ಅಮಾಯಕ ಹುಡುಗಿಗೆ ಮೋಸ ಮಾಡಿದ್ರಾ ಶುಭಾ?

ಬಿಗ್‍ಬಾಸ್‍ಮನೆಯ ಹೆಂಗಳೆಯರ ಮಧ್ಯೆ ಮಾತು ನಡೆಯತ್ತಿತ್ತು. ಸೆಲೆಬ್ರೆಟಿ ಕಂಟೆಸ್ಟಂಟ್‍ಗಳು ಚಿಕ್ಕ ಚಿಕ್ಕ ವಿಷಯಗಳ ಕುರಿತಾಗಿ ಜಗಳ ಮಾಡುವುದನ್ನು ನೋಡಿ ಸಣ್ಣ ಪುಟ್ಟ ವಿಚಾರಗಳು ಎಷ್ಟು ದೊಡ್ಡದಾಗುತ್ತವೆ ಎಂಬುದನ್ನು ನಾವು ಇಷ್ಟು ದಿನಗಳಲ್ಲಿ ನೋಡಿದ್ದೇವೆ.

ಹೌದು ಅಮಾಯಕ ಹುಡಗಿಗೆ ಶುಭಾ ಪೂಂಜಾ ಮೋಸ ಮಾಡಿದ್ದಾರೆ. ಈ ವಿಚಾರವಾಗಿ ಶುಭಾ ಹಾಗೂ ವೈಷ್ಣವಿ ಕಿಚನ್‍ನಲ್ಲಿ ಮಾತನಾಡಿಕೊಂಡಿದ್ದಾರೆ.

 ರಾತ್ರಿ ಮನೆಯಲ್ಲಿ ತುಂಬಾ ಚಳಿ ಇತ್ತು. ಹೀಗಾಗಿ ನಿಧಿ ಎಕ್ಸಷ್ಟ್ರಾ ಬೇಡ್‍ಶೀಟ್ ಇದೆ ಎಂದು ತೆಗೆದುಕೊಂಡು ಬಂದ್ರು. ಹೀಗಾಗಿ ನಾನು ಅದು ಚೆನ್ನಾಗಿದೆ ಎಂದು ನನ್ನ ಬಳಿ ಇದ್ದ ಬೇಡ್‍ಶೀಟ್ ಮತ್ತು ಆ ಬೇಡ್‍ಶೀಟ್ ಬದಲಾಯಿಸಿದೆ. ನಿನ್ನದು ಎಂದು ಗೊತ್ತು ಇರಲಿಲ್ಲ. ನಾನು ಆ ಬೇಡ್‍ಶೀಟ್ ತಂದಿರಲಿಲ್ಲ, ನಿಧಿ ತಂದಿದ್ದು ಎಂದು ಶುಭಾ ಹೇಳಿದ್ದಾರೆ. ಈ ವೇಳೆ ವೈಷ್ಣವಿ ಅಮಾಯಕ ಹುಡುಗಿಗೆ ಮೋಸ ಮಾಡಿದ್ರಾ ಎಂದು ಹೇಳುತ್ತಾ ಜೋರಾಗಿ ನಕ್ಕಿದ್ದಾರೆ.

ನನ್ನ ಬೆಡ್‍ಶೀಟ್ ತಗೊಂಡು ನನಗೆ ಬೈತೀರಾ ಎಂದು ವೈಷ್ಣವಿ ಹೇಳಿದ್ದಾರೆ. ಈಗ ಧ್ವನಿ ಸ್ವೀಟ್ ಆಗಿದೆ. ಅದೇ ರಾತ್ರಿ ಏ… ಸುಮ್ಮನೇ ಮಲಗತ್ತೀರಾ ಇಲ್ಲವಾ ಎಂದು ಹೇಳುತ್ತಿರಾ. ರಾತ್ರಿ ನಿಮ್ಮ ಮುಖನೆ ಬೇರೆ. ರಾತ್ರಿ ನೀವು ಬೈದಿದ್ದೀರಾ ಎಂಬುದೆ ಮರೆತು ಹೋಗುತ್ತೆ ಇಷ್ಟೊಂದು ಸ್ವೀಟ್ ಆಗಿ ಹೇಳುತ್ತಿರುವುದು ಕೇಳಿದರೆ ಎಂದು ಅಲ್ಲೇ ಇದ್ದ ದಿವ್ಯಾ ಉರುಡುಗ ಹೇಳಿದ್ದಾರೆ. ನಾನು ಮಲಗುವ ಸಮಯ ಯಾರು ಡಿಸ್ಟರ್ಬ್ ಮಾಡಬಾರದು ಎಂದು ಶುಭಾ ಮುಗ್ದತೆಯಿಂದ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *