ಆಕ್ಸಿಜನ್ ಟ್ಯಾಂಕರ್‌ಗಳಿಗೆ ಟೋಲ್ ವಿನಾಯಿತಿ- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಘೋಷಣೆ

ನವದೆಹಲಿ: ಮೆಡಿಕಲ್ ಆಕ್ಸಿಜನ್ ಕೊಂಡೊಯ್ಯುವ ಟ್ಯಾಂಕರ್ ಹಾಗೂ ಕಂಟೇರ್ ಗಳಿಗೆ ಎಲ್ಲ ರಾಷ್ಟ್ರೀಯ ಹೆದ್ದಾರಿ ಟೋಲ್‍ಗಳಲ್ಲಿ ಶುಲ್ಕ ವಿನಾಯಿತಿ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮೆಡಿಕಲ್ ಆಕ್ಸಿಜನ್ ಕೊಂಡೊಯ್ಯುವ ಟ್ಯಾಂಕರ್ಸ್ ಹಾಗೂ ಕಂಟೇನರ್‍ಗಳನ್ನು ಅಂಬುಲೆನ್ಸ್ ಸೇರಿದಂತೆ ಇತರೆ ತುರ್ತು ವಾಹನಗಳಂತೆ ಪರಿಗಣಿಸಬೇಕು. ಇನ್ನು ಎರಡು ತಿಂಗಳುಗಳ ಕಾಲ ಅಥವಾ ಮುಂದಿನ ಆದೇಶದವರೆಗೆ ಟೋಲ್ ವಸೂಲಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೊರೊನಾ ಮಹಾಮಾರಿ ತಾಂಡವಾಡುತ್ತಿರುವ ಹಿನ್ನೆಲೆ ದೇಶಾದ್ಯಂತ ಆಕ್ಸಿಜನ್‍ಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಈ ವಾಹನಗಳಿಗೆ ಯಾವುದೇ ರೀತಿಯ ಅಡ್ಡಿಯಾಗದಂತೆ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಮೆಡಿಕಲ್ ಆಕ್ಸಿಜನ್ ಕೊಂಡೊಯ್ಯುವ ಟ್ಯಾಂಕರ್ ಹಾಗೂ ಕಂಟೇನರ್‍ಗಳಿಗೆ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಮಾರ್ಗವನ್ನು ಒದಗಿಸಲಾಗಿದೆ. ಆಕ್ಸಿಜನ್ ಟ್ಯಾಂಕರ್‍ಗಳು ಟೋಲ್ ಹಣ ನೀಡದೆ ಉಚಿತವಾಗಿ ಸಂಚರಿಸಬಹುದಾಗಿದೆ. ಅಲ್ಲದೆ ಹೆದ್ದಾರಿ ಸಿಬ್ಬಂದಿ ಸೇರಿ ಎಲ್ಲ ರೀತಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹ ಮೆಡಿಕಲ್ ಆಕ್ಸಿಜನ್ ವಾಹನಗಳ ಸಂಚಾರಕ್ಕೆ ತಡೆಯಾಗದಂತೆ ದಾರಿ ಮಾಡಿಕೊಡಬೇಕು ಎಂದು ಹೆದ್ದಾರಿ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Comments

Leave a Reply

Your email address will not be published. Required fields are marked *