ಅಗತ್ಯಕ್ಕಿಂತ 4 ಪಟ್ಟು ಆಕ್ಸಿಜನ್‍ಗೆ ಬೇಡಿಕೆ ಇಟ್ಟಿದ್ದ ದೆಹಲಿ ಸರ್ಕಾರ

– ಸುಪ್ರೀಂ ನೇಮಕ ಮಾಡಿದ ತಂಡದಿಂದ ವರದಿ
– ಬಿಜೆಪಿ, ಆಪ್ ಮಧ್ಯೆ ಆರೋಪ, ಪ್ರತ್ಯಾರೋಪ

ನವದೆಹಲಿ: ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ದೇಶದೆಲ್ಲೆಡೆ ಆಕ್ಸಿಜನ್ ಕೊರತೆಯಾಗಿತ್ತು. ಆದರೆ ಈ ವೇಳೆ ದೆಹಲಿ ಸರ್ಕಾರ ತನ್ನ ಅಗತ್ಯಕ್ಕಿಂತಲೂ 4 ಪಟ್ಟು ಹೆಚ್ಚು ಆಮ್ಲಜನಕಕ್ಕೆ ಬೇಡಿಕೆ ಇಟ್ಟಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು. ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ನೇತೃತ್ವದ ಸುಪ್ರೀಂ ಕೋರ್ಟ್ ನೇಮಕ ಮಾಡಿದ ಆಮ್ಲಜನಕ ಲೆಕ್ಕಪರಿಶೋಧಕ ತಂಡ ಕೋವಿಡ್ ಎರಡನೇ ಅಲೆಯ ಉತ್ತುಂಗದ ಸಮಯಲ್ಲಿ ದೆಹಲಿ ಸರ್ಕಾರವು ತನ್ನ ಆಮ್ಲಜನಕದ ಅಗತ್ಯಗಳನ್ನು ನಾಲ್ಕು ಪಟ್ಟು ಹೆಚ್ಚು ಬೇಡಿಕೆ ಇಟ್ಟಿತ್ತು ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಆರೋಗ್ಯ ಸಚಿವಾಲಯವು ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್‍ನೊಂದಿಗೆ ಈ ವರದಿಯನ್ನು ಸಲ್ಲಿಸಿದ್ದು ಈಗ ಬಿಜೆಪಿ ಮತ್ತು ಆಪ್ ಸರ್ಕಾರದ ಮಧ್ಯೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ವರದಿಯಲ್ಲಿ ಏನಿದೆ?
ದೆಹಲಿಯಲ್ಲಿರುವ ಹಾಸಿಗೆ ಸಾಮರ್ಥ್ಯಕ್ಕೆ ಒಟ್ಟು 289 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿತ್ತು. ಆದರೆ ದೆಹಲಿ ಸರ್ಕಾರ ಒಟ್ಟು 1,140 ಎಂಟಿ ಆಕ್ಸಿಜನ್ ಬೇಡಿಕೆ ಇಟ್ಟಿತ್ತು ಎಂಬ ಅಂಶ ವರದಿಯಲ್ಲಿದೆ. ಇದನ್ನೂ ಓದಿ: ಇಸ್ರೇಲ್ ನೀಡಿದ ಹೈಟೆಕ್ ಆಕ್ಸಿಜನ್ ಕಂಟೇನರ್ ಯಾದಗಿರಿಯಲ್ಲಿ ಕಾರ್ಯಾರಂಭ

ಮೆಡಿಕಲ್ ಆಕ್ಸಿಜನ್‍ಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಅಪ್‍ಲೋಡ್ ಮಾಡಿದ ದತ್ತಾಂಶದಲ್ಲಿ ದೋಷವಿತ್ತು. ಆಕ್ಸಿಜನ್ ಪೊರೈಸುವಂತೆ ಕೋರಿ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆಮ್ಲಜನಕ ದತ್ತಾಂಶ ಸಂಗ್ರಹದಲ್ಲೇ ದೋಷ ಇರುವಾಗ 700 ಎಂಟಿ ಆಕ್ಸಿಜನ್ ಬೇಡಿಕೆಗೆ ಮಾನದಂಡ ಏನು ಎಂದು ಪ್ರಶ್ನಿಸಿದೆ. ಸುಪ್ರೀಂ ಆದೇಶದಂತೆ ದೆಹಲಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ನೀಡಿದ ಹಿನ್ನೆಲೆಯಲ್ಲಿ ಕೊರೊನಾ ಹೆಚ್ಚಿರುವ 12 ರಾಜ್ಯಗಳ ಮೇಲೆ ಆಕ್ಸಿಜನ್ ಪೂರೈಕೆಯ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Comments

Leave a Reply

Your email address will not be published. Required fields are marked *