ಅಧಿಕಾರ ಸ್ವೀಕರಿಸಿದ ಬಳಿಕ ಹಲವು ಸವಾಲುಗಳನ್ನು ಎದುರಿಸಿದ್ದೇನೆ: ಬಿಎಸ್‍ವೈ ಅಳಲು

ಬೆಂಗಳೂರು: ನಾನು ಅಧಿಕಾರ ಸ್ವೀಕರಿಸಿದ ನಂತರ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು ಎಂದು ಸಿಎಂ ಯಡಿಯೂರಪ್ಪ ಅವರು ನಿರ್ಗಮನದ ಕೊನೆಯ ದಿನ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಿಎಂ ಆಗಿ ಎರಡು ವರ್ಷದಲ್ಲಿ ತಾವು ಎದುರಿಸಿದ ಸವಾಲುಗಳನ್ನು ಕುರಿತು ಮಾತನಾಡಿದ ಅವರು, ನಾನು ಅಧಿಕಾರಕ್ಕೆ ಬಂದ ಮೇಲೆ ತುಂಬಾ ಸವಾಲುಗಳನ್ನು ಎದುರಿಸಿದ್ದೇನೆ. ಹಿಂದೆಂದೂ ಕಂಡರಿಯದಂತಹ ಪ್ರಕೃತಿ ವಿಕೋಪ, ಕೊರೊನಾ ಸಾಂಕ್ರಾಮಿಕದಿಂದ ಬದುಕೇ ಅಲ್ಲೋಲ-ಕಲ್ಲೋಲವಾಯಿತು. ಇದೀಗ ಮತ್ತೆ ಪ್ರವಾಹದ ಪರಿಸ್ಥಿತಿ ಎದುರಾಗಿರುವುದರಿಂದ ನಿನ್ನೆಯಷ್ಟೇ ಶಿವಮೊಗ್ಗ ಸೇರಿದಂತೆ 8 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ವೀಡಿಯೋ ಸಂವಾದ ನಡೆಸಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಈ ಭಾಗದ ಜನರ ಆರ್ಥಿಕತೆಯ ಮೂಲಕ ಸೌಕರ್ಯಗಳನ್ನು ಉನ್ನತೀಕರಿಸಲು ಎಲ್ಲಾ ಕ್ರಮಗಳನ್ನು ಕೈಗೊಂಡ ತೃಪ್ತಿ ನನ್ನದು. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿ ಸವಾಲನ್ನು ಎದುರಿಸಲು ಬೆಂಬಲಿಸಿದ ಜನತೆಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಇದೇ ವೇಳೆ ಸಿಎಂ ಸಲ್ಲಿಸಿದರು. ಶಿವಮೊಗ್ಗ ಅಭಿವೃದ್ಧಿ ಪರ್ವ ಹೀಗೆ ಮುಂದುವರಿಯಲಿ ಎಂಬ ವಿಶ್ವಾಸ ನನಗಿದೆ ಎಂದರು.  ಇದನ್ನೂ ಓದಿ: ಸಿಎಂ ಆಗಿ ಎರಡು ವರ್ಷ – ಬಿಎಸ್‍ವೈಗೆ ಸುಧಾಕರ್ ಅಭಿನಂದನೆ

 

Comments

Leave a Reply

Your email address will not be published. Required fields are marked *