ಅತ್ಯಾಚಾರಕ್ಕೆ ವಿರೋಧ- 13 ವರ್ಷದ ಬಾಲಕಿಗೆ ಬೆಂಕಿ ಹಚ್ಚಿದ ಮಾಲೀಕ

– ಮನೆ ಕೆಲಸದ ಬಾಲಕಿ ಮೇಲೆ ಮಾಲೀಕ ಅತ್ಯಾಚಾರ

ಹೈದರಾಬಾದ್: ಅತ್ಯಾಚಾರ ವಿರೋಧಿಸಿದ್ದಕ್ಕೆ ಮಾಲೀಕ 13 ವರ್ಷದ ಬಾಲಕಿಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ನಡೆದಿದೆ. ಕಳೆದ ಒಂದು ತಿಂಗಳಿಂದ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಬಾಲಕಿ ಸಾವನ್ನಪ್ಪಿದ್ದಾಳೆ.

ತೆಲಂಗಾಣದ ಖಮ್ಮಮ್ ನಗರದಲ್ಲಿ ಘಟನೆ ನಡೆದಿದ್ದು, ಬುಡಕಟ್ಟು ಜನಾಂಗದ ಬಾಲಕಿ ಮೇಲೆ ಆಕೆಯ ಮಾಲೀಕನೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಒಪ್ಪದ್ದಕ್ಕೆ ಬೆಂಕಿ ಹಚ್ಚಿ ಸಜೀವ ದಹನ ಮಾಡಲು ಯತ್ನಿಸಿದ್ದು, ಬಾಲಕಿಯನ್ನು ಹೈದರಾಬಾದ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದೊಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿ ಬಾಲಕಿ ಸಾವನ್ನಪ್ಪಿದ್ದಾಳೆ.

ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದು, 13 ವರ್ಷದ ಬಾಲಕಿ ತೆಲಂಗಾಣದ ಖಮ್ಮಮ್ ಪಟ್ಟಣದ ಆರೋಪಿಯ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದಳು. ಸೆಪ್ಟೆಂಬರ್ 18ರಂದು ಆರೋಪಿ ಕಿರುಕುಳ ನೀಡಲು ಮುಂದಾಗಿದ್ದು, ಈ ವೇಳೆ ಬಾಲಕಿ ವಿರೋಧಿಸಿದ್ದಾಳೆ. ಆಗ ಆರೋಪಿ ಅವಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಬಾಲಕಿಗೆ ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದವು.

ಸುಟ್ಟಗಾಯಗಳು ಹೆಚ್ಚಾಗಿದ್ದರಿಂದ ಬಾಲಕಿಯನ್ನು ಹೈದರಾಬಾದ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ತೆಲಂಗಾಣ ಪೊಲೀಸರಿಗೆ ಪ್ರಕರಣದ ಕುರಿತು ತಿಳಿದಿದೆ. ಈ ಕುರಿತು ಖಮ್ಮಮ್ ಪೊಲೀಸ್ ಆಯುಕ್ತ ತಫ್ಸೀರ್ ಇಕ್ಬಾಲ್ ಖಚಿತಪಡಿಸಿದ್ದು, ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಬಾಲಕಿ ಸಾವನ್ನಪ್ಪಿದ್ದಾಳೆ. ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‍ಗಳಡಿ ದೂರು ದಾಖಲಾಗಿತ್ತು. ಈಗ ಕೊಲೆ ಮಾಡಿರುವುದಾಗಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಕರಣದ ಕುರಿತು ಅರಿತ ತೆಲಂಗಾಣ ರಾಜ್ಯ ಮಾನವ ಹಕ್ಕುಗಳ ಆಯೋಗ(ಟಿಎಸ್‍ಎಚ್‍ಆರ್‍ಸಿ) ಖಮ್ಮಮ್ ಪೊಲೀಸರಿಗೆ ವರದಿ ನೀಡುವಂತೆ ತಿಳಿಸಿದೆ. ಪ್ರಕರಣ ನಡೆಯುತ್ತಿದ್ದಂತೆ ಪೊಲೀಸರಿಗೆ ತಿಳಿಸದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕುಟುಂಬಸ್ಥರು ಸಹ ನಮಗೆ ಮಾಹಿತಿ ನೀಡಿಲ್ಲ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *