ಅಳಿಯನಿಗೆ ಬೆಂಜ್ ಕಾರು, ಡೈಮಂಡ್ ರಿಂಗ್ – ಎರಡನೇ ಮದ್ವೆಯ ಮೊದಲ ರಾತ್ರಿಯೇ ಕಿರಿಕ್

ಬೆಂಗಳೂರು: ಮದುವೆ ಆದ ದಿನವೇ ಪತ್ನಿಗೆ ಪತಿರಾಯ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಮನೆಯವರು ಅಳಿಯನಿಗೆ ಬೆಂಜ್ ಕಾರು ಹಾಗೂ ಡೈಮಂಡ್ ರಿಂಗ್ ಉಡುಗೊರೆಯಾಗಿ ನೀಡಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಹೌದು. ಭರತ್ ರೆಡ್ಡಿ ಹಾಗೂ ಯುವತಿಯ ನಿಶ್ಚಿರ್ತಾ ಹಾಗೂ ಮದುವೆ ಸೇರಿ ಬರೋಬ್ಬರಿ 6 ಕೋಟಿ ಖರ್ಚು ಮಾಡಲಾಗಿತ್ತು. ಜೊತೆಗೆ 5 ಕೆ.ಜಿ ಚಿನ್ನ, 1 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರು, ಬರೊಬ್ಬರಿ 30 ಲಕ್ಷ ಮೌಲ್ಯದ ವಜ್ರದ ಒಡವೆ, ಒಂದು ಕೆ.ಜಿಯ ಚಿನ್ನದ ಸರ, ಹತ್ತು ಲಕ್ಷ ಬೆಲೆಯ ಡೈಮೆಂಡ್ ರಿಂಗ್, ಒಂದು ಕೆಜಿ ತೂಕದ ಬ್ರೇಸ್ ಲೈಟ್, ಎರಡು ಲಕ್ಷ ಮೌಲ್ಯದ ಕಪಲ್ ರಿಂಗ್ ಕೂಡ ನೀಡಲಾಗಿತ್ತು. ಇಷ್ಟಾದ್ರೂ ಮದುವೆಯಾಗಿ ಒಂದು ತಿಂಗಳಲ್ಲೇ ದಾಂಪತ್ಯದಲ್ಲಿ ಬಿರುಕು ಮೂಡಿದೆ.

ನಡೆದಿದ್ದೇನು?:
2020ರ ಅಕ್ಟೋಬರ್ 29ರಂದು ಭರತ್ ಎಂಬಾತನ ಜೊತೆಗೆ ಯುವತಿಯ ಮದುವೆಯಾಗಿದೆ. ಮೊದಲ ರಾತ್ರಿಯೇ ಪತಿ ಕಂಠಪೂರ್ತಿ ಕುಡಿದುಕೊಂಡು ಬಂದಿದ್ದ. ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ಪತಿಯನ್ನು ನೋಡಿದ ಪತ್ನಿ ಅಂತರ ಕಾಯ್ದುಕೊಂಡಿದ್ದಳು. ಈ ವಿಚಾರ ತಿಳಿದ ಪತಿ ಮನೆಯವರು ಸೊಸೆಗೆ ದೆವ್ವ ಬಂದಿದೆ ಅಂತ ಕಿರುಕುಳ ನೀಡಲು ಆರಂಭಿಸಿದ್ದಾರೆ.

ಮಂಚದ ಕೆಳಗೆ ನಿಂಬೆಹಣ್ಣು ಇಡುವುದು. ಮಾಟಮಂತ್ರ ಮಾಡಿಸುವವರ ಕೈಯಲ್ಲಿ ಛಾಟಿಯಿಂದ ಹೊಡೆಸುವುದು. ತಲೆ ಮೇಲೆ ನಿಂಬೆ ಹಣ್ಣು ಕೊಯ್ಯುವುದು, ಮುಖಕ್ಕೆ ಬೂದಿ ಹಾಕುವುದು, ಬೂದಿಯನ್ನು ಅನ್ನದಲ್ಲಿ ಮಿಕ್ಸ್ ಮಾಡಿ ತಿನ್ನಿಸುವುದು ಮಾಡಿದ್ದಾರೆ. ಇವೆಲ್ಲದಕ್ಕೆ ವಿರೋಧಿಸಿದ್ರೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡುವುದು. ಇಷ್ಟು ಮಾತ್ರವಲ್ಲದೆ ನಿನ್ನ ಇಲ್ಲೇ ಸಾಯಿಸುತ್ತೇವೆ ಅಂತ ಊಟ ನೀಡದೇ ಪತಿ ಕುಟುಂಬಸ್ಥರು ಯುವತಿಗೆ ಕಿರುಕುಳ ನೀಡುತ್ತಿದ್ದರು.

ಪತಿ ಮನೆಯವರ ಕಿರುಕುಳದಿಂದ ಬೇಸತ್ತ ನವವಿವಾಹಿತೆ ಹೆಚ್‍ಎಎಲ್ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ನೀಡಿದ್ದಾಳೆ. ಯುವತಿಯ ದೂರು ಸ್ವೀಕರಿಸಿರುವ ಪೊಲೀಸರು ಆರೋಪಿ ಭರತ್ ರೆಡ್ಡಿಯನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಈತನಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಮದುವೆ ಮುಚ್ಟಿಟ್ಟು 2ನೇ ಮದುವೆಯಾಗಿರುವುದು ಬಯಲಾಗಿದೆ.

https://www.youtube.com/watch?v=JSjN4uGZWGI&ab_channel=PublicTV%7C%E0%B2%AA%E0%B2%AC%E0%B3%8D%E0%B2%B2%E0%B2%BF%E0%B2%95%E0%B3%8D%E0%B2%9F%E0%B2%BF%E0%B2%B5%E0%B2%BF

Comments

Leave a Reply

Your email address will not be published. Required fields are marked *