ಅನಾರೋಗ್ಯದಿಂದ ಮಕ್ಕಳು ನರಳಾಟ- ತಳ್ಳುವ ಗಾಡಿಯಲ್ಲೇ ಆಸ್ಪತ್ರೆಗೆ ಸೇರಿಸಿದ ದಂಪತಿ

ಬೀದರ್: ಕೊರೊನಾ ನಿಯಂತ್ರಣಕ್ಕೆ ಜಾರಿಗೊಳಿಸಿದ ಲಾಕ್‍ಡೌನ್‍ನಿಂದಾಗಿ ಆಸ್ಪತ್ರೆಗೆ ಹೋಗಲು ವಾಹನಗಳು ಸಿಗದಂತಾಗಿದೆ. ಹೀಗಾಗಿ ದಂಪತಿ ತಳ್ಳುವ ಗಾಡಿಯಲ್ಲೇ ಮಕ್ಕಳನ್ನು ಕುರಿಸಿಕೊಂಡು ಆಸ್ಪತ್ರೆಗೆ ಸೇರಿಸಿರುವ ಮನಕಲಕುವ ಘಟನೆ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ನಡೆದಿದೆ.

ನಗರದ ತ್ರೀಪುರಾಂತದ ದಂಪತಿಯ ಇಬ್ಬರು ಮಕ್ಕಳಿಗೆ ಅನಾರೋಗ್ಯ ಉಂಟಾಗಿದ್ದು, ತಳ್ಳುವ ಗಾಡಿಯಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಆಟೋದಲ್ಲಿಯೂ ಕರೆದುಕೊಂಡು ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಿ.ಮೀ.ಗಟ್ಟಲೇ ತಳ್ಳುಗಾಡಿಯಲ್ಲಿಯೇ ತಮ್ಮ ಮಕ್ಕಳ್ಳನ್ನು ಆಸ್ಪತ್ರೆಗೆ ತೆಗೆದುಕೊಂಡು ತೆರಳಿದ್ದಾರೆ.

ಯಾವುದೇ ವಾಹನದ ಸೌಲಭ್ಯ ಸಿಗದ ಕಾರಣ ಮಕ್ಕಳನ್ನು ತಳ್ಳುವ ಗಾಡಿ ಮೇಲೆ ಕೂರಿಸಿಕೊಂಡು ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ 2ನೇ ಅಲೆ ಹಿನ್ನೆಲೆ ರಾಜ್ಯ ಸರ್ಕಾರ ಮೇ 24ರವರೆಗೆ ಜಾರಿಗೊಳಿಸಿರುವ ಬಿಗುವಿನ ಲಾಕ್‍ಡೌನ್‍ನಿಂದ ಎಲ್ಲ ಸಾರಿಗೆ ಸೇವೆ ಬಂದ್ ಆಗಿದ್ದು, ಇದು ರಾಜ್ಯದಲ್ಲಿ ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ.

Comments

Leave a Reply

Your email address will not be published. Required fields are marked *