜಾಯ್ ಮಾಡಬೇಕು ಅನ್ನೋರಿಗೆ ಯಾವ ಅಡ್ಡಿಯೂ ಇರಲ್ಲ. ಆದರೆ ಸಂಪೂರ್ಣ ಅನ್‍ಲಾಕ್‍ನ ಜೊತೆ-ಜೊತೆಗೆ ಈಗ ಮೂರನೇ ಕೋವಿಡ್ ಅಲೆಯ ಆತಂಕದ ಭೂತ ಬೆನ್ನು ಬಿದ್ದಿದೆ. ಆಗಸ್ಟ್ ಗೆ ರಾಜ್ಯದಲ್ಲಿ ಮೂರನೇ ಅಲೆ ಅಪ್ಪಳಿಸಬಹುದು ಎಂದು ಕೋವಿಡ್ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಇದರ ನುಡುವೆಯೇ ದೇಶದಲ್ಲಿ ಕೋವಿಡ್ ನಿಯಮಗಳನ್ನು ಮರೆತು ಜನ ಓಡಾಡ್ತಿರುವ ಬಗ್ಗೆ ಪ್ರಧಾನಿ ಮೋದಿಯೂ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ಪ್ರವಾಸಿ ಕೇಂದ್ರಗಳಿಗೆ ಅನ್‍ಲಾಕ್ ಬಳಿಕ ಜನ ಮುಗಿಬೀಳುತ್ತಿರ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದಿಂದ ಎಚ್ಚರಿಕೆ:
ಹೊಸ ಪ್ರಕರಣಗಳ ಸಂಖ್ಯೆ 10 ಪಟ್ಟು ಕಮ್ಮಿಯಾದರೂ ಅಪಾಯ ತಪ್ಪಿಲ್ಲ. ಅಪಾಯದಿಂದ ಹೊರಬರಲು 3 ವಾರ ಬೇಕಾಗುತ್ತದೆ. ಜೂನ್ ಕೊನೆ ವಾರದಲ್ಲಿ ದಿನದ ಸರಾಸರಿ ಸೋಂಕು 35-48 ಸಾವಿರಷ್ಟಿದೆ. ದೇಶದಲ್ಲಿ ಎರಡು ರಾಜ್ಯಗಳಿಂದಲೇ ಶೇ. 53ರಷ್ಟು ಸೋಂಕು ವರದಿ ಆಗ್ತಿದೆ. ಕೇರಳ ಶೇ.32, ಮಹಾರಾಷ್ಟ್ರದಿಂದ ಶೇ.21ರಷ್ಟು ಸೋಂಕು ಪತ್ತೆ ಆಗ್ತಿದೆ. 60 ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಶೇ.10ಕ್ಕಿಂತಲೂ ಹೆಚ್ಚಿದೆ. ರಾಜಸ್ಥಾನ -10, ಕೇರಳ- 8, ಮಹಾರಾಷ್ಟ್ರ, ಒಡಿಶಾ-2 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳವಾಗುತ್ತಿದೆ. ಈಶಾನ್ಯ ಭಾರತದ ರಾಜ್ಯಗಳಲ್ಲೂ ಸೋಂಕಿನ ಪ್ರಮಾಣ ಏರಿಕೆ ಆಗಿದ್ದು, ಅನ್‍ಲಾಕ್ ಆಗಿದೆ ಎಂದರೆ ಕೋವಿಡ್ 2ನೇ ಅಲೆ ಮುಗಿಯಿತು ಎಂದಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ 60ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಶೇಕಡಾ 10ಕ್ಕಿಂತ ಹೆಚ್ಚಿದೆ. ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ನಿನ್ನೆಗೆ ಶೇಕಡಾ 1.48ರಷ್ಟಿದೆ. ಕರ್ನಾಟಕದಲ್ಲಿ ಸೋಂಕು ಇಳಿಕೆ ಆಗಿದ್ದರೂ ರಾಜ್ಯದ 10 ಜಿಲ್ಲೆಗಳಲ್ಲಿ ಸೋಂಕಿನ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಬೆಂಗಳೂರಲ್ಲಿ ಸೋಂಕಿನ ಪ್ರಮಾಣ ಶೇಕಡಾ 5ಕ್ಕಿಂತಲೂ ಕಡಿಮೆ ಆಗಿದ್ದರೂ ಈ ಜಿಲ್ಲೆಗಳ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದೆ.

ಕರ್ನಾಟಕದ ಡೇಂಜರ್ ಜಿಲ್ಲೆಗಳು: ಬೆಂಗಳೂರು, ಮೈಸೂರು, ಹಾಸನ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಕೊಡಗು, ತುಮಕೂರು , ಶಿವಮೊಗ್ಗ, ಉಡುಪಿ ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅಡ್ಡಿಪಡಿಸಲು ತಮಿಳುನಾಡು ಸರ್ಕಾರದಿಂದ ಹೊಸ ತಂತ್ರ
‘ದ್ವೇಷ ಪ್ರವಾಸ’:
ಅನ್‍ಲಾಕ್ ಬಳಿಕ ಜನ ಓಡಾಟ ಹೆಚ್ಚಳ ಅದರಲ್ಲೂ ಪ್ರವಾಸಿ ತಾಣಗಳಿಗೆ ಜನ ದಂಡೇ ನುಗ್ಗುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ. ಮತ್ತೆ ಸೋಂಕು ಹೆಚ್ಚಳಕ್ಕೆ ಇದೇ ಕಾರಣವಾಗಬಹುದು ಎಚ್ಚರಿಸಿದೆ. ಲಾಕ್‍ಡೌನ್‍ನಿಂದಾಗಿ ಎಲ್ಲೂ ಹೋಗಲಾಗದೇ ಮನೆಯಲ್ಲಿ ಕೂತಿದ್ದ ಜನ ಈಗ ಅನ್‍ಲಾಕ್ ಬಳಿಕ ಏಕಾಏಕಿ ಪ್ರವಾಸಿ ಕೇಂದ್ರಗಳಿಗೆ ನುಗ್ಗುತ್ತಿರುವುದನ್ನು ಆರೋಗ್ಯ ಸಚಿವಾಲಯ `ದ್ವೇಷ ಪ್ರವಾಸ’ ಎಂದು ಕರೆದಿದೆ. ಪ್ರವಾಸಿತಾಣಗಳೇ ಕೋವಿಡ್ 3ನೇ ಅಲೆಯ ಹಾಟ್‍ಸ್ಪಾಟ್ ಆಗಬಹುದು ಮತ್ತು ಪ್ರವಾಸಿತಾಣಗಳಿಗೆ ಹೋಗುವವರೇ ಸೋಂಕನ್ನು ಹಬ್ಬಿಸಬಹುದು ಎನ್ನುವುದು ಇದರ ಅರ್ಥ. ಅನ್‍ಲಾಕ್ ಆಗಿದೆ ಎಂದರೆ ಕೋವಿಡ್‍ನ 2ನೇ ಅಲೆ ಮುಗಿದಿದೆ ಎಂದಲ್ಲ, ಪ್ರವಾಸಿ ತಾಣಗಳಿಂದಲೇ ಕೋವಿಡ್ ಸೋಂಕು ಹೆಚ್ಚಾಗಬಹುದು ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್‍ವಾಲ್ ಎಚ್ಚರಿಸಿದ್ದಾರೆ. ಇದನ್ನೂ ಓದಿ: ವ್ಯಾಕ್ಸಿನ್‍ಗಾಗಿ ನೂಕು ನುಗ್ಗಲು- ಅಂತರ ಕಾಯ್ದುಕೊಳ್ಳದೆ ಆತಂಕ ಸೃಷ್ಟಿಸಿದ ಜನ

ಕರ್ನಾಟಕದಲ್ಲಿ ಮೂರನೇ ಅಲೆ:
ಕೇರಳ, ಮಹಾರಾಷ್ಟ್ರದಲ್ಲಿ ಆಗ್ತಿರುವ ಸೋಂಕಿನ ಏರಿಕೆಯ ಪ್ರಮಾಣವನ್ನು ನೋಡಿದರೆ ಆ ಎರಡೂ ರಾಜ್ಯಗಳಲ್ಲಿ ಕೋವಿಡ್ 3ನೇ ಅಲೆ ಶುರು ಆಗಿದೆ ಎನ್ನುವುದು ಆರೋಗ್ಯ ತಜ್ಞರ ಎಚ್ಚರಿಕೆ ಮಾತು. 10 ದಿನಗಳ ಅಂತರದಲ್ಲಿ ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಳ ಆಗಿದೆ. ಈ ಹಿಂದಿನ ಮೊದಲ, 2ನೇ ಅಲೆಯ ಶುರು ಆಗಿದ್ದರ ಸ್ವರೂಪದ ನೋಡಿದರೆ ಈ ಎರಡೂ ರಾಜ್ಯಗಳಲ್ಲಿ ಅಲೆ ಶುರುವಾದ ಮೂರು ವಾರದಲ್ಲೇ ಕರ್ನಾಟಕದಲ್ಲೂ ಸೋಂಕು ಹೆಚ್ಚಳ ಆಗಿತ್ತು. ಹೀಗಾಗಿ ಕರ್ನಾಟಕದಲ್ಲೂ ಆಗಸ್ಟ್ ವೇಳೆಗೆ ಮೂರನೇ ಅಲೆ ಅಪ್ಪಳಿಸಬಹುದು ಎನ್ನುವುದು ತಜ್ಞರ ಎಚ್ಚರಿಕೆ ಮಾತು. ಹೀಗಾಗಿ ಈ ಎರಡೂ ರಾಜ್ಯಗಳಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡುವುದು, ಅನಗತ್ಯ ಓಡಾಟಕ್ಕೆ ನಿರ್ಬಂಧ ಹೇರುವುದು ಮುಂತಾದ ಕ್ರಮಗಳಿಂದ ಸೋಂಕಿನ ಹಬ್ಬವಿಕೆ ವೇಗ ಕಡಿಮೆ ಮಾಡಬಹುದು ಎನ್ನುವುದು ಆರೋಗ್ಯ ತಜ್ಞರ ಸಲಹೆಗಳು.

ಕೊಡಗಿನ ಎಂಟ್ರಿಗೆ ಕೋವಿಡ್ ಟೆಸ್ಟ್ ಕಡ್ಡಾಯ:
ಕೊಡಗು ಜಿಲ್ಲೆ ಅನ್‍ಲಾಕ್ ಆಗಿದೆ. ಜುಲೈ 4ರಿಂದ ಇಡೀ ರಾಜ್ಯವೇ ಅನ್‍ಲಾಕ್ ಆಗಿದ್ದರೂ ಸೋಂಕಿನ ಪ್ರಮಾಣ ಹೆಚ್ಚಿದ ಕಾರಣ ಕೊಡಗು ಅನ್ ಲಾಕ್ ಆಗಿರಲಿಲ್ಲ. ಈಗ ಉಳಿದ ಜಿಲ್ಲೆಗಳಂತೆ ಕೊಡಗು ಸಂಪೂರ್ಣ ಲಾಕ್ ಮುಕ್ತವಾಗಿದೆ. ಆದರೆ ಕೊಡಗು ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಪ್ರವಾಸ ಹೋಗುವ ಹೊರ ಜಿಲ್ಲೆಯವರು ಮತ್ತು ಹೊರರಾಜ್ಯದವರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ. ನೆಗೆಟಿವ್ ರಿಪೋರ್ಟ್ ಇದ್ದರಷ್ಟೇ ಬೇರೆ ಜಿಲ್ಲೆಯ ಪ್ರವಾಸಿಗರಿಗೆ ಜಿಲ್ಲೆಗೆ ಅನುಮತಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದ್ದಾರೆ.

ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲಾ ಗಡಿಗಳಲ್ಲಿ ತಪಾಸಣ ಕೇಂದ್ರಗಳನ್ನು ಸ್ಥಾಪಿಸಿ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು ಉತ್ತರಾಖಂಡ್ ರಾಜ್ಯದ ಮಸ್ಸೂರಿಯಲ್ಲೂ ಪ್ರವಾಸಿಗರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿದ್ದು, ಜಲಪಾತಗಳಿಗೆ ಏಕಕಾಲದಲ್ಲಿ 50 ಮಂದಿಗಷ್ಟೇ ಅವಕಾಶ ಮತ್ತು ಅರ್ಧಕ್ಕಿಂತ ಹೆಚ್ಚು ಹೊತ್ತು ಯಾರೂ ಅಲ್ಲಿರುವಂತಿಲ್ಲ ಎಂಬ ನಿಯಮವನ್ನು ಅಲ್ಲಿನ ಜಿಲ್ಲಾಡಳಿತ ಮಾಡಿದೆ. ಇದನ್ನೂ ಓದಿ: 350 ವಾಹನ, 5 ಸಾವಿರ ಜನ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ಜಾತ್ರೆ
ಜನರ ನಿರ್ಲಕ್ಷ್ಯದಿಂದಲೇ ಮತ್ತೆ ಕೊರೊನಾ – ಮೋದಿ ಆತಂಕ https://t.co/HJZJlJvzsx#NarendraModi #Corona #Covid19 #CoronaVirus #India
— PublicTV (@publictvnews) July 9, 2021
3ನೇ ಎದುರಿಸಲು ಸರ್ಕಾರದ ಸಿದ್ಧತೆ:
ಆಗಸ್ಟ್ ವೇಳೆಗೆ ಕರ್ನಾಟಕದಲ್ಲಿ ಕೋವಿಡ್ 3ನೇ ಅಲೆ ಅಪ್ಪಳಿಸಬಹುದು ಎಂದು ಕೋವಿಡ್ ತಜ್ಞರ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. 3ನೇ ಅಲೆ ಎದುರಿಸಲು ಸರ್ಕಾರ ಸಿದ್ಧತೆ ತೀವ್ರಗೊಳಿಸಬೇಕಿದೆ.
* 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹಬ್ಬುವ ಆತಂಕ
* ಮಕ್ಕಳ ಚಿಕಿತ್ಸೆಗೆ ಅಗತ್ಯವಾದ ಐಸಿಯು, ವೆಂಟಿಲೇಟರ್, ಹೆಚ್‍ಡಿಯು ಬೆಡ್ ವ್ಯವಸ್ಥೆ
* ಮಕ್ಕಳ ಚಿಕಿತ್ಸೆಗೆ ಮಕ್ಕಳ ವೈದ್ಯರು ಕಡಿಮೆ ಇರುವುದು ಸವಾಲು
* 3ನೇ ಅಲೆಗೆ ಅಗತ್ಯವಾದ ಆಕ್ಸಿಜನ್ ಉತ್ಪಾದನೆಗೆ ಕ್ರಮಕೈಗೊಳ್ಳುವುದು
* ಬಾಲ ಆರೈಕೆ ಕೇಂದ್ರಗಳು, ಕೋವಿಡ್ ಕೇರ್ ಕೇಂದ್ರಗಳ ಸ್ಥಾಪನೆಗೆ ಕ್ರಮ
* ರೆಮ್‍ಡೆಸಿವರ್, ಮಕ್ಕಳ ಚಿಕಿತ್ಸೆಗೆ ಅಗತ್ಯವಾದ ಔಷಧಗಳ ಪೂರೈಕೆ

Leave a Reply