ಅಡುಗೆ ಭಟ್ಟನನ್ನು ತಿಂದು, ಸಾಕು ಪ್ರಾಣಿಗಳ ಮೇಲೂ ಅಟ್ಯಾಕ್ ಮಾಡಿದ್ದ ಚಿರತೆ ಸೆರೆ

– ನರಭಕ್ಷಕನನ್ನು ನೋಡಲು ಮುಗಿಬಿದ್ದ ಜನ

ಕೊಪ್ಪಳ: ಅಡುಗೆ ಭಟ್ಟನನ್ನು ತಿಂದು, ಸಾಕು ಪ್ರಾಣಿಗಳ ಮೇಲೆಯೂ ದಾಳಿ ಮಾಡಿದ್ದ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

ಕೊಪ್ಪಳ ಜಿಲ್ಲೆ ಆನೆಗೊಂದಿ ದುರ್ಗಾದೇವಿ ಬೆಟ್ಟದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ನವೆಂಬರ್ ಐದರಂದು ಗಂಗಾವತಿ ತಾಲೂಕಿನ ಆನೆಗೊಂದಿ ನಿವಾಸಿ ಹುಲಿಗೇಶ್ 22 ಎಂಬ ಅಡುಗೆ ಭಟ್ಟನನ್ನು ಈ ಚಿರತೆ ತಿಂದು ಹಾಕಿತ್ತು. ಇದೀಗ ಹುಲಿಗೇಶ್ ತಿಂದು ಹಾಕಿದ ಸ್ಥಳದಲ್ಲೇ ಚಿರತೆಯನ್ನು ಬೋನಿಗೆ ಬೀಳಿಸಲಾಗಿದೆ.

ಹುಲಿಗೇಶ್ ನನ್ನು ಚಿರತೆ ತಿಂದು ಹಾಕಿದ ಬಳಿಕ ಗಂಗಾವತಿ ತಾಲೂಕಿನ ಜನ ಬೆಚ್ಚಿ ಬಿದ್ದಿದ್ದರು. ಹುಲಿಗೇಶ್ ಬಳಿಕ ನಾಲ್ಕೈದು ಜನರು ಹಾಗೂ ಪ್ರಾಣಿಗಳ ಮೇಲೆ ಕೂಡ ಅಟ್ಯಾಕ್ ಮಾಡಿತ್ತು. ಈ ಹಿನ್ನೆಲಯ್ಲಲಿ ಆನೆಗೊಂದಿ ಭಾಗದ ಜನ ಕಳೆದ ಒಂದೂವರೆ ತಿಂಗಳಿಂದ ಚಿರತೆ ಭಯದಲ್ಲಿ ವಾಸ ಮಾಡ್ತಿದ್ದರು. ಇದೀಗ ಕೊನೆಗೂ ಆನೆಗೊಂದಿಯ ದುರ್ಗಾದೇವಿ ಬೆಟ್ಟದಲ್ಲಿ ಚುರತೆ ಸರೆಯಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *