ಅವಳಿ-ಜವಳಿ ಸೋದರಿಯರಿಗೆ ಒಬ್ಬನೇ ಗೆಳೆಯ – ಒಂದೇ ಟೈಮ್‍ಗೆ ಗರ್ಭಿಣಿಯಾಗೋ ಅಸೆ

– ಸೋದರಿಯರ ಆಸೆಗೆ ಕಾನೂನು ಅಡ್ಡಿ

ಕ್ಯಾನ್‍ಬೆರ್ರಾ: ಆಸ್ಟ್ರೇಲಿಯಾದ ಎನಾ ಮತ್ತು ಲೂಸಿ ಡಿಸಿಂಕ್ ಅವಳಿ ಸೋದರಿಯರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುತ್ತಿರುತ್ತವೆ. ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡ ಬಳಿಕ ಇಬ್ಬರು ಹೆಚ್ಚು ಜನಪ್ರಿಯರು. ಈ ಇಬ್ಬರು ಸೋದರಿಯರನ್ನ ‘ಮೋಸ್ಟ್ ಐಡೆಂಟಿಕಲ್ ಟ್ವಿನ್ಸ್’ ಅಂತಾನೂ ಕರೆಯಲಾಗುತ್ತೆ. ಸದ್ಯ ಇಬ್ಬರಿಗೂ ಒಬ್ಬನೇ ಗೆಳೆಯನಿದ್ದಾನೆ. ಈಗ ಎನಾ ಮತ್ತು ಲೂಸಿ ಒಂದೇ ಸಮಯದಲ್ಲಿ ಗರ್ಭಿಣಿ ಆಗುವ ಆಸೆಯನ್ನ ಹೊರ ಹಾಕಿದ್ದಾರೆ. ಆದ್ರೆ ಗೆಳೆಯ ಬೆನ್ ನನ್ನು ಮದುವೆಯಾಗಲು ಇಬ್ಬರಿಗೂ ಆಸ್ಟ್ರೇಲಿಯಾದ ಕಾನೂನು ತೊಡಕಾಗಿದೆ.

ಎನಾ ಮತ್ತು ಲೂಸಿ ಟಿಎಲ್‍ಸಿ ಎಕ್ಸ್‍ಟ್ರೀಮ್ ಸಿಸ್ಟರ್ ಹೆಸರಿನ ಶೋನಲ್ಲಿ ಭಾಗಿಯಾಗಿದ್ದರು. ಅಲ್ಲಿ ತಮ್ಮ ಜೀವನ ಶೈಲಿ ಮತ್ತು ಭವಿಷ್ಯದ ಕನಸುಗಳನ್ನು ಬಿಚ್ಚಿಟ್ಟಿದ್ದರು. ಪ್ರತಿ ಕೆಲಸಗಳನ್ನ ಜೊತೆಯಾಗಿಯೇ ಮಾಡುವದರಿಂದ ತಮ್ಮನ್ನ ಐಡೆಂಟಿಕಲ್ ಸಿಸ್ಟರ್ಸ್ ಅಂತಾನೇ ಪರಿಚಯ ಮಾಡಿಕೊಂಡಿದ್ದರು. ಇದೇ ವೇಳೆ ಒಂದೇ ಸಮಯಕ್ಕೆ ಗರ್ಭಿಣಿಯಾಗುವ ಆಸೆಯನ್ನ ಸಹ ವೇದಿಕೆಯಲ್ಲಿ ಹೇಳಿಕೊಂಡಿದ್ದರು.

ಲೂಸಿ ಮತ್ತು ಎನಾ ಜೊತೆಯಾಗಿಯೇ ಊಟ ಮಾಡ್ತಾರೆ. ವಾಶ್ ರೂಮ್ ಬಳಸಲು ಸಹ ಜೊತೆಯಲ್ಲಿಯೇ ತೆರಳ್ತಾರೆ. ಇದರ ಜೊತೆಯಲ್ಲಿ ಪ್ರತಿನಿತ್ಯ ಒಂದೇ ಬಣ್ಣದ ಬಟ್ಟೆ ಧರಿಸುತ್ತಾರೆ. ಊಟ, ವರ್ಕೌಟ್, ನಿದ್ದೆ, ಸ್ನಾನ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಒಟ್ಟಿಗೆ ಮಾಡ್ತಾರೆ. ಹಾಗಾಗಿ ಇಬ್ಬರಲ್ಲಿ ಎನಾ ಮತ್ತು ಲೂಸಿಯನ್ನ ಪತ್ತೆ ಹಚ್ಚೋದು ಕಠಿಣ ಸವಾಲು.

ಇನ್ನು ವಿಶೇಷ ಅಂದ್ರೆ ಇಬ್ಬರಿಗೂ ಒಬ್ಬನೇ ಗೆಳೆಯ. ಒಂದೇ ಸಮಯದಲ್ಲಿ ಗೆಳೆಯ ಬೆನ್ ಇಬ್ಬರಿಗೂ ಇಷ್ಟ ಆಗಿದ್ದ, ಹೀಗಾಗಿ ಅವನ ಜೊತೆ ಇಬ್ಬರು ರಿಲೇಶನ್‍ಶಿಪ್ ನಲ್ಲಿದ್ದಾರೆ. ಆದ್ರೆ ಇಬ್ಬರಿಗೂ ಅವನನ್ನೇ ಮದುವೆ ಮಾಡಿಕೊಳ್ಳಲು ಆಸ್ಟ್ರೇಲಿಯಾದ ಕಾನೂನು ತೊಡಕಾಗಿದೆ.

ಆಸ್ಟ್ರೇಲಿಯಾ ಮ್ಯಾರೇಜ್ ಆ್ಯಕ್ಟ್ 1961 ಪ್ರಕಾರ, ಓರ್ವ ವ್ಯಕ್ತಿ ಎರಡು ಮದುವೆ ಆಗುವಂತಿಲ್ಲ. ಇದೇ ಕಾರಣಕ್ಕೆ ಸೋದರಿಯರ ಮದುವೆ ಆಸೆ ಕನಸಾಗಿಯೇ ಉಳಿದಿದೆ. ರಿಯಾಲಿಟಿ ಶೋನಲ್ಲಿ ಈ ಕಾನೂನಿನ ಬಗ್ಗೆ ಮಾತನಾಡುತ್ತಾ ಎನಾ ಮತ್ತು ಲೂಸಿ ಗಳಗಳನೇ ಕಣ್ಣೀರಿಟ್ಟಿದ್ದರು. ಈ ಇಬ್ಬರ ಗೆಳೆಯ ಬೆನ್ 40 ವರ್ಷದವನಾಗಿದ್ದು, ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *