ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದ ಚಿಕ್ಕಪ್ಪ, ಸಹೋದರನಿಗೆ ಗಲ್ಲು ಶಿಕ್ಷೆ

ಭೋಪಾಲ್: ಅಪರೂಪದ ಪ್ರಕರಣವೊಂದರಲ್ಲಿ ಮಧ್ಯ ಪ್ರದೇಶ ನ್ಯಾಯಾಲಯ 21 ವರ್ಷದ ಯುವಕ ಹಾಗೂ 42 ವರ್ಷದ ಚಿಕ್ಕಪ್ಪನಿಗೆ ಗಲ್ಲು ಶಿಕ್ಷೆ ವಿಧಿಸಿದೆ. 12 ವರ್ಷದ ಬಾಲಕಿ ಮೇಲೆ ಈ ಇಬ್ಬರು ಕಾಮುಕರು ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಕ್ಕೆ ಕೋರ್ಟ್ ಈ ಕಠಿಣ ಶಿಕ್ಷೆ ವಿಧಿಸಿದೆ.

ಮಧ್ಯ ಪ್ರದೇಶದ ಸಾಗರ ಜಿಲ್ಲೆಯ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ಮರಣದಂಡನೆಗಿಂತ ಕಡಿಮೆ ಶಿಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಉಮಾಶಂಕರ್ ಅಗರ್ವಾಲ್ ಅವರು 12 ವರ್ಷದ ಬಲಕಿಯ ಚಿಕ್ಕಪ್ಪ ಹಾಗೂ ಸಹೋದರನಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಕ್ಕೆ ಕೋರ್ಟ್ ಈ ಕಠಿಣ ಶಿಕ್ಷೆ ವಿಧಿಸಿದೆ. ಐಪಿಸಿ ಸೆಕ್ಷನ್ 376-ಎ(ಅತ್ಯಾಚಾರ) ಹಾಗೂ ಸೆಕ್ಷನ್ 302(ಕೊಲೆ) ಅಡಿ ಪ್ರಕರಣ ದಾಖಲಾಗಿತ್ತು.

ಮಾರ್ಚ್ 13, 2019 ರಂದು ಬಾಲಕಿ ಕಾಣೆಯಾದ ಮರುದಿನ ಹೊಲದಲ್ಲಿ ಮೃತದೇಹ ಪತ್ತೆಯಾಗಿತ್ತು. ಬಳಿಕ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಆಕೆಯ ಸಹೋದರ ಬಲಕಿಯನ್ನು ಅಪಹರಿಸಿ ಚಿಕ್ಕಪ್ಪನ ಮನೆಗೆ ಕರೆದೊಯ್ದಿದ್ದ ಬಳಿಕ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ತಿಳಿದು ಬಂದಿದೆ.

ಅತ್ಯಾಚಾರ ನಡೆಸಿದ ಬಳಿಕ ಪಾಪಿಗಳು ಬಾಲಕಿಯನ್ನು ಕೊಡಲಿಯಿಂದ ಶಿರಚ್ಛೇದ ಮಾಡಿದ್ದರು. ಅಲ್ಲದೆ ಕೊಲ್ಲುವ ಮುನ್ನ ಸೊಡೊಮೈಸ್ಡ್ ಮಾಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ಮನೆಯಿಂದ ಕುಡಗೋಲು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ 29 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ. ಡಿಎನ್‍ಎ ಹಾಗೂ ಮರಣೋತ್ತರ ಪರೀಕ್ಷೆ ವರದಿಯು ಆರೋಪಗಳನ್ನು ದೃಢಪಡಿಸಿವೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ತಾಹಿರ್ ಖಾನ್ ಕೋರ್ಟ್ ನಲ್ಲಿ ವಾದ ಮಂಡಿಸಿದ್ದರು.

ರಕ್ಷಾ ಬಂಧನದಂದು ಬಾಲಕಿ ಸಹೋದರನಿಗೆ ರಾಖಿ ಕಟ್ಟುತ್ತಿದ್ದಳು. ಆದರೆ ಸಹೋದರ ಅಕೆಯ ಮೇಲೆಯೇ ಅತ್ಯಾಚಾರ ಎಸಗುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದಾನೆ ಎಂದು ಖಾನ್ ಕೋರ್ಟ್‍ಗೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *