– ಪಕ್ಷಿಯ ನೃತ್ಯಕ್ಕೆ ನೆಟ್ಟಿಗರು ಫಿದಾ
ನವದೆಹಲಿ: ಕೋಗಿಲೆ ಹಾಡುವುದನ್ನು, ಗಿಳಿ ತನ್ನದೇ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಹಕ್ಕಿ ಮೊಬೈಲ್ ಅಲರಾಂ ರಿಂಗ್‍ಟೋನಿಗೆ ತನ್ನದೇ ರೀತಿಯಲ್ಲಿ ಸ್ಟೆಪ್ ಹಾಕುವ ಮೂಲಕ ನೆಟ್ಟಿಗರ ಮನಗೆದ್ದಿದೆ.
ಹೌದು. ಕೊಕಟೂ ಎಂಬ ಜಾತಿಯ ಹಕ್ಕಿ ತನ್ನದೇ ರೀತಿಯಲ್ಲಿ ಕುಣಿಯುವುದನ್ನು ನೋಡಿದರೆ ನಿಮ್ಮ ಮುಖದಲ್ಲಿ ಒಂದು ಸಣ್ಣ ನಗೆ ಮೂಡದೆ ಇರದು. ಅಲ್ಲದೆ ಇದನ್ನು ನೋಡುತ್ತಿದ್ದಂತೆಯೇ ಸದಾ ಒತ್ತಡದಲ್ಲಿರುವ ನಿಮ್ಮ ಮನಸ್ಸಿಗೆ ಮುದ ನೀಡುವುದಂತೂ ಗ್ಯಾರಂಟಿ.

ಹಕ್ಕಿ ಕುಣಿಯುತ್ತಿರುವ ವಿಡಿಯೋವನ್ನು ಅಮೆರಿಕದ ಬಾಸ್ಕೆಟ್ ಬಾಲ್ ಮಾಜಿ ಆಟಗಾರ ರೆಕ್ಸ್ ಚಾಪ್‍ಮಾನ್ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದು, ಟ್ವಿಟ್ಟರ್ ಅಕೌಂಟಿನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಈ ಹಕ್ಕಿ ವಿವಿಧ ಅಲರಾಂ ರಿಂಗ್‍ಟೋನ್ ಗಳಿಗೆ ಬೇರೆ ಬೇರೆ ರೀತಿಯಾಗಿ ಡ್ಯಾನ್ಸ್ ಮಾಡುತ್ತೆ. ಈ ವಿಡಿಯೋ ತುಂಬಾನೇ ಮನೋಹರವಾಗಿದೆ ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲೇನಿದೆ?
ವ್ಯಕ್ತಿ ತನ್ನ ಮೊಬೈಲ್ ನಲ್ಲಿ ಅಲರಾಮ ರಿಂಗ್‍ಟೋನ್ ಬದಲಾಯಿಸುತ್ತಿದ್ದಂತೆಯೇ ಪ್ರತಿ ರಿಂಗ್ ಟೋನ್ ಗಳಿಗೂ ತನ್ನದೇ ಶೈಲಿಯಲ್ಲಿ ಡ್ಯಾನ್ಸ್ ಮಾಡುತ್ತದೆ. ಪ್ರತಿ ರಿಂಗ್‍ಟೋನ್ ಬದಲಾಗುವುದನ್ನು ಗಮನವಿಟ್ಟು ಕೇಳಿಕೊಂಡು ಕೂಡಲೇ ನೃತ್ಯದ ಶೈಲಿಯನ್ನು ಆ ರಿಂಗ್‍ಟೋನ್ ಗೆ ತಕ್ಕಂತೆ ಬದಲಾಯಿಸುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ಹಕ್ಕಿಯ ಈ ನೃತ್ಯ ನೋಡುತ್ತಿದ್ದಂತೆಯೇ ಎಲ್ಲರ ಮನಸೆಳೆಯುವುದರಲ್ಲಿ ಎರಡು ಮಾತಿಲ್ಲ.
https://twitter.com/RexChapman/status/1283190223623663616
ಮಾಜಿ ಆಟಗಾರ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡುತ್ತಿದ್ದಂತೆಯೇ ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ನೆಟ್ಟಿಗರು ಹಕ್ಕಿಯ ಕುಣಿತಕ್ಕೆ ಫಿದಾ ಆಗಿದ್ದು, ಸಾಕಷ್ಟು ಕಮೆಂಟ್ ಗಳನ್ನು ಮಾಡಿದ್ದಾರೆ. ಸದ್ಯ ಈ ವಿಡಿಯೋ 394 ಸಾವಿರ ಬಾರಿ ವೀಕ್ಷಣೆಯಾಗಿದೆ.

Leave a Reply