ಅಪಘಾತಕ್ಕೀಡಾಗಿ ಯುವತಿ ಆಸ್ಪತ್ರೆಗೆ ದಾಖಲು- ಬಯಲಾಯ್ತು ಲೈಂಗಿಕ ದೌರ್ಜನ್ಯ ಪ್ರಕರಣ

ಹುಬ್ಬಳ್ಳಿ: ಪರಿಚಯಸ್ಥ ಯುವತಿಗೆ ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವೊಮದು ನಡೆದಿರುವ ಬಗ್ಗೆ ಹುಬ್ಬಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

19 ವರ್ಷದ ಯುವತಿ ಮೇಲೆ ಮಲ್ಲಿಕಜಾನ್ ಬಗಡಗೇರಿ ಎಂಬ ಯುವಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹುಬ್ಬಳ್ಳಿ ತಾಲೂಕಿನ ಮಾವನೂರ ಗ್ರಾಮದ ನಿವಾಸಿಯಾಗಿರುವ ಈತ ಸದ್ಯ ಪೊಲೀಸರು ಅತಿಥಿಯಾಗಿದ್ದಾನೆ.

ನಡೆದಿದ್ದೇನು..?
ನವೆಂಬರ್ 30ರಂದು ಮಾವನೂರ ಗ್ರಾಮಕ್ಕೆ ತೆರಳಲೆಂದು ಹುಬ್ಬಳ್ಳಿಯ ಬಾಸಲ್ ಮಿಶನ್ ಚರ್ಚ್ ಬಳಿ ಯುವತಿ ನಿಂತಿದ್ದಳು. ಈ ವೇಳೆ ಬೈಕಿನಲ್ಲಿ ಆಗಮಿಸಿದ ಮಲ್ಲಿಕಜಾನ್ ಹಾಗೂ ಆಸೀಫ್ ಡ್ರಾಪ್ ಕೊಡುವುದಾಗಿ ಹೇಳಿ ಬೈಕಿ ನಲ್ಲಿ ಕರೆದುಕೊಂಡು ಹೋಗಿದ್ದರು. ಹಳೇ ಹುಬ್ಬಳ್ಳಿ ದುರ್ಗದ ಬೈಲ್ ಗೆ ಬಿಡುವ ಬದಲು ಮಲ್ಲಿಕಜಾನ್ ಯುವತಿಯನ್ನ ಕಾರವಾರ ರಸ್ತೆ ಕಡೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದು, ಆಗ ಆಸೀಫ್ ಮತ್ತೊಂದು ಬೈಕ್ ತರುವುದಾಗಿ ಇಳಿದುಹೋಗಿದ್ದ.

ಮಲ್ಲಿಕಜಾನ್ ಯುವತಿಯನ್ನ ಹೇಸಿಗೆ ಮಡ್ಡಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅತ್ಯಾಚಾರ ಎಸಗಿ ಯುವತಿಯನ್ನ ವಾಪಸ್ ಕರೆದುಕೊಂಡು ಬರುವ ವೇಳೆ ಆಯತಪ್ಪಿ ಬೈಕಿನಿಂದ ಬಿದ್ದಿದ್ದಾರೆ. ಪರಿಣಾಮ ಯುವತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ್ದಾಳೆ. ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಯುವತಿಯ ಮೇಲೆ ಅತ್ಯಾಚಾರ ಎಸಗಿದ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ನಡೆದ ಸ್ಥಳ ಗ್ರಾಮೀಣ ಠಾಣೆಯ ವ್ಯಾಪ್ತಿಗೆ ಬರೋ ಹಿನ್ನೆಲೆಯಲ್ಲಿ ಪ್ರಕರಣವನ್ನ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದೆ. ಬೈಕ್ ಅಪಘಾತ ಪ್ರಕರಣದ ಕುರಿತು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Comments

Leave a Reply

Your email address will not be published. Required fields are marked *