ಅಂದು ಸೈನಿಕರನ್ನು ಪ್ರಶ್ನಿಸಿದ್ರು, ಈಗ ಲಸಿಕೆಯನ್ನೂ ಪ್ರಶ್ನಿಸುತ್ತಿದ್ದಾರೆ – ಬಿಜೆಪಿ ಟೀಕೆ

ನವದೆಹಲಿ: ಅಂದು ಭಾರತದ ಸೈನಿಕರನ್ನು ಪ್ರಶ್ನಿಸಿದ್ದರು. ಇಂದು ಭಾರತದಲ್ಲಿ ತಯಾರಾದ ಲಸಿಕೆಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಬಿಜೆಪಿ ಕಾಂಗ್ರೆಸ್‌ ನಾಯಕರನ್ನು ಟೀಕಿಸಿದೆ.

ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊವಾಕ್ಸಿನ್ ಲಸಿಕೆಗೆ ಡಿಸಿಜಿಐ ಅನುಮತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಇದನ್ನು ಟೀಕಿಸಿತ್ತು. ಇದೀಗ ಕಾಂಗ್ರೆಸ್‍ನ ಟೀಕೆ ಮಾಡುವ ಮೂಲಕ ಜನರನ್ನು ಭಯಭೀತಗೊಳಿಸಲು ಮುಂದಾಗುತ್ತಿದೆ ಎನ್ನುವ ಮೂಲಕ ಬಿಜೆಪಿ ಮುಖಂಡರು ಈ ಟೀಕೆಗೆ ತಿರುಗೇಟು ನೀಡಿದ್ದಾರೆ.

ಲಸಿಕೆಗೆ ಒಪ್ಪಿಗೆ ಸಿಕ್ಕ ಕೂಡಲೇ ಕಾಂಗ್ರೆಸ್ ನಾಯಕರು ಕಳವಳ ವ್ಯಕ್ತಪಡಿಸಿದ್ದರು. ತಿರುವಂತಪುರಂದ ಸಂಸದ, ಮಾಜಿ ಕೇಂದ್ರ ಮಂತ್ರಿ ಶಶಿ ತರೂರ್ ಅವರು ಕೊವಾಕ್ಸಿನ್ ಇನ್ನೂ 6ನೇ ಹಂತದ ಲಸಿಕೆ ಪ್ರಯೋಗ ಪೂರ್ಣಗೊಳಿಸಿಲ್ಲ . ಅವಧಿಗೂ ಮುನ್ನ ಅನುಮತಿ ನೀಡಿರುವುದು ಅಪಾಯಕಾರಿ ಎಂದು ಹೇಳಿದ್ದದ್ದರು.

ಆನಂದ್‌ ಶರ್ಮಾ ಅವರು,  ಕಡ್ಡಾಯವಾಗಿ ನಿಯಮಗಳು ಮತ್ತು ದತ್ತಾಂಶಗಳನ್ನು ಪರಿಶೀಲನೆಮಾಡಿ ಹೇಗೆ ವಿತರಣೆಗೆ ಅವಕಾಶ ಕೊಡಲಾಗಿದೆ ಎಂದು ವಿವರಿಸುವಂತೆ ಸರ್ಕಾರವನ್ನು ಪ್ರಶ್ನಿಸಿದ್ದರು.

ಕಾಂಗ್ರೆಸ್ ನಾಯಕರ ಆರೋಪಕ್ಕೆ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯಿಸಿ, ಈ ಮೊದಲು ಅವರು ನಮ್ಮ ಸೈನಿಕರ ಶೌರ್ಯವನ್ನು ಪ್ರಶ್ನಿಸಿದರು. ಈಗ ಸ್ವದೇಶಿಯವಾಗಿ ತಯಾರಿಸಿದ 2 ಲಸಿಕೆಗೆ ಡಿಜಿಸಿಐ ಅನುಮೋದನೆ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ ಪ್ರತಿಕ್ರಿಯಿಸಿ, ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಡುತ್ತಿರುವ ಟೀಕೆ ಭಯವನ್ನುಂಟು ಮಾಡಿರುವುದು ಇದು ಮೊದಲ ಬಾರಿ ಅಲ್ಲ. ಈ ಹಿಂದೆ ಪೋಲಿಯೋ ಲಸಿಕೆ ನೀಡುವಾಗ ಪ್ರಶ್ನೆ ಮಾಡಿದ್ದರು. ಪೋಲಿಯೋದಂತೆ ಸಾಮಾನ್ಯ ರೋಗವಲ್ಲ ಇದೂ ಮಾರಕ ರೋಗ. ಈ ರೋಗ ಬಂದು ಹೆಚ್ಚಿನ ಜನ ಸಾಯಲಿ ಎಂಬುದು ಪ್ರತಿಪಕ್ಷಗಳ ಬಯಕೆ ಇದ್ದಂತಿದೆ ಎಂದು ಕಾಂಗ್ರೆಸ್‍ನ ಟೀಕೆಗೆ ತಿರುಗೇಟು ನೀಡಿದರು.

 

Comments

Leave a Reply

Your email address will not be published. Required fields are marked *