ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ ‘ಯಜಮಾನ’

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ತಮ್ಮ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಹೌದು. ಬಹುನಿರೀಕ್ಷಿತ ಚಿತ್ರ ರಾಬರ್ಟ್ ಸಿನಿಮಾ ಟೀಸರ್ ರಿಲೀಸ್ ಆಗಿ ಕೇವಲ ಒಂದು ಗಂಟೆಯ ಒಳಗೆ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರು. ಜೊತೆಗೆ 16 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ‘ದಾಸ’ ತನ್ನ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ಈ ಸಂಬಂಧ ಟೀಸರ್ ಜೊತೆಗೆ ಟ್ವೀಟ್ ಮಾಡಿರುವ ಸಾರಥಿ, ರಾಬರ್ಟ್ ಚಿತ್ರದ ಟೀಸರ್ 5 ಮಿಲಿಯನ್(50 ಲಕ್ಷ) ಬಾರಿ ವೀಕ್ಷಣೆಯಾಗಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು, ನಿಮ್ಮ ದಾಸ ದರ್ಶನ್ ಎಂದು ಬರೆದುಕೊಂಡಿದ್ದಾರೆ.

ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಇನ್ನೇನು ತೆರೆಗಪ್ಪಲಿಸಲು ಸಜ್ಜಾಗಿದೆ. ಕಳೆದ ಏಪ್ರಿಲ್‍ನಲ್ಲಿಯೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಲಾಕ್‍ಡೌನ್ ಪರಿಣಾಮ ರಾಬರ್ಟ್ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಪ್ರತಿ ಹಬ್ಬಕ್ಕೂ ಚಿತ್ರತಂಡದ ಕಡೆಯಿಂದ ಅಭಿಮಾನಿಗಳಿಗೆ ಒಂದಿಲ್ಲೊಂದು ಸಪ್ರ್ರೈಸ್ ನೀಡಲಾಗುತ್ತಿದೆ.

ದರ್ಶನ್ ಅವರ ಹುಟ್ಟುಹಬ್ಬದಂದು (ಫೆಬ್ರವರಿ 16)ರಂದು ಅಭಿಮಾನಿಗಳಿಗೆಂದೇ ರಾಬರ್ಟ್ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿತ್ತು. ಪೋಸ್ಟರ್, ಮೋಷನ್ ಪೋಸ್ಟರ್ ನಿಂದಲೇ ಭಾರೀ ಸದ್ದು ಮಾಡಿದ್ದ ರಾಬರ್ಟ್ ಸಿನಿಮಾದ ಟೀಸರ್ ನೋಡಿರುವ ಅಭಿಮಾನಿಗಳು ಸಿನಿಮಾಗಾಗಿ ತುದಿಗಾಲಲ್ಲಿ ನಿಂತಿದ್ದಾರೆ. ಈ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ಉಮಾಪತಿ ಅವರು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಐರಾವತನಿಗೆ ನಾಯಕಿಯಾಗಿ ಕನ್ನಡತಿ ಆಶಾ ಭಟ್ ನಟಿಸಿದ್ದಾರೆ.

Comments

Leave a Reply

Your email address will not be published. Required fields are marked *