– ನೆಟ್ಟಿಗರ ಮನಗೆದ್ದ ಸುರೇಶ್ ವೀಡಿಯೋ ವೈರಲ್
ತಿರುವನಂತಪುರಂ: ಹೋಂಗಾರ್ಡ್ ಒಬ್ಬರು ಪುಟ್ಟ ಕಂದಮ್ಮನನ್ನು ಎತ್ತಿಕೊಂಡು ಸಂತೈಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.

7 ತಿಂಗಳ ಹೆಣ್ಣು ಮಗುವನ್ನು ಹೋಂಗಾರ್ಡ್ ಕೆಎಸ್ ಸುರೇಶ್ ಎತ್ತಿಕೊಂಡು ಸಂತೈಸಿದ್ದಾರೆ. ಇದರ ವೀಡಿಯೋವನ್ನು ಕೇರಳ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ವೀಡಿಯೋ ನೋಡಿದ ನೆಟ್ಟಿಗರು ಭಾವನಾತ್ಮಕ ಕಾಮೆಂಟ್ ಗಳೊಂದಿಗೆ ಸುರೇಶ್ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.
https://twitter.com/TheKeralaPolice/status/1369301295660736521
ನಡೆದಿದ್ದೇನು..?
ಕಾಯಂಕುಲಂನ ರಾಮಪುರಂನಲ್ಲಿ ಪುಟ್ಟ ಕಂದಮ್ಮ ಹಾಗೂ ಆಕೆಯ ಪೋಷಕರಿದ್ದ ಕಾರು ಅಪಘಾತಕ್ಕೀಡಾಗಿದೆ. ಘಟನೆಯಿಂದ ತಂದೆ-ತಾಯಿ ಗಾಯಗೊಂಡಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತ ಹೆಣ್ಣು ಮಗು ಭಾರೀ ಅವಘಡದಿಂದ ಪಾರಾಗಿದೆ. ಹೆತ್ತವರು ಆಸ್ಪತ್ರೆಗೆ ದಾಖಲಾದ ಮೇಲೆ ಅವರ ಸಂಬಂಧಿಕರು ಬರುವವರೆಗೆ ಸುರೇಶ್ ಅವರು ಹೆಣ್ಣು ಮಗುವನ್ನು ಎತ್ತಿಕೊಂಡು ಸಮಾಧಾನ ಪಡಿಸಿದ್ದಾರೆ.
Big salute police
— sonia Achu (@soniaAchu2) March 10, 2021
ಕೇರಳ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಕಾಯಮಕುಲಂನ ರಾಮಪುರಂನಲ್ಲಿ ಸಂಭವಿಸಿದ ಅಪಘಾತದಲ್ಲಿ ತಾಯಿ ಹಾಗೂ ಸಂಬಂಧಿಕರು ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ ಅಪಘಾತದಿಂದ ಪಾರಾದ ಏಳು ತಿಂಗಳ ಮಗುವನ್ನು ಅದರ ಸಂಬಂಧಿಕರು ಬರುವವರೆಗೂ ಕೆ.ಎಸ್.ಸುರೇಶ್ ನೋಡಿಕೊಂಡರು ಎಂದು ಮಲಯಾಳಂನಲ್ಲಿ ಬರೆದುಕೊಳ್ಳಲಾಗಿದೆ.
Well done
Thank you❤🌹🙏— VVRAMAN (@VVRAMAN9) March 10, 2021
ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸುಮಾರು 2 ಸಾವಿರ ಬಾರಿ ವೀಕ್ಷಣೆಯಾಗಿದೆ. ಹೋಂಗಾರ್ಡ್ ಕಾರ್ಯಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Leave a Reply