ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಯುವರತ್ನ

PUNEET RAJKUMAR

ಬೆಂಗಳೂರು: ಪವರಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

ಹುಟ್ಟುಹಬ್ಬದಂದು ನಾನು ಮನೆಯಲ್ಲಿ ಇರುವುದಿಲ್ಲ. ಕುಟುಂಬದವರೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದೇನೆ. ದಯವಿಟ್ಟು ಯಾರೂ ಮನೆಯ ಬಳಿ ಬರಬೇಡಿ. ನಿಮ್ಮನ್ನು ಭೇಟಿ ಮಾಡಲು ನಾನೇ ಬರುತ್ತೇನೆ. ಇಷ್ಟು ದಿನ ನನ್ನ ಹುಟ್ಟುಹಬ್ಬದಂದು ನನ್ನ ನೋಡಲು ಬರುತ್ತಿದ್ದೀರಿ. ಆದರೆ ಈ ವರ್ಷ ನಾನೇ ನಿಮ್ಮ ಊರಿಗೆ ಬರುತ್ತೇನೆ. ದಯವಿಟ್ಟು ಸಹಕರಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಲೈವ್‍ನಲ್ಲಿ ಹೇಳಿಕೊಂಡಿದ್ದಾರೆ.

ನಾನೆ ನಿಮ್ಮ ಊರಿಗೆ ಬರುತ್ತೇನೆ ಯಾವ ಊರು, ಯಾವ ಸಮಯ ಎಂದು ನಮ್ಮ ಯುವರತ್ನ ತಂಡ ನಿಮಗೆ ಎಲ್ಲ ಮಾಹಿತಿಯನ್ನು ನೀಡುತ್ತದೆ. ಏಪ್ರಿಲ್ 1 ರಂದು ಯುವರತ್ನ ಚಿತ್ರ ರಿಲೀಸ್ ಹಿನ್ನಲೆ ಇದೇ ತಿಂಗಳು ಅಂದರೆ ಮಾ. 20ರಂದು ಮೈಸೂರಿನಲ್ಲಿ ಪ್ರೀ ರಿಲೀಸ್ ಈವೆಂಟ್ ಯುವ ಸಂಭ್ರಮ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ರಾಜ್ಯದ ಎಲ್ಲ ಭಾಗದ ಅಭಿಮಾನಿಗಳು ತಮ್ಮ ಊರುಗಳಿಗೆ ಬರುವಂತೆ ಮನವಿ ಮಾಡಿದ್ದಾರೆ. ಈ ಕಾರಣದಿಂದಾಗಿ ಯುವಸಂಭ್ರಮ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ.

ಇದೇ ತಿಂಗಳು 21ರಿಂದ 23ರ ವರೆಗೆ ನಾವೇ ನಿಮ್ಮ ಊರುಗಳಿಗೆ ಬರುತ್ತೇವೆ. ನಾನೇ ನಿಮ್ಮನ್ನು ನೋಡಲು ನಿಮ್ಮ ನಿಮ್ಮ ಜಿಲ್ಲೆಗಳಿಗೆ ಬರುತ್ತೇವೆ. ನಿಮ್ಮ ಊರಿಗೆ ನಿಮ್ಮ ಅಪ್ಪು. ಹರಸಿ ಹಾಗೂ ಹಾರೈಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಹೊಸ ಲುಕ್‍ನಲ್ಲಿ ನಾನು ಗಡ್ಡ ಬಿಟ್ಟು ಬಂದಿರುವದು ನಿಮಗೆ ತುಂಬಾ ಇಷ್ಟವಾಗಿದೆ ಎಂದು ನನಗೆ ನೀವು ಕಮೆಂಟ್ ಮಾಡುವ ಮೂಲಕವಾಗಿ ತಿಳಿಸಿದ್ದು ನನಗೆ ತುಂಬಾ ಸಂತೋಷವಾಗಿದೆ. ಕೊರೊನಾ ನಿಮಯಗಳನ್ನು ಪಾಲನೆ ಮಾಡಿ ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನು ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಮೊದಲಿಗೆ ಹುಟ್ಟುಹಬ್ಬದ ಆಚರಣೆ ಕುರಿತಂತೆ ಬೇಸರದ ಸುದ್ದಿ ಕೊಟ್ಟ ಅಪ್ಪು, ನಂತರ ಮೈಸೂರಿನಲ್ಲಿ ನಡೆಯಲಿರುವ ಯುವಸಂಭ್ರಮ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿಯೂ ತಿಳಿಸಿದ್ದಾರೆ. ನಂತರ ನಾನೇ ನಿಮ್ಮ ಜಿಲ್ಲೆಗೆ ಬರುತ್ತೇನೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *