ಚೆನ್ನೈ: ಬೌಲಿಂಗ್‌ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದ ಸ್ಪಿನ್ನರ್ ಆರ್ ಅಶ್ವಿನ್ ಏಕದಿನ ಪಂದ್ಯದಂತೆ ಆಡಿ ಶತಕ ಸಿಡಿಸಿದ ಪರಿಣಾಮ ಭಾರತ ಇಂಗ್ಲೆಂಡ್ ತಂಡಕ್ಕೆ 482 ರನ್‌ಗಳ ಗುರಿಯನ್ನು ನೀಡಿದೆ.
ನಿನ್ನೆ1 ವಿಕೆಟ್ ಕಳೆದುಕೊಂಡು 54 ರನ್‌ಗಳಿಸಿದ್ದ ಭಾರತ ಮೂರನೇ ದಿನದಾಟದಲ್ಲಿ 85.5 ಓವರ್‌ಗಳಲ್ಲಿ286 ರನ್‌ಗಳಿಗೆ ಆಲೌಟ್ ಆಯ್ತು. ಒಂದು ವೇಳೆ ಈ ಪಂದ್ಯವನ್ನು ಇಂಗ್ಲೆಂಡ್ ಗೆದ್ದರೆ ಚೇಸಿಂಗ್‌ನಲ್ಲಿ ವಿಶ್ವದಾಖಲೆ ಬರೆಯಲಿದೆ.

106 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಕೊಹ್ಲಿ ಮತ್ತು ಅಶ್ವಿನ್ 7ನೇ ವಿಕೆಟಿಗೆ 96 ರನ್‌ಗಳ ಜೊತೆಯಾಟವಾಡಿದರು.
ತಂಡದ ಮೊತ್ತ 202 ಆಗಿದ್ದಾಗ ಕೊಹ್ಲಿ62 ರನ್(149 ಎಸೆತ, 7 ಬೌಂಡರಿ) ಹೊಡೆದು ಔಟಾದರು. ಬೆನ್ನಲ್ಲೇ ಕುಲದೀಪ್ ಯಾದವ್ ಮತ್ತು ಇಶಾಂತ್ ಶರ್ಮಾ ಔಟಾದರು. ಆದರೆ 9ನೇ ವಿಕೆಟಿಗೆ ಅಶ್ವಿನ್ ಮತ್ತು ಸಿರಾಜ್ ಉತ್ತಮವಾಗಿ ಆಡಿ 55 ಎಸೆತಗಳಲ್ಲಿ 49 ರನ್ ಜೊತೆಯಾಟವಾಡಿದರು.

ಏಕದಿನ ಶೈಲಿಯಲ್ಲೇ ಬ್ಯಾಟ್ ಬೀಸಿದ ಅಶ್ವಿನ್ 106 ರನ್(148, 14 ಬೌಂಡರಿ, 1 ಸಿಕ್ಸರ್) ಹೊಡೆದರೆ ಮೊಹಮ್ಮದ್ ಸಿರಾಜ್ 16 ರನ್(21 ಎಸೆತ, 2 ಬೌಂಡರಿ) ಹೊಡೆದ ಅಜೇಯರಾಗಿ ಉಳಿದರು.

Leave a Reply