– ವೈರಲ್ ವಿಡಿಯೋ ನೋಡಿ ಕಣ್ಣೀರು ಹಾಕಿದ ನೆಟ್ಟಿಗರು
ನವದೆಹಲಿ: ಪ್ರೀತಿ ಕುರುಡು ಅಂತಾರೆ. ನಿಜವಾದ ಪ್ರೀತಿ ಎಲ್ಲ ರೂಪಗಳಲ್ಲಿ ಬರುತ್ತದೆ. ಅಲೋಪೆಸಿಯಾದಿಂದ ಬಳಲುತ್ತಿರುವ ತನ್ನ ಗೆಳತಿಯ ತಲೆ ಬೋಳಿಸಿ ಬಳಿಕ ತನ್ನ ಕೂದಲನ್ನೂ ತೆಗೆದುಕೊಂಡಿರುವುದು ಇದಕ್ಕೆ ಸೂಕ್ತ ನಿದರ್ಶನವಾಗಿದೆ.
ಇದರ ವಿಡಿಯೋವನ್ನು ಬಾಸ್ಕೆಟ್ ಬಾಲ್ ಮಾಜಿ ಆಟಗಾರ ರೆಕ್ಸ್ ಚಾಂಪ್‍ಮ್ಯಾನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಈತನ ಗೆಳತಿ ಅಲೋಪೆಸಿಯಾ ಎಂಬ ತಲೆಗೂದಲು ಉದುರುವ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಮಾನವೀತೆಯ ದೃಶ್ಯ ನೋಡಿದರೆ ನಿಮ್ಮ ಕಣ್ಣಂಚಲ್ಲೂ ನೀರು ಬರುವುದು ಪಕ್ಕಾ ಎಂದು ಬರೆದುಕೊಂಡಿದ್ದಾರೆ.
https://twitter.com/RexChapman/status/1288606133414965249
1 ನಿಮಿಷ ಇರುವ ಈ ವಿಡಿಯೋದಲ್ಲಿ, ಮೊದಲು ಗೆಳೆಯ ತನ್ನ ಗೆಳತಿಯ ತಲೆಯನ್ನು ಸಂಪೂರ್ಣವಾಗಿ ಬೋಳಿಸುತ್ತಿರುತ್ತಾನೆ. ಈ ವೇಳೆ ಆಕೆಗೆ ದುಃಖ ಬಂದರೂ ಅದನ್ನು ತೋರ್ಪಡಿಸಿಕೊಳ್ಳಲಾಗದೆ ತಡಪಡಿಸುತ್ತಾಳೆ. ತನ್ನ ಗೆಳೆಯನ ಮುಖವನ್ನು ನೋಡುತ್ತಿದ್ದಂತೆಯೇ ನಗುತ್ತಾ ಅಳುತ್ತಾಳೆ.
Humans capacity for love and compassion is unrivaled
— Seth Green (@SethGreen) July 30, 2020
ಗೆಳತಿಯ ತಲೆಯನ್ನು ಸಂಪೂರ್ಣವಾಗಿ ಬೋಳಿಸಿದ ಬಳಿಕ ಕೂಡಲೇ ತನ್ನ ತಲೆಗೂದಲನ್ನೂ ಟ್ರಿಮ್ಮರ್ ಮೂಲಕ ಬೋಳಿಸಿaಕೊಳ್ಳುತ್ತಾನೆ. ಇದನ್ನು ನೋಡಿದ ಗೆಳತಿ ಶಾಕ್ ನಿಂದ ಕಣ್ಣೀರು ಹಾಕುತ್ತಾಳೆ. ಗೆಳೆಯ ತಾನೂ ತಲೆ ಬೋಳಿಸಿಕೊಳ್ಳುವ ಮೂಲಕ ಗೆಳತಿಗೆ ಧೈರ್ಯ ತುಂಬುತ್ತಾನೆ. ಅವಳು ಅಳುತ್ತಿದ್ದಂತೆಯೇ ಅವನು ಆಕೆಯ ಕೆನ್ನೆಗೆ ಕಿಸ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
That had me welling up. Memories of shaving her head twice after the first chemo shot. Passed away 3 years ago but I still got the hair!
— Gav Mac (@Gavarnos) July 29, 2020
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಡಿಯೋ ನೋಡಿ ನೆಟ್ಟಿಗರು ಕಣ್ಣೀರಾಗಿದ್ದಾರೆ. ಅಲ್ಲದೆ ಕೆಲವು ಬಳಕೆದಾರರು ಇದೇ ರೀತಿಯ ಅನುಭವಗಳನ್ನು ಕಮೆಂಟ್ ನಲ್ಲಿ ಹಂಚಿಕೊಂಡಿದ್ದಾರೆ.
https://twitter.com/Sherlock33M/status/1288659769738309640

Leave a Reply