ಅಯ್ಯಪ್ಪ ದೇಗುಲಕ್ಕೆ ಭೇಟಿ -ಅನ್ನದಾನಕ್ಕೆ 50 ಸಾವಿರ ನೀಡಿದ್ರು ಜಮೀರ್

ಬೆಂಗಳೂರು: ಸದಾ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಶಾಸಕ ಜಮೀರ್ ಅಹ್ಮದ್ ಅವರು ಇದೀಗ ಅಯ್ಯಪ್ಪ ದೇಗುಲಕ್ಕೆ 50 ಸಾವಿರ ರೂ. ನೀಡಿದ್ದಾರೆ.

ಹೌದು. ಚಾಮರಾಜಪೇಟೆಯ ಅಯ್ಯಪ್ಪ ದೇವಸ್ಥಾನಕ್ಕೆ ಇಂದು ಶಾಸಕರು ಭೇಟಿ ನೀಡಿದ್ದಾರೆ. 45 ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕರು, ಅನ್ನದಾನಕ್ಕೆ 50 ಸಾವಿರ ರೂ. ಕಾಣಿಕೆಯಾಗಿ ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿಕೊಂಡಿರುವ ಮಾಜಿ ಸಚಿವರು, ಚಾಮರಾಜಪೇಟೆ ಕ್ಷೇತ್ರದ 140ನೇ ವಾರ್ಡ್ ನಲ್ಲಿರುವ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡಿದೆ. ದೇವಸ್ಥಾನದ 45ನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಅನ್ನದಾನಕ್ಕೆಂದು 50 ಸಾವಿರ ರೂ. ನೀಡಿರುವುದಾಗಿ ತಿಳಿಸಿದ್ದಾರೆ.

ಸದ್ಯ ಮಗಳ ಮದುವೆಯ ಬ್ಯುಸಿಯಲ್ಲಿರುವ ಶಾಸಕರು, ರಾಜಕೀಯ ನಾಯಕರು ಹಾಗೂ ಗಣ್ಯರಿಗೆ ಮದುವೆಯ ಆಮಂತ್ರಣ ನೀಡುವಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ದೇಗುಲಕ್ಕೆ ಭೇಟಿ ನೀಡಿ ಧನಸಹಾಯ ಮಾಡಿದ್ದಾರೆ.

https://twitter.com/BZZameerAhmed/status/1346722781413695490

Comments

Leave a Reply

Your email address will not be published. Required fields are marked *