ಅಭಿನಯ ಚಕ್ರವರ್ತಿಯ ಸಿನಿಜರ್ನಿಗೆ 25 ವರ್ಷ- ಬೆಂಗಳೂರಿನಲ್ಲಿ ಬೃಹತ್ ಅಭಿನಂದನಾ ಸಮಾರಂಭ

– ಸಿಎಂ ಸನ್ಮಾನ, ಸಿನಿಗಣ್ಯರಿಂದ ಶುಭಾಶಯ

ಬೆಂಗಳೂರು: ನಟ ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪಿಟೀಲು ಚೌಡಯ್ಯ ಸ್ಮಾರಕ ಭವನದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ನಟ ಸುದೀಪ್‍ಗೆ ಸಿಎಂ ಬಿಎಸ್‍ವೈ ಸನ್ಮಾನ ಮಾಡಿದರು.

ಈ ವೇಳೆ ಮಾತಾಡಿದ ಸಿಎಂ, ಸುದೀಪ್ ಸದಭಿರುಚಿಯ ಸಿನಿಮಾ ನೀಡಿದ್ದಾರೆ. ಅವರ ಕೋಟಿಗೊಬ್ಬ 3 ಕೂಡ ಯಶಸ್ಸು ಕಾಣಲಿ ಎಂದು ಹಾರೈಸಿದರು. ಮೊದಲ ಬಾರಿಗೆ ನರ್ವಸ್ ಆಗಿದ್ದೀನಿ. ಕನ್ನಡ ಚಿತ್ರರಂಗದ ಕುಟುಂಬದಲ್ಲಿ ಸ್ಥಾನ ಸಿಕ್ಕಿರೋದಕ್ಕೆ ಪುಟ್ಟ ಖುಷಿ ಆಗಿದೆ ಅಂತಾ ನಟ ಸುದೀಪ್ ಹೇಳಿದರು. ಇನ್ನು ಇಬ್ರು ಜೊತೆಲಿ ಒಳ್ಳೆ ಸಿನಿಮಾ ಮಾಡ್ತೀವಿ ನಟ ಶಿವರಾಜ್‍ಕುಮಾರ್ ಘೋಷಿಸಿದರು.

ಇನ್ನು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್ ಆರ್ ರಂಗನಾಥ್ ಸರ್ ಮಾತನಾಡಿ, 25 ವರ್ಷದ ಪಯಣ ಅಷ್ಟು ಸುಲಭವಲ್ಲ. ಪ್ರತಿಭೆ ಇರೋ ಎಲ್ಲರಿಗೂ ಜನರ ಪ್ರೀತಿ ಸಿಗಲ್ಲ. ಆದ್ರೆ ಸುದೀಪ್‍ಗೆ ಅದು ಸಿಕ್ಕಿದೆ. ಮುಂದಿನ ಹೆಜ್ಜೆಯನ್ನು ಅವರೇ ನಿರ್ಧರಿಸಲಿ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ನಟರಾದ ರವಿಚಂದ್ರನ್, ರಮೇಶ್ ಅರವಿಂದ್, ಹಿರಿಯ ಪತ್ರಕರ್ತರಾದ ರವಿ ಹೆಗ್ಡೆ, ನಟ, ನಿರ್ಮಾಪಕ ರಾಕಲೈನ್ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *